ಈಗಿನ ಸುದ್ದಿ

6ನೇ ಹಂತದ ಮತದಾನ ಮುಕ್ತಾಯ: ಪ.ಬಂಗಾಳದಲ್ಲಿ ಅತಿ ಹೆಚ್ಚು ಮತದಾನ

6ನೇ ಹಂತದ ಮತದಾನ ಮುಕ್ತಾಯ: ಪ.ಬಂಗಾಳದಲ್ಲಿ ಅತಿ ಹೆಚ್ಚು ಮತದಾನ
Published On :

ನವದೆಹಲಿ: ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ 11 ರಾಜ್ಯಗಳಲ್ಲಿ ನಡೆದ ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ಮುಕ್ತಾಯಗೊಂಡಿದೆ.

ಒಟ್ಟು 117 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ನಡೆದ ಮತದಾನವ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನವಾಗಿದೆ. ತಮಿಳುನಾಡು(39 ಸ್ಥಾನ), ಮಹಾರಾಷ್ಟ್ರ (19 ಸ್ಥಾನ), ಉತ್ತರ ಪ್ರದೇಶ (12 ಸ್ಥಾನ), ಬಿಹಾರ (7 ಸ್ಥಾನ), ಅಸ್ಸಾಂ (6 ಸ್ಥಾನ), ಜಾರ್ಖಂಡ್ (4 ಸ್ಥಾನ), ಪಶ್ಚಿಮ ಬಂಗಾಳ (6 ಸ್ಥಾನ), ರಾಜಸ್ತಾನ (5 ಸ್ಥಾನ), ಮಧ್ಯ ಪ್ರದೇಶ (10 ಸ್ಥಾನ) ಮತ್ತು ಕಾಶ್ಮೀರ (1 ಸ್ಥಾನ) ರಾಜ್ಯಗಳಲ್ಲಿ ಇಂದು ಮತದಾನ ಮುಕ್ತಾಯಗೊಂಡಿದೆ.

ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಜನತೆ ತಮ್ಮ ಹಕ್ಕನ್ನು ಚಲಾಯಿಸಿದ್ದು, ತ.ನಾಡಿನಲ್ಲಿ ಶೇ.70 ರಷ್ಟು ಮತ್ತು ಪ.ಬಂಗಾಳದಲ್ಲಿ ಶೇ.83 ರಷ್ಟು ಮತದಾನವಾಗಿದೆ. ಕಾಶ್ಮೀರದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದ್ದು, ಭಯೋತ್ಪಾದಕರ ಗುಂಡಿನ ದಾಳಿಯಿಂದಾಗಿ ಕಾಶ್ಮೀರದಲ್ಲಿ ಕೇವಲ ಶೇ.28ರಷ್ಟು ಮತದಾನವಾಗಿದೆ. ಇನ್ನು ಮುಂಬೈನಗರಿಯಲ್ಲಿ ಅತ್ಯಂತ ಕಡಿಮೆ ಮತದಾನವಾಗಿದ್ದು, ಶೇ.40 ರಷ್ಟು ಮತದಾನವಾಗಿದೆ.

ಇಂದು ಮುಕ್ತಾಯಗೊಂಡ 6ನೇ ಹಂತದ ಮತದಾನದ ಶೇಕಡಾವಾರು ಮತದಾನ ವಿವರ ಇಂತಿದೆ.
ತಮಿಳುನಾಡು: ಶೇ.70
ಮಧ್ಯ ಪ್ರದೇಶ: ಶೇ.59.6
ರಾಜಸ್ತಾನ: ಶೇ.59
ಪಶ್ಚಿಮ ಬಂಗಾಳ: ಶೇ. 83
ಛತ್ತೀಸ್ ಗಡ: ಶೇ.70
ಮಹಾರಾಷ್ಟ್ರ: ಶೇ.60
ಜಾರ್ಖಂಡ್: ಶೇ.63
ಅಸ್ಸಾಂ: ಶೇ.77
ಉತ್ತರ ಪ್ರದೇಶ: ಶೇ.59
ಬಿಹಾರ: ಶೇ.52
ಕಾಶ್ಮೀರ: ಶೇ.28
ಪುದುಚೇರಿ: ಶೇ.82

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.