ಈಗಿನ ಸುದ್ದಿ

ಅಕ್ರಮ ದೂರವಾಣಿ ಸಂಪರ್ಕ: ಮಾರನ್ ವಿರುದ್ಧ ಸಿಬಿಐ ಎಫ್‌ಐಆರ್

ಅಕ್ರಮ ದೂರವಾಣಿ ಸಂಪರ್ಕ: ಮಾರನ್ ವಿರುದ್ಧ ಸಿಬಿಐ ಎಫ್‌ಐಆರ್
Published On :

ನವದೆಹಲಿ: ತಮ್ಮ ಚೆನ್ನೈ ನಿವಾಸಕ್ಕೆ ಅಕ್ರಮವಾಗಿ ದೂರವಾಣಿ ಸಂಪರ್ಕ ಪಡೆದ ಆರೋಪದ ಮೇಲೆ ಡಿಎಂಕೆ ಮುಖಂಡ ಮತ್ತು ಸಂಸದ ದಯಾನಿಧಿ ಮಾರನ್ ವಿರುದ್ಧ ಸಿಬಿಐ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ.

ಸುಮಾರು 300ಕ್ಕೂ ಅಧಿಕ ಉನ್ನತ ವೇಗದ ದೂರವಾಣಿ ಸಂಪರ್ಕ ಪಡೆದ ಆರೋಪದ ಮೇಲೆ ದಯಾನಿಧಿ ಮಾರನ್ ಮತ್ತು ಇದಕ್ಕೆ ಸಹಕರಿಸಿದ ಬಿಎಸ್‌ಎನ್‌ಎಲ್ ಅಧಿಕಾರಿಗಳ ವಿರುದ್ಧ ಸಿಬಿಐ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ ತಮ್ಮ ಗೃಹೋಪಯೋಗಿ ದೂರವಾಣಿ ಸಂಪರ್ಕವನ್ನು ತಮ್ಮ ಸೋದರ ಸಂಬಂಧಿಗಳ ಮಾಧ್ಯಮ ಸಂಸ್ಥೆಗಳಿಗೆ ವಾಣಿಜ್ಯಾತ್ಮಕ ಬಳಕೆಗಾಗಿ ವಿಸ್ತರಿಸಿದ ಆರೋಪವನ್ನು ಹೊರಿಸಿ ಎಫ್‌ಐಆರ್ ದಾಖಲಿಸಲಾಗಿದೆ.

ಈಗಾಗಲೇ ಸಿಬಿಐ ಅಧಿಕಾರಿಗಳು ಪ್ರಾಥಮಿಕ ತನಿಖೆ ಪೂರ್ಣಗೊಳಿಸಿದ್ದು ಅದರ ಆಧಾರದ ಮೇಲೆ ದಯಾನಿಧಿ ಮಾರನ್ ಮತ್ತು ಬಿಎಸ್‌ಎನ್‌ಎಲ್ ಅಧಿಕಾರಿಗಳಾದ ಸಿಜಿಎಂ ಬ್ರಹ್ಮನಾಥನ್ ಮತ್ತು ಎಂಪಿ ವೇಲುಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

2011ರ ಜುಲೈ ತಿಂಗಳನಲ್ಲಿಯೇ ಮಾರನ್ ವಿರುದ್ಧ ಇಂತಹುದೊಂದು ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು ಇಂದು ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಮೂಲಗಳ ಪ್ರಕಾರ ದಯಾನಿಧಿ ಮಾರನ್ ತಮ್ಮ ವರ್ಚಸ್ಸನ್ನು ಬಳಸಿ, ಟೆಲಿಕಾಂ ಇಲಾಖೆಯ ಮೇಲೆ ತಮ್ಮ ಪ್ರಭಾವ ಬಳಸಿ ಸುಮಾರು 323 ಗೃಹೋಪಯೋಗಿ ಉನ್ನತ ವೇಗದ ದೂರವಾಣಿ ಸಂಪರ್ಕಗಳನ್ನು ಪಡೆದಿದ್ದರು. ಈ ಸಂಪರ್ಕಗಳನ್ನು ತಮ್ಮ ಸಹೋದರ ಸಂಬಂಧಿಗಳ ಒಡೆತನದಲ್ಲಿರುವ ಸನ್ ನೆಟ್ ವರ್ಕ್ ಮಾಧ್ಯಮ ಸಮೂಹಕ್ಕೆ ವಾಣಿಜ್ಯಾತ್ಮಕ ಬಳಕೆಗಾಗಿ ನೀಡಿದ್ದರು ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.