ಈಗಿನ ಸುದ್ದಿ

ವಾರ್ಡನ್ ನೊಂದಿಗೆ ಅಸಾರಾಂ ಬಾಪು ದೈಹಿಕ ಸಂಬಂಧ

ವಾರ್ಡನ್ ನೊಂದಿಗೆ ಅಸಾರಾಂ ಬಾಪು ದೈಹಿಕ ಸಂಬಂಧ
Published On :

ಜೊಧ್ಪುರ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಜೈಲು ಪಾಲಾಗಿರುವ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು, ಮಧ್ಯಪ್ರದೇಶದ ಚಿಂದ್ವಾರ ಗುರುಕುಲದ ಹಾಸ್ಟೆಲ್ ವಾರ್ಡನ್ ಶಿಲ್ಪಿ ಅವರೊಂದಿಗೆ ದೈಹಿಕ ಸಂಬಂಧ ಹೊಂದಿದ್ದರು ಎಂದು ಬಾಪು ಆಪ್ತ ಸಹಾಯಕ ಶಿವ ಹೇಳಿದ್ದಾರೆ.

16 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಅಸಾರಾಂ ಬಾಪು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಅಸಾರಾಂ ಆಪ್ತ ಶಿವ ಸಹ ಈಗ ಪೊಲೀಸ್ ವಶದಲ್ಲಿದ್ದು, ದಿನ ಪತ್ರಿಕೆಯೊಂದರ ವರದಿಯ ಪ್ರಕಾರ, ಅಸಾರಾಂ ಬಾಪು ತಾನು ದೈಹಿಕ ಸಂಬಂಧ ಹೊಂದಿದ್ದ ಶಿಲ್ಪಿಗೆ ಎರಡು ಫ್ಲಾಟ್ ಗಳನ್ನು ಗಿಫ್ಟ್ ನೀಡಿದ್ದಾರೆ. ಅದರಲ್ಲಿ ಒಂದು ದೆಹಲಿಯಲ್ಲಿ ಮತ್ತೊಂದು ಅಹಮದಾಬಾದ್ ನಲ್ಲಿದೆ ಎಂದು ಶಿವ ವಿಚಾರಣೆ ವೇಳೆ ಪೊಲೀಸರಿಗೆ ಹೇಳಿದ್ದಾನೆ.

ಶಿಲ್ಪಿ ಅವರೇ ಅಸಾರಾಂ ಬಾಪು ಅವರಿಗೆ ಹಲವು ಹುಡುಗಿಯರನ್ನು ಮತ್ತು ಮಹಿಳೆಯರನ್ನು ಕಳುಹಿಸಿಕೊಡುತ್ತಿದ್ದರು ಎಂಬ ಸಂಗತಿಯನ್ನು ಸಹ ಬಾಪು ಆಪ್ತ ಬಾಯಿ ಬಿಟ್ಟಿದ್ದಾನೆ.

ಅಸಾರಾಂಗೆ ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಕಳುಹಿಸುತ್ತಿದ್ದ ಶಿಲ್ಪಿ ಮತ್ತು ಹಾಸ್ಟೆಲ್ ನ ಪರಿಚಾರಕ ಕೇಶವ್ ಇಬ್ಬರು, ಆ ಬಾಲಕಿಯರನ್ನು ಕೆಲವು ಧಾರ್ಮಿಕ ವಿಧಿ ವಿಧಾನಗಳನ್ನು ಪುರೈಸಲು ಬಾಪು ಅವರ ಬಳಿ ಕರೆದೊಯ್ಯಲಾಗುತ್ತಿದೆ ಎಂದು ಅವರ ಪೋಷಕರಿಗೆ ತಿಳಿಸುತ್ತಿದ್ದರು ಎಂದು ಆಪ್ತ ಹೇಳಿದ್ದಾನೆ.

16 ವರ್ಷದ ಬಾಲಕಿ ಮೇಲೆ ಬಾಪು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ವೇಳೆ ನಾನು ಕೊಣೆಯ ಹೊರಗಡೆ ಇದ್ದೆ ಎಂದು ಆಪ್ತ ಶಿವ ಹೇಳಿಕೆ ನೀಡಿದ್ದಾನೆ. ಆದರೆ ಬಾಲಕಿಯನ್ನು ಕಳುಹಿಸಿಕೊಟ್ಟಿದ್ದ ಶಿಲ್ಪಿ ಈಗ ತಲೆಮರೆಸಿಕೊಂಡಿದ್ದಾಳೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.