ಈಗಿನ ಸುದ್ದಿ

ಸಿಎಸ್‌ಕೆ ಮೇಯಪ್ಪನ್ ನಿಯಂತ್ರಣದಲ್ಲಿದೆ: ಮೈಕ್ ಹಸ್ಸಿ

ಸಿಎಸ್‌ಕೆ ಮೇಯಪ್ಪನ್ ನಿಯಂತ್ರಣದಲ್ಲಿದೆ: ಮೈಕ್ ಹಸ್ಸಿ
Published On :

ಚೆನ್ನೈ: ಗುರುನಾಥ್ ಮೇಯಪ್ಪನ್ ಅವರೇ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಿದ್ದಾರೆ ಎಂದು ತಂಡದ ಪ್ರಮುಖ ಆಟಗಾರ ಮೈಕ್ ಹಸ್ಸಿ ಹೇಳಿದ್ದಾರೆ.

ಚೆನ್ನೈ ತಂಡ ನಿಜವಾದ ಮಾಲೀಕರು ಎನ್.ಶ್ರೀನಿವಾಸನ್ ಅವರೇ ಆಗಿದ್ದರೂ ತಂಡದ ಸಂಪೂರ್ಣ ನಿಯಂತ್ರಣ ಗುರುನಾಥ್ ಮೇಯಪ್ಪನ್ ಅವರದ್ದೇ ಎಂಬ ವಿವಾದಿತ ವಿಚಾರವನ್ನು ತಮ್ಮ ಪುಸ್ತಕ "Underneath The Southern Cross'ದಲ್ಲಿ ಬರೆದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಎನ್.ಶ್ರೀನಿವಾಸನ್ ಅವರ ಇಂಡಿಯಾ ಸಿಮೆಂಟ್ಸ್ ಸಂಸ್ಥೆಯ ಮಾಲೀಕತ್ವವಿದ್ದು, ಅವರು ನಾಮನಿಮಿತ್ತ ಮಾಲೀಕರಾಗಿದ್ದಾರೆ. ಆದರೆ ತಂಡದ ಸಂಪೂರ್ಣ ನಿಯಂತ್ರಣವನ್ನು ತಂಡದ ಕೋಚ್ ಕೆಪ್ಲರ್ ವೆಸ್ಸೆಲ್ಸ್ ಮತ್ತು ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಅವರು ನೋಡಿಕೊಳ್ಳುತ್ತಿದ್ದಾರೆ ಎಂದು ಮೈಕ್ ಹಸ್ಸಿ ಹೇಳಿದ್ದಾರೆ.

ಬಿಸಿಸಿಐ ಅಧ್ಯಕ್ಷ ಮತ್ತು ಚೆನ್ನೈ ತಂಡದ ಮಾಲೀಕರಾಗಿರುವ ಎನ್.ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಅವರ ಮೇಲೆ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಗುರುತರ ಆರೋಪವಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಅವರು ಮುಂಬೈ ಪೊಲೀಸರಿಂದ ಕಳೆದ ಮೇ ತಿಂಗಳಿನಲ್ಲಿ ಬಂಧನಕ್ಕೊಳಪಟ್ಟಿದ್ದರು. ಪ್ರಸ್ತುತ ಜಾಮೀನಿನ ಮೇಲೆ ಹೊರ ಬಂದಿರುವ ಗುರುನಾಥ್ ಅವರ ವಿರುದ್ಧ, ಚೆನ್ನೈ ತಂಡದ ಗೌಪ್ಯ ವಿಚಾರಗಳನ್ನು ಬುಕ್ಕಿಗಳೊಂದಿಗೆ ಹಂಚಿಕೊಂಡ ಆರೋಪ ಮತ್ತು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಆರೋಪಗಳಿವೆ.

ಗುರುನಾಥನ್ ಮೇಯಪ್ಪನ್ ಅವರ ಬಂಧನದ ನಂತರ ಅವರನ್ನು ತಂಡದಿಂದ ಹೊರಗಿಡಲಾಗಿದೆ ಎಂದು ಚೆನ್ನೈ ತಂಡದ ಆಡಳಿತ ಮಂಡಳಿ ಹೇಳಿಕೊಳ್ಳುತ್ತಿದ್ದರೂ, ಹಸ್ಸಿ ಹೊರಹಾಕಿರುವ ಈ ಹೊಸ ಮಾಹಿತಿಯಿಂದಾಗಿ ತಂಡದ ಆಡಳಿತ ಮಂಡಳಿ ಮತ್ತೆ ವಿವಾದಕ್ಕೆ ಸಿಲುಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.