ಈಗಿನ ಸುದ್ದಿ

ವಂಝಾರ ರಾಜಿನಾಮೆ ಅಂಗೀಕಾರ ಇಲ್ಲ

ವಂಝಾರ ರಾಜಿನಾಮೆ ಅಂಗೀಕಾರ ಇಲ್ಲ
Published On :

ಅಹಮದಾಬಾದ್: ನಕಲಿ ಎನ್‌ಕೌಂಟರ್ ಪ್ರಕರಣಗಳ ಆರೋಪದ ಮೇಲೆ ಜೈಲು ಸೇರಿರುವ ಗುಜರಾತ್‌ನ ವಿವಾದಾತ್ಮಕ ಹಿರಿಯ ಪೊಲೀಸ್ ಅಧಿಕಾರಿ ಡಿ.ಜಿ ವಂಝಾರ ಅವರು ತಮ್ಮ ಐಪಿಎಸ್ ಹುದ್ದೆಗೆ ನೀಡಿದ್ದ ರಾಜಿನಾಮೆಯನ್ನು ಗುಜರಾತ್ ಸರ್ಕಾರ ಬುಧವಾರ ತಿರಸ್ಕರಿಸಿದೆ.

ನಕಲಿ ಎನ್‌ಕೌಂಟರ್ ಪ್ರಕರಣಗಳ ಕಾರಣದಿಂದಾಗಿ 2007ರಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ ಡಿ.ಜಿ ವಂಝಾರ ಅವರು ತಮ್ಮ ಐಪಿಎಸ್ ಹುದ್ದೆಗೆ ಮಂಗಳವಾರ ರಾಜಿನಾಮೆಯನ್ನು ನೀಡಿದ್ದರು. ಆದರೆ ವಂಝಾರ ಅವರ ರಾಜಿನಾಮೆಯನ್ನು ಮುಖ್ಯಮಂತ್ರಿ ನರೇಂದ್ರ ಮೋದಿ ಸರ್ಕಾರ ತಿರಸ್ಕರಿಸಿದೆ.

ಮೂರು ನಕಲಿ ಎನ್‌ಕೌಂಟರ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ಏಳು ವರ್ಷಗಳಿಂದ ಜೈಲಿನಲ್ಲಿರುವ ವಂಝಾರ, ಮೋದಿ ಸರ್ಕಾರದ ವರ್ತನೆಗೆ ಬೇಸತ್ತು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದರು.

ಸಬರ್ಮತಿ ಜೈಲಿನಿಂದಲೇ ರಾಜ್ಯ ಗೃಹ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ 10 ಪುಟಗಳ ರಾಜಿನಾಮೆ ಪತ್ರ ಬರೆದಿದ್ದು, ನಕಲಿ ಎನ್‌ಕೌಂಟರ್‌ಗಳು ಹಾಗೂ ಅದರಲ್ಲಿ ಭಾಗವಹಿಸಿದ್ದ ತನ್ನಂತ ನಿಷ್ಠಾವಂತರನ್ನು ಜೈಲಿಗಟ್ಟುವ ಮೂಲಕ ನರೇಂದ್ರ ಮೋದಿ ಅವರ ತಮ್ಮ ರಾಜಕೀಯ ವರ್ಚಸ್ಸು ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ದೂರಿದ್ದರು. ಅಲ್ಲದೆ ನಕಲಿ ಎನ್‌ಕೌಂಟರ್‌ಗಳು ಗೃಹ ಸಚಿವ ಅಮಿತ್ ಶಾ ಅಣತಿಯಂತೆ ನಡೆಯುತ್ತಿತ್ತು ಎಂದು ಬರೆದಿದ್ದರು.

2004ರ ಇಶ್ರತ್ ಜಹಾನ್ ಎನ್‌ಕೌಂಟರ್, 2005ರ ಸೋಹ್ರಾಬುದ್ದೀನ್ ಶೇಕ್ ಎನ್‌ಕೌಂಟರ್ ಹಾಗೂ 2006ರ ತುಳಿಸಿರಾಮ್ ಪ್ರಜಾಪತಿ ಎನ್‌ಕೌಂಟರ್‌ಗಳಲ್ಲಿ ಪಾತ್ರ ವಹಿಸಿದ್ದ ಆಪಾದನೆ ಮೇಲೆ ವಂಝಾರ ಜೈಲು ಸೇರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.