ಈಗಿನ ಸುದ್ದಿ

ಅಸಾರಾಂ ಬಾಪುಗೆ ಭಾರಿ ಭದ್ರತೆಯ ಅಗತ್ಯವಿಲ್ಲ: ಸುಪ್ರೀಂ

ಅಸಾರಾಂ ಬಾಪುಗೆ ಭಾರಿ ಭದ್ರತೆಯ ಅಗತ್ಯವಿಲ್ಲ: ಸುಪ್ರೀಂ
Published On :

ನವದೆಹಲಿ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಬಂಧಿತನಾಗಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರಿಗೆ ಅನಗತ್ಯವಾಗಿ ವಿಶೇಷ ಭದ್ರತೆ ನೀಡುತ್ತಿರುವುದಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ಕಿಡಿಕಾರಿದೆ.

ಆರೋಪಿ ಅಸಾರಾಂ ಬಾಪುಗೆ ವಿಶೇಷ ಭದ್ರತೆ ನೀಡುತ್ತಿರುವುದನ್ನು ಮಾಧ್ಯಮಗಳಲ್ಲಿ ವೀಕ್ಷಿಸಿದ್ದೇವೆ ಎಂದು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಜಿ.ಎಸ್ ಸಿಂಘ್ವಿ ಮತ್ತು ವಿ. ಗೋಪಾಲ ಗೌಡ ಅವರನ್ನೊಳಗೊಂಡ ವಿಭಾಗಿಯ ಪೀಠ ಹೇಳಿದ್ದು, ಅಸಾರಾಂ ಅವರಿಗೆ ಅನಗತ್ಯವಾಗಿ ಭಾರಿ ಭದ್ರತೆ ನೀಡಲಾಗುತ್ತಿದ್ದು, ಅವರಿಗೆ ಭಾರಿ ಭದ್ರತೆ ನೀಡಬಾರದು ಎಂದು ಕೋರ್ಟ್ ಸೂಚಿಸಿದೆ.

ಅಸಾರಾಂ ಬಾಪುಗೆ ವಿಶೇಷ ಭದ್ರತೆ ನೀಡಬಾರದು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೋರ್ಟ್‌ನಲ್ಲಿ ದಾಖಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಬಾಪುಗೆ ಇನ್ನು ಮುಂದೆ ವಿಶೇಷ ಭದ್ರತೆ ನೀಡಬಾರದು ಎಂದು ಆದೇಶಿಸಿದೆ.

ಖಾಸಗಿ ವ್ಯಕ್ತಿಗಳಿಗೆ ಪೊಲೀಸರು ವಿಶೇಷ ಭದ್ರತೆ ನೀಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಆರೋಪಿಯೊಬ್ಬನ ರಕ್ಷಣೆಗೆ ನೂರಾರು ಮಂದಿ ಪೊಲೀಸರು ಕಾರ್ಯನಿರ್ವಹಿಸುತ್ತಿರುವುದಕ್ಕೆ ದಿಗ್ಬ್ರಮೆ ವ್ಯಕ್ತಪಡಿಸಿದ ಕೋರ್ಟ್, ಪೊಲೀಸರ ಈ ಕ್ರಮವನ್ನು ಕಟುವಾಗಿ ಟೀಕಿಸಿದೆ.

ಆರೋಪಿ ವಿಐಪಿಯೆ ಆಗಲಿ ಅವರಿಗೂ ಸಾಮಾನ್ಯ ಆರೋಪಿಗೆ ನೀಡುವ ಭದ್ರತೆ ನೀಡಿದರೆ ಸಾಕು. ವಿಐಪಿ ಎಂದಾಕ್ಷಣ ಅವರಿಗೆ ವಿಶೇಷ ಭದ್ರತೆ ನೀಡಬೇಕೆಂದೆನಿಲ್ಲ. ಆರೋಪಿ ಸ್ಧಾನದಲ್ಲಿರುವ ಖಾಸಗಿ ವ್ಯಕ್ತಿಗಳಿಗೆ ಈ ಮಟ್ಟದ ಭದ್ರತೆಯ ಅಗತ್ಯವಿಲ್ಲ. ಖಾಸಗಿ ವ್ಯಕ್ತಿಗಳಿಗೆ ವಿಶೇಷ ಭದ್ರತೆ ನೀಡುವುದು ಸರಿಯಲ್ಲ ಎಂದು ಸುಪ್ರೀಂ ಅಭಿಪ್ರಾಯ ಪಟ್ಟಿದೆ.

ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧಿತನಾಗಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುರನ್ನು ನಿನ್ನೆ ಕೋರ್ಟ್‌ಗೆ ಹಾಜರು ಪಡಿಸುವ ಸಂದರ್ಭದಲ್ಲಿ ಆತನ ಭದ್ರತೆಗೆ ನೂರಾರು ಮಂದಿ ಪೊಲೀಸರು ಕಾರ್ಯನಿರ್ವಹಿಸಿದ್ದಕ್ಕೆ ಸುಪ್ರೀಂ ಕಿಡಿಕಾರಿದೆ.

72 ವರ್ಷದ ಅಸಾರಾಂ ವಿರುದ್ಧ 16 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ವಿವಾದಿತ ದೇವಮಾನವನ್ನು 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.