ಈಗಿನ ಸುದ್ದಿ

ಕಲ್ಲಿದ್ದಲು ಹಗರಣ ಟಿವಿ ಸೀರಿಯಲ್ ಆಗಿದೆ: ಸುಷ್ಮಾ

ಕಲ್ಲಿದ್ದಲು ಹಗರಣ ಟಿವಿ ಸೀರಿಯಲ್ ಆಗಿದೆ: ಸುಷ್ಮಾ
Published On :

ನವದೆಹಲಿ: ಯುಪಿಎ ಸರ್ಕಾರದ ಕಲ್ಲಿದ್ದಲ್ಲು ಹಗರಣ ಹಲವು ಸಂಚಿಕೆಗಳ ಒಂದು ದೈನಿಕ ಧಾರವಾಹಿ ಸರಣಿಯಾಗಿ ಮಾರ್ಪಟ್ಟಿದೆ ಎಂದು ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಶನಿವಾರ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಷ್ಮಾ ಸ್ವರಾಜ್ ಅವರು, ಕೇಂದ್ರ ಸರ್ಕಾರದ ಕಾರ್ಯವೈಖರಿ ಬಗ್ಗೆ ಕಿಡಿಕಾರಿದರು. ಡಾಲರ್ ಎದುರು ರೂಪಾಯಿ ಮೌಲ್ಯ ಕಳೆದುಕೊಳ್ಳುತ್ತಿದ್ದರೂ, ಸರ್ಕಾರ ಯಾವುದೇ ಕ್ರಮಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಕಾಂಗ್ರೆಸ್ ಸೋತಿದೆ ಎಂದು ಆರೋಪಿಸಿದ್ದಾರೆ.

ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಚೀನಾ ಪದೇ ಪದೇ ತಗಾದೆ ತೆಗೆಯುತ್ತಿದ್ದರೂ ಚೀನಾ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸಾಧ್ಯವಾಗಿಲ್ಲ. ಕೇಂದ್ರದ ವಿದೇಶಾಂಗ ನೀತಿ ದುರ್ಬಲವಾಗಿರುವುದರಿಂದ ಚೀನಾದ ವಿರುದ್ಧ ಯಾವುದೇ ಕ್ರಮ ಜರುಗಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ಅದೇ ವೇಳೆ, ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ತನ್ನ ಅಕ್ರಮಗಳನ್ನು ಮುಚ್ಚಿಡಲು ಯುಪಿಎ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಕಲ್ಲಿದ್ದಲು ಹಗರಣ ಈಗಾಗಲೇ ದೈನಿಕ ಧಾರವಾಹಿಗಳ ನಾಲ್ಕು ಸಂಚಿಕೆಗಳನ್ನಾಗಿ ಗುರುತಿಸಬಹುದಾಗಿದೆ. ಮೊದಲ ಸಂಚಿಕೆಯಲ್ಲಿ ಕಲ್ಲಿದ್ದಲು ಹಗರಣ ಬಹಿರಂಗಗೊಂಡಿತ್ತು. ಎರಡನೇ ಸಂಚಿಕೆಯಲ್ಲಿ ಕೆಲವು ಹೆಸರುಗಳು ಹೊರಗೆ ಬಂದಿತ್ತು. ತದ ನಂತರ ಸಂಚಿಕೆಯಲ್ಲಿ ಪ್ರಕರಣದ ಕುರಿತಂತೆ ಹಲವು ಪ್ರಶ್ನೆಗಳು ಎದ್ದವು, ಆ ನಂತರ ಸಂಚಿಕೆಯಲ್ಲಿ ಫೈಲ್‌ಗಳ ನಾಪತ್ತೆ ಹೀಗೆ ಯುಪಿಎ ಸರ್ಕಾರದ ಕಲ್ಲಿದ್ದಲು ಹಗರಣ ಜನರಿಗೆ ಮನರಂಜನೆಯ ವಸ್ತುವಾಗಿದೆ ಎಂದು ವ್ಯಂಗ್ಯವಾಡಿದರು.

ಜವಾಬ್ದಾರಿಯುತ ಸ್ಥಾನದಲ್ಲಿರುವ ಯುಪಿಎ ಅಕ್ರಮಗಳ ಕೂಪದಲ್ಲಿ ಬಿದ್ದಿದ್ದು, ದೇಶದ ಗಡಿ ವಿಚಾರ ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇದನ್ನು ಗಮನಿಸಿದರೆ ಕೇಂದ್ರ ಸರ್ಕಾರ ಆಡಳಿತ ನಡೆಸುವ ನೈತಿಕತೆ ಕಳೆದುಕೊಂಡಿದೆ ಎಂದು ಸ್ಪಷ್ಟವಾಗುತ್ತದೆ ಎಂದು ದೂರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.