ಈಗಿನ ಸುದ್ದಿ

ಸೋನಿಯಾ ವಿರುದ್ಧದ ಹೇಳಿಕೆಗೆ ರಾಮದಾಸ್ ವಿಷಾದ

ಸೋನಿಯಾ ವಿರುದ್ಧದ ಹೇಳಿಕೆಗೆ ರಾಮದಾಸ್ ವಿಷಾದ
Published On :

ಮೈಸೂರು: ಸೋನಿಯಾ ಗಾಂಧಿ ವಿರುದ್ಧದ ತಮ್ಮ ಹೇಳಿಕೆಗೆ ವಿಷಾಧ ವ್ಯಕ್ತಪಡಿಸುವುದಾಗಿ ಮಾಜಿ ಸಚಿವ ರಾಮದಾಸ್ ಹೇಳಿದ್ದಾರೆ.

ಸೋನಿಯಾ ಗಾಂಧಿ ಕುರಿತ ವಿವಾದಾತ್ಮಕ ಹೇಳಿಕೆ ಕುರಿತಂತೆ ವ್ಯಾಪಕ ಚರ್ಚೆ ನಡೆಯುತ್ತಿರುವಾಗಲೇ ಎಚ್ಚೆತ್ತುಕೊಂಡಿರುವ ರಾಮದಾಸ್ ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ನಾನು ಪ್ರಸ್ತಾಪಿಸಿದ್ದು ನನ್ನ ಸ್ವಂತ ಹೇಳಿಕೆಯಲ್ಲ. ಇಟಲಿ ಪತ್ರಿಕೆಯೊಂದರಲ್ಲಿ ಬಂದಿದ್ದ ಸುದ್ದಿಯನ್ನಷ್ಟೇ ನಾನು ಪ್ರಸ್ತಾಪಿಸಿದ್ದೆ. ಪತ್ರಿಕೆಯಲ್ಲಿ ವಿದೇಶಿ ಮಹಿಯಳೆಯಿಂದ ಭಾರತದ ಪರೋಕ್ಷ ಆಡಳಿತ ಎಂಬ ಸುದ್ದಿ ಪ್ರಕಟವಾಗಿತ್ತು. ಇದನ್ನು ನೋಡಿ ಮನಸ್ಸಿಗೆ ತುಂಬಾ ನೋವಾಗಿತ್ತು.

ದೇಶ ಪ್ರೇಮದ ಆವೇಶದಲ್ಲಿ ನಾನು ಮಾತನಾಡಿದ್ದೆ ಅಷ್ಟೇ. ಆದರೆ ನಂತರ ನನ್ನ ತಪ್ಪು ನನಗೆ ಅರಿವಾಯಿತು. ರಾಜಕೀಯದಲ್ಲಿ ವೈಯುಕ್ತಿಕ ಟೀಕೆ ಸರಿಯಲ್ಲ ಎಂದೆನಿಸಿತು. ನಾನು ಯಾರನ್ನೂ ವೈಯುಕ್ತಿಕವಾಗಿ ಟೀಕಿಸಿಲ್ಲ. ದೇಶದಲ್ಲಿ 60 ಕೋಟಿ ಮಹಿಳೆಯರಿದ್ದಾರೆ. ಓರ್ವ ಮಹಿಳೆಯಾಗಿ ಅವರು ಉನ್ನತ ಸ್ಥಾನಕ್ಕೇರಿದ್ದಾರೆ. ಅವರ ಬಗ್ಗೆ ನನಗೆ ಗೌರವವಿದ್ದು, ಅವರ ವಿರುದ್ಧದ ಈ ಹೇಳಿಕೆಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ರಾಮದಾಸ್ ಹೇಳಿದರು. ಅಂತೆಯೇ ತಾವು ನೀತಿ ಸಂಹಿತೆ ಹೆದರಿ ವಿಷಾದ ವ್ಯಕ್ತಪಡಿಸುತ್ತಿಲ್ಲ ಎಂದು ರಾಮದಾಸ್ ಸ್ಪಷ್ಟಪಡಿಸಿದರು.

ಈ ಹಿಂದೆ ಮೈಸೂರಿನಲ್ಲಿ ಮಾತನಾಡಿದ್ದ ರಾಮದಾಸ್ ಅವರು ಸೋನಿಯಾಗಾಂಧಿ ಓರ್ವ ದೇಶದ್ರೋಹಿಯ ಮಗಳಾಗಿದ್ದು, ಅವರ ತಂದೆ ಇಟಲಿ ದೇಶದ ಸೈನಿಕರಾಗಿದ್ದರು. ದೇಶದ ಗೌಪ್ಯ ಮಾಹಿತಿಗಳನ್ನು ಬೇರೆ ದೇಶಗಳಿಗೆ ಮಾರಾಟ ಮಾಡಿ ಸಿಕ್ಕಿಬಿದಿದ್ದರು ಎಂದು ಅವರು ಆರೋಪಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.