ಮೋದಿಗೆ ಮತ ನೀಡಬೇಡಿ ಎಂದಿದ್ದ ಪ್ರಿನ್ಸಿಪಲ್ ವಿರುದ್ಧ ಬಿಜೆಪಿ ದೂರು

ಮುಂಬೈ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಮತ ನೀಡಬೇಡಿ ಎಂದು ಮುಂಬೈನ ಪ್ರತಿಷ್ಟಿತ ಸೆಂಟ್ ಕ್ಸೇವಿಯರ್ ಕಾಲೇಜಿನ ಪ್ರಾಂಶುಪಾಲರು ಹೇಳಿದ್ದಾರೆ.
ದೇಶದ ಹಲವು ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಸೆಂಟ್ ಕ್ಸೇವಿಯರ್ ಮುಂಬೈ ಶಾಖೆಯ ಕಾಲೇಜಿನ ಅಧಿಕೃತ ವೆಬ್ಸೈಟಿನಲ್ಲಿ ಕಾಲೇಜು ಪ್ರಾಂಶುಪಾಲರಾದ ಫ್ರೇಜರ್ ಮಸ್ಕರೇನಸ್.ಎಸ್.ಜೆ. ಅವರು ನರೇಂದ್ರ ಮೋದಿ ಅವರಿಗೆ ಮತ ನೀಡದಂತೆ ವಿದ್ಯಾರ್ಥಿಗಳಲ್ಲಿ ಪರೋಕ್ಷ ಮನವಿ ಮಾಡಿದ್ದಾರೆ.
ಗುಜರಾತ್ ಮಾದರಿ ಎಂಬುದು ಕಟ್ಟುಕತೆ ಎಂದು ಹೀಗಳೆದಿರುವ ಪ್ರಾಂಶುಪಾಲರು, ಕೋಮುವಾದಿಗಳಿಗೆ ಅಧಿಕಾರ ನೀಡದಂತೆ ಮನವಿ ಮಾಡಿದ್ದಾರೆ. 'ಗುಜರಾತ್ನಲ್ಲಿ ಅಭಿವೃದ್ಧಿ ಕೆಲಸಗಳಾಗಿರಬಹುದು. ಆದರೆ ದೇಶದ ಇತರೆ ರಾಜ್ಯಗಳು ಇದಕ್ಕಿಂತಲೂ ಹೆಚ್ಚು ಅಭಿವೃದ್ಧಿ ಸಾಧಿಸಿವೆ. ಆದರೆ ಮಾನವ ಅಭಿವೃದ್ಧಿ ಸೂಚ್ಯಂಕ ಮತ್ತು ಜನಸಂಖ್ಯಾ ಸಾಂಸ್ಕೃತಿಕ ಧ್ರುವೀಕರಣಗಳ ಪ್ರಕಾರ ಕಳೆದ 10 ವರ್ಷಗಳಲ್ಲಿ ಗುಜರಾತ್ ಕೆಟ್ಟ ಅನುಭವಗಳನ್ನು ಹೊಂದಿದೆ. ತಮ್ಮ ಸಮೂಹ ಶಿಕ್ಷಣ ಸಂಸ್ಥೆಯ ಅಹ್ಮದಾಬಾದ್ ಶಾಖೆಯ ಕಾಲೇಜು ಕೂಡ ಹೊರತಾಗಿರಲಿಲ್ಲ. ಕಾಲೇಜು ಸ್ವಾಯತತ್ತೆ ಪಡೆಯಲು ಅಲ್ಲಿನ ಸರ್ಕಾರ ತಡೆಯಾಗಿ ನಿಂತಿತ್ತು. ಕೊನೆಗೆ ನ್ಯಾಯಾಲಯದ ಮೊರೆಹೋಗಿ ನಾವು ಅದನ್ನು ಸಾಧಿಸುವಂತಾಯಿತು. ಹೀಗಾಗಿ ಈ ಹಿಂದಿನ ಚುನಾವಣೆಗಳಿಂದ ನಾವು ಪಾಠ ಕಲಿತು ಕೋಮುವಾದಿಗಳ ಕುರಿತು ಸೂಕ್ತ ನಿರ್ಧಾರ ತಳೆಯಬೇಕಿದೆ' ಎಂದು ಪ್ರಾಂಶುಪಾಲರ ಫ್ರೇಜರ್ ಮಸ್ಕರೇನಸ್.ಎಸ್.ಜೆ. ಅವರು ಹೇಳಿದ್ದಾರೆ.
ಅಲ್ಲದೆ ಇದೇ ಲೇಖನದಲ್ಲಿ ಫ್ರೇಜರ್ ಮಸ್ಕರೇನಸ್ ಅವರು, ಯುಪಿಎ ಸರ್ಕಾರದ ಆಹಾರ ಭದ್ರತಾ ಯೋಜನೆ, ಮಾಹಿತಿ ಹಕ್ಕು ಕಾಯಿದೆ, ರೋಜಗಾರ್ ಯೋಜನೆಗಳನ್ನು ಶ್ಲಾಘಿಸುವ ಮೂಲಕ ಕಾಂಗ್ರೆಸ್ಗೆ ಪರೋಕ್ಷ ಬೆಂಬಲ ಸೂಚಿಸಿದ್ದು, ಇಂತಹ ಕಾಯಿದೆಗಳನ್ನು ಚುನಾವಣಾ ಗಿಮಿಕ್ ಎನ್ನುವವರನ್ನು ಪ್ರಾಂಶುಪಾಲರು ವಿರೋಧಿಸಿದ್ದಾರೆ.
ಪ್ರಾಂಶುಪಾಲರ ವಿರುದ್ಧ ಬಿಜೆಪಿ ದೂರು
ಇದೇ ವೇಳೆ ಸೆಂಟ್ ಕ್ಸೇವಿಯರ್ ಕಾಲೇಜಿನ ಪ್ರಾಂಶುಪಾಲರ ಲೇಖನದ ಕುರಿತು ಬಿಜೆಪಿ ಪಕ್ಷ ಚುನವಣಾ ಆಯೋಗಕ್ಕೆ ದೂರು ನೀಡಿದ್ದು, ದೇಶದ ಪ್ರತಿಷ್ಟಿತ ಕಾಲೇಜಿ ಪ್ರಾಂಶುಪಾಲರಾಗಿ ಜನತೆಯನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


