ಈಗಿನ ಸುದ್ದಿ

'ಮೋದಿಗಿಂತ ನಾನೇ ಉತ್ತಮ': ಜಯಲಲಿತಾ

'ಮೋದಿಗಿಂತ ನಾನೇ ಉತ್ತಮ': ಜಯಲಲಿತಾ
Published On :

ಚೆನ್ನೈ: ಗುಜರಾತ್ ಮುಖ್ಯಮಂತ್ರಿ ಮತ್ತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗಿಂತ ನಾನೇ ಉತ್ತಮವಾಗಿ ಆಡಳಿತ ನಿರ್ವಹಿಸಿದ್ದೇನೆ ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ.

ಲೋಕಸಭಾ ಚುನಾವಣಾ ಪ್ರಯುಕ್ತ ಇಂದು ನಡೆದ ಅಂತಿಮ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಯಲಲಿತಾ ಅವರು, ವಿರೋಧ ಪಕ್ಷ ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಭ್ರಷ್ಟಾಚಾರ ವಿಚಾರವಾಗಿ ಕಾಂಗ್ರೆಸ್ ನೇತೃತ್ವದ ಯುಪಿಎಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಅಂತೆಯೇ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಜಯಲಲಿತಾ ಅವರು, ಗುಜರಾತ್‌ಗಿಂತಲೂ ತಮಿಳುನಾಡು ಸಾಕಷ್ಟು ವಿಚಾರಗಳಲ್ಲಿ ಮುಂದಿದ್ದು, ಅಭಿವೃದ್ಧಿಯತ್ತ ದಾಪುಗಾಲಿರಿಸಿದೆ. ಈ ಹಿಂದಿನ ಸರ್ಕಾರಗಳಿಗೆ ಅಸಾಧ್ಯವಾಗಿದ್ದ ಕೆಲಸಗಳನ್ನು ಎಐಎಡಿಎಂಕೆ ಸರ್ಕಾರ ಮಾಡಿ ತೋರಿಸಿದೆ. ಈಗ ಹೇಳಿ ಗುಜರಾತ್ ನ ಮೋದಿ ಉತ್ತಮರೋ ಅಥವಾ ತಮಿಳುನಾಡಿನ ಮಹಿಳೆ ಉತ್ತಮಳೋ..? ಎಂದು ಜಯಲಲಿತಾ ಪ್ರಶ್ನಿಸಿದರು.

ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳ ಸುಮಾರು 40 ಲೋಕಸಭಾ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಜಯಲಲಿತಾ ಅವರು ಪ್ರಚಾರ ನಡೆಸಿದ್ದು, ಇಂದು ತಮ್ಮ ಕೊನೆಯ ಪ್ರಚಾರ ಕಾರ್ಯಕ್ರಮದಲ್ಲಿ ಜಯಲಲಿತಾ ಅವರು ಪಾಲ್ಗೊಂಡಿದ್ದರು. ಆ ಮೂಲಕ ಸತತ 51 ದಿನಗಳ ಪ್ರಚಾರ ಕಾರ್ಯಕ್ರಮಕ್ಕೆ ಅವರು ಇಂದು ಅಂತ್ಯ ಹಾಡಿದ್ದಾರೆ. ಇದೇ ತಿಂಗಳ 24ರಂದು ತಮಿಳುನಾಡಿನಲ್ಲಿ ಮತದಾನ ನಡೆಯಲಿದ್ದು, ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.