ಈಗಿನ ಸುದ್ದಿ

ಲೋಕ ಸಮರ: ಅಸ್ಸಾಂ, ತ್ರಿಪುರಾದಲ್ಲಿ ಬಿರುಸಿನ ಮತದಾನ

ಲೋಕ ಸಮರ: ಅಸ್ಸಾಂ, ತ್ರಿಪುರಾದಲ್ಲಿ ಬಿರುಸಿನ ಮತದಾನ
Published On :

ನವದೆಹಲಿ: ಲೋಕಸಭಾ ಚುನಾವಣೆಯ ಮತದಾನ ಆರಂಭವಾಗಿದ್ದು, ಮೊದಲ ಹಂತದಲ್ಲಿ ಅಸ್ಸಾಂ ಮತ್ತು ತ್ರಿಪುರಾದಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ.

ಇಂದು ಬೆಳಗ್ಗಿನಿಂದಲೇ ಆರಂಭವಾದ ಮತದಾನ 10 ಗಂಟೆಯ ನಂತರ ಬಿರುಸುಗೊಂಡಿದೆ. ಮಧ್ಯಾಹ್ನ 1 ಗಂಟೆಯ ವೇಳೆಗೆ ಶೇ.35ರಷ್ಟು ಮತದಾನವಾಗಿದ್ದು, ಸಂಜೆ ವೇಳೆಗೆ ಈ ಪ್ರಮಾಣ ದುಪ್ಪಾಟ್ಟಗುವ ಸಾಧ್ಯತೆ ಇದೆ. ಅಸ್ಸಾಂ ರಾಜಧಾನಿ ಗುವಾಹತಿಯಲ್ಲಿ ಶೇ.35, ತೇಜ್‌ಪುರ್‌ನಲ್ಲಿ ಶೇ.27, ಜೊರ್ಹಾತ್ ನಲ್ಲಿ ಶೇ.45, ಲಖಿಮ್‌ಪುರ್‌ನಲ್ಲಿ ಶೇ.32, ದಿಬ್ರುಗಡ್‌ನಲ್ಲಿ ಶೇ.38 ಮತ್ತು ಕೊಲಿಯಾಬಾರ್‌ನಲ್ಲಿ ಶೇ.30ರಷ್ಟು ಮತದಾನವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.

ಆಸ್ಸಾಂನಲ್ಲಿ ಒಟ್ಟು 8, 588 ಮತ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಬೆಳಗ್ಗೆ 7 ಗಂಟೆಯಿಂದಲೇ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮತದಾನಕ್ಕೆ ನಕ್ಸಲರ ಬೆದರಿಕೆ ಇರುವ ಹಿನ್ನಲೆಯಲ್ಲಿ ಎಲ್ಲ ಮತ ಕೇಂದ್ರಗಳಿಗೂ ಬಿಗಿ ಭದ್ರತೆ ಒದಗಿಸಲಾಗಿದ್ದು, ರಕ್ಷಣಾ ಪಡೆಗಳು ಮತ್ತು ಸಿಆರ್‌ಪಿಎಫ್ ತುಕಡಿಗಳನ್ನು ನಿಯೋಜಿಸಲಾಗಿದೆ.

ಮುಖ್ಯಮಂತ್ರಿ ತರುಣ್ ಗಗೋಯ್, ಅವರ ಪತ್ನಿ ಡಾಲಿ ಗಗೋಯ್ ಮತ್ತು ತರುಣ್‌ಗಗೋಯ್ ಅವರ ಪುತ್ರ ಮತ್ತು ಕೊಲಿಯಾಬಾರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೌರವ್ ಗಗೋಯ್ ಅವರು ಜೋರ್ಹಾತ್‌ನಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರು ಅಗರ್ತಲಾದಲ್ಲಿ ಮತ ಚಲಾವಣೆ ಮಾಡಿದ್ದಾರೆ.

ಒಟ್ಟು 9 ಹಂತಗಳಲ್ಲಿ ಲೋಕಸಭಾ ಚುನಾವಣೆಯ ಮತದಾನ ನಡೆಯಲಿದ್ದು, ಮೇ 12 ರಂದು ವಾರಣಾಸಿ ಸೇರಿದಂತೆ ಉತ್ತರ ಪ್ರದೇಶದ ಕೆಲವು ಕ್ಷೇತ್ರಗಳಲ್ಲಿ ಕೊನೆಯ ಹಂತದ ಮತದಾನ ನಡೆಯಲಿದೆ. ಮೇ 16ರಂದು ಫಲಿತಾಂಶ ಪ್ರಕಟವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.