ಪುತ್ರನಿಂದ ಸಾಲ ಪಡೆದ ಸೋನಿಯಾ!

ರಾಯ್ಬರೇಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಪುತ್ರ ರಾಹುಲ್ಗಾಂಧಿ ಅವರಿಂದಲೇ ಸುಮಾರು 9 ಲಕ್ಷ ರು.ಗಳ ಸಾಲ ಪಡೆದಿದ್ದಾರಂತೆ.
ರಾಯ್ಬರೇಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸೋನಿಯಾ ಗಾಂಧಿ ಅವರು ಇಂದು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ದೇಶದ ಶ್ರೀಮಂತ ಮಹಿಳಾ ರಾಜಕಾರಣಿ ಎಂದು ಬಿಂಬಿಸಲಾಗುತ್ತಿರುವ ಸೋನಿಯಾಗಾಂಧಿ ಅವರ ಒಟ್ಟು ಆಸ್ತಿ ಮೌಲ್ಯ 9 ಕೋಟಿ ರುಪಾಯಿಗಳು. ಈ ಪೈಕಿ ಇಟಲಿಯಲ್ಲಿರುವ ಅವರ ಮನೆ ಪ್ರತ್ಯೇಕವಾಗಿದ್ದು, ಅದರ ಈಗಿನ ಮೌಲ್ಯ 6.7 ಕೋಟಿ.
ಸೋನಿಯಾಗಾಂಧಿ ಅವರ ಚರಾಸ್ತಿ ಮೌಲ್ಯ 2.81 ಕೋಟಿ ಮತ್ತು ಸ್ಥಿರಾಸ್ತಿ ಮೌಲ್ಯ 6.47 ಕೋಟಿ ರುಪಾಯಿಗಳು. 2013 ಮತ್ತು 2014ರ ವಾರ್ಷಿಕ ಆದಾಯ 14.21 ಲಕ್ಷಗಳಾಗಿದ್ದು, ಈ ಪೈಕಿ ತಮ್ಮ ಪುತ್ರನಿಂದ ಅವರು 9 ಲಕ್ಷ ರುಗಳನ್ನು ಸಾಲವಾಗಿ ಪಡೆದಿದ್ದಾರೆ. ಇದಲ್ಲದೆ ಅವರ ಬಳಿ ಪ್ರಸ್ತುತ 85 ಸಾವಿರ ರು. ನಗದು, ವಿವಿಧ ಬ್ಯಾಂಕುಗಳ ಖಾತೆಯಲ್ಲಿ ಒಟ್ಟು 66 ಲಕ್ಷ ರು.ಗಳು ಮತ್ತು 10 ಲಕ್ಷ ರುಪಾಯಿ ಮೌಲ್ಯದ ಬಾಂಡ್ಗಳು ಮತ್ತು 1.90 ಲಕ್ಷ ರು.ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ.
ಸೋನಿಯಾಗಾಂಧಿ ಅವರು ಮ್ಯೂಚುವಲ್ ಫಂಡ್ಸ್ಗಳಲ್ಲಿ 82.20 ಲಕ್ಷ ರು.ಗಳನ್ನು ಹೂಡಿದ್ದು, ರಾಷ್ಟ್ರೀಯ ಉಳಿತಾಯ ಖಾತೆಯಲ್ಲಿ 2.86 ಲಕ್ಷ ರು.ಗಳನ್ನು ತೊಡಗಿಸಿದ್ದಾರೆ. ಇದಲ್ಲದೆ ಅವರ ಬಳಿ 62 ಲಕ್ಷ ಮೌಲ್ಯದ ಚಿನ್ನಾಭಾರಣಗಳಿವೆ. ದಿರಾಮಂಡಿ ಮತ್ತು ಸುಲ್ತಾನ್ಪುರ ಗ್ರಾಮಗಳಲ್ಲಿ ಕ್ರಮವಾಗಿ 4.86 ಮತ್ತು 1.40 ಕೋಟಿ ಮೌಲ್ಯದ ಸೈಟುಗಳಿವೆ ಎಂದು ಸೋನಿಯಾ ಗಾಂಧಿ ಅವರು ಘೋಷಿಸಿಕೊಂಡಿದ್ದಾರೆ.
ಕಳೆದ ಬಾರಿ ಅಂದರೆ 2009ರಲ್ಲಿ ರಾಯ್ಬರೇಲಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವಾಗ ಸೋನಿಯಾಗಾಂಧಿ ಅವರು ತಮ್ಮ ಆಸ್ತಿ ಮೌಲ್ಯ ಒಟ್ಟು 1.37 ಕೋಟಿ ಎಂದು ಘೋಷಿಸಿಕೊಂಡಿದ್ದರು. ಐದು ವರ್ಷಗಳ ಅವಧಿಯಲ್ಲಿ ಅವರ ಆಸ್ತಿ ಸುಮಾರು 8 ಪಟ್ಟು ಅಧಿಕವಾಗಿದ್ದು, 'ಅಧಿಕೃತವಾಗಿ' ಅವರ ಆಸ್ತಿ 9 ಕೋಟಿ ಎಂದು ಸೋನಿಯಾಗಾಂಧಿ ಅವರು ಘೋಷಿಸಿದ್ದಾರೆ.
ಸೋನಿಯಾ 12, 400 ಕೋಟಿ ಮೌಲ್ಯದ ಆಸ್ತಿಯ ಒಡತಿ: ಹಫಿಂಗ್ಟನ್ ಪೋಸ್ಟ್
ಈ ಹಿಂದೆ ವಿಶ್ವದ ಅತ್ಯಂತ ಶ್ರೀಮಂತ ರಾಜಕಾರಣಿಗಳ ಪಟ್ಟಿ ಬಿಡುಗಡೆ ಮಾಡಿದ್ದ ಹಫಿಂಗ್ಟನ್ ಪೋಸ್ಟ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭಾರತದ ಶ್ರೀಮಂತ ಮಹಿಳಾ ರಾಜಕಾರಣಿ ಎಂದು ಹೇಳಿತ್ತು.
ಕಳೆದ ವರ್ಷದ ಡಿಸೆಂಬರ್ 3ರಂದು ಹಫಿಂಗ್ಟನ್ ಪೋಸ್ಟ್ ಬಿಡುಗಡೆ ಮಾಡಿದ್ದ ವರದಿ ಪ್ರಕಾರ, ಸೋನಿಯಾ ಗಾಂಧಿ ಅವರು ಒಟ್ಟು 12, 400 ಕೋಟಿ ಆಸ್ತಿ ಹೊಂದಿದ್ದಾರೆ ಎಂದು ಅದು ಹೇಳಿತ್ತು. ಆದರೆ ಸೋನಿಯಾ ಗಾಂಧಿ ಅವರ ಆದಾಯ ಮೂಲದ ಕುರಿತು ಮಾತ್ರ ಹಫಿಂಗ್ಟನ್ ಪೋಸ್ಟ್ ಮಾಹಿತಿ ನೀಡಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


