ಈಗಿನ ಸುದ್ದಿ

ಕಪಾಳಮೋಕ್ಷ ಮಾಡಿಲ್ಲ: ನಗ್ಮಾ

ಕಪಾಳಮೋಕ್ಷ ಮಾಡಿಲ್ಲ: ನಗ್ಮಾ
Published On :

ನವದೆಹಲಿ: ನನಗೆ ಯಾರು ಮುತ್ತು ನೀಡಿಲ್ಲ ಹಾಗೆಯೇ ನಾನು ಯಾರಿಗೂ ಹೊಡೆದಿಲ್ಲ ಎಂದು ಮೀರತ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಟಿ ನಗ್ಮಾ ಅವರು ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿಯಲ್ಲಿ ಮಾತನಾಡಿರುವ ನಗ್ಮಾ ಅವರು, ಪ್ರಚಾರದ ವೇಳೆ ಜನರ ನೂಕು ನುಗ್ಗಲು ಸಾಮಾನ್ಯ. ಆದರೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವಂತೆ ನನಗೆ ಮುತ್ತು ನೀಡಲು ಯಾರೂ ಪ್ರಯತ್ನಿಸಿಲ್ಲ. ಅಂತೆಯೇ ನಾನು ಕೂಡ ಯಾರಿಗೂ ಹೊಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

39 ವರ್ಷದ ನಟಿ ನಗ್ಮಾ ಅವರು ಪ್ರಸ್ತುತ ಉತ್ತರ ಪ್ರದೇಶದ ಮೀರತ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಪ್ರಚಾರದ ವೇಳೆಯಲ್ಲಿ ಕೆಲ ಕಾರ್ಯಕರ್ತರು ಅಸಭ್ಯವಾಗಿ ವರ್ತಿಸಿದ್ದರು. ಅಲ್ಲದೆ ಮೀರತ್‌ನಲ್ಲಿ ಚುನವಣಾ ಪ್ರಚಾರ ಕಚೇರಿ ಆರಂಭ ಕಾರ್ಯಕ್ರಮಕ್ಕೆ ತೆರಳಿದ್ದ ನಗ್ಮಾ ಅವರನ್ನು ಸ್ಥಳೀಯ ಶಾಸಕ ಗಜರಾಜ್ ಶರ್ಮಾ ಅವರು ತಬ್ಬಿಕೊಳ್ಳಲು ಮುಂದಾಗಿದ್ದರು. ಇದರಿಂದ ಕುಪಿತಗೊಂಡ ನಗ್ಮಾ ಅವರು ಕಾರ್ಯಕ್ರಮವನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದರು. ನಗ್ಮಾ ಅವರಿಗೆ ಶಾಸಕ ಗಜರಾಜ್ ಶರ್ಮಾ ಅವರು ಮುತ್ತು ನೀಡಲು ಪ್ರಯತ್ನಿಸಿರುವ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

ತಮ್ಮದೇ ಪಕ್ಷದ ಶಾಸಕನ ದುರ್ವತನೆಯಿಂದ ಕೆಂಡಾಮಂಡಲವಾಗಿದ್ದ ಕಾಂಗ್ರೆಸ್ ಹೈಕಮಾಂಡ್ ಶಾಸಕನಿಗೆ ಎಚ್ಚರಿಕೆ ನೀಡಿತ್ತು. ಅಲ್ಲದೆ ಪ್ರಚಾರದಲ್ಲಿ ಪಾಲ್ಗೊಳ್ಳುವ ಜನರನ್ನು ನಿಯಂತ್ರಿಸುವಂತೆ ಮತ್ತು ತಮ್ಮ ಅಭ್ಯರ್ಥಿ ನಗ್ಮಾ ಅವರಿಗೆ ಹೆಚ್ಚಿನ ಭದ್ರತೆ ನೀಡುವಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮನವಿ ಮಾಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.