ಈಗಿನ ಸುದ್ದಿ

ಸಿಬಿಐ ಮನವಿ ಮಾಡಿದರೆ, ವಿಚಾರಣೆಗೆ ಪ್ರಧಾನಿ ಲಭ್ಯ: ಕಮಲ್‌ನಾಥ್

ಸಿಬಿಐ ಮನವಿ ಮಾಡಿದರೆ, ವಿಚಾರಣೆಗೆ ಪ್ರಧಾನಿ ಲಭ್ಯ: ಕಮಲ್‌ನಾಥ್
Published On :

ನವದೆಹಲಿ: ಕಲ್ಲಿದ್ದಲು ಹಗರಣ ಸಂಬಂಧ ಸಿಬಿಐ ಔಪಚಾರಿಕವಾಗಿ ಮನವಿ ಮಾಡಿದೆರೆ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ವಿಚಾರಣೆ ಎದುರಿಸಲಿದ್ದಾರೆ ಎಂದು ಕೇಂದ್ರ ಸಚಿವ ಕಮಲ್‌ನಾಥ್ ಅವರು ಭಾನುವಾರ ಹೇಳಿದ್ದಾರೆ.

ಸಿಎನ್‌ಎನ್-ಐಬಿಎನ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಒಂದು ವೇಳೆ ಸಿಬಿಐ ಮನವಿ ಮಾಡಿದರೆ ಪ್ರಧಾನಿ ಅವರು ವಿಚಾರಣೆಗೆ ಲಭ್ಯವಾಗುವರೇ ಎಂಬ ಪ್ರಶ್ನೆಗೆ ಉತ್ತರಿಸಿದ ಕಮಲ್‌ನಾಥ್ ಅವರು, ಯಾಕಿಲ್ಲ? ಕಾನೂನಿನಡಿ ಸಿಬಿಐ ಯಾರನ್ನೂ ಬೇಕಾದರೂ ಪ್ರಶ್ನಿಸಬಹುದು ಮತ್ತು ಪ್ರಧಾನಿಗಳು ಕಾನೂನಿಗಿಂತ ದೊಡ್ಡವರಲ್ಲ. ಅವರೂ ಸಹ ಕಾನೂನಿನ ಒಂದು ಭಾಗ. ಹೀಗಾಗಿ ಸಿಬಿಐ ಬಯಸಿದರೆ ಪ್ರಧಾನಿಯನ್ನು ಪ್ರಶ್ನಿಸಬಹುದು ಎಂದಿದ್ದಾರೆ.

ಕಲ್ಲಿದ್ದಲು ಹಗರಣದ ಕಡತ ನಾಪತ್ತೆಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿಗಳನ್ನು ಬಲವಾಗಿ ಸಮರ್ಥಿಸಿಕೊಂಡ ಕಮಲ್‌ನಾಥ್, ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿಯವರು ಯಾವುದನ್ನು ಮುಚ್ಚಿಟ್ಟಿಲ್ಲ ಮತ್ತು ಬಹಳ ಕಡಿಮೆ ಅವಧಿಗೆ ಅವರು ಕಲ್ಲಿದ್ದಲು ಖಾತೆ ಹೊಂದಿದ್ದರು ಎಂದು ಹೇಳಿದ್ದಾರೆ.

15 ದಿನಗಳ ಹಿಂದೆ ಕೆಲವು ಕಡತಗಳು ಪತ್ತೆಯಾಗಿದ್ದು, ಇನ್ನು ಹಲವು ಕಡತಗಳು ಪತ್ತೆಯಾಗುತ್ತಿವೆ. ಕಡತಗಳು ನಾಪತ್ತೆಯಾಗಿರುವುದರ ಹಿಂದೆ ಯಾವುದೇ ದುರುದ್ದೇಶ ಇಲ್ಲ. ಒಂದು ವೇಳೆ ದುರುದ್ದೇಶ ಇದ್ದಿದ್ದೇಯಾದರೆ ಆ ಬಗ್ಗೆ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.