ರಹಸ್ಯ ಕಾರ್ಯಾಚರಣೆ ಕಾನೂನು ಬಾಹಿರ: 'ಸುಪ್ರೀಂ'

ನವದೆಹಲಿ: ಮಾಧ್ಯಮಗಳು ನಡೆಸುವ ರಹಸ್ಯ ಕುಟುಕು ಕಾರ್ಯಾಚರಣೆಗಳಿಗೆ ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ, ಅವು ಕಾನೂನು ಬಾಹಿರ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ರಹಸ್ಯ ಕಾರ್ಯಾಚರಣೆ ಕುರಿತು ಇಂದು ವಿಚಾರಣೆ ನಡೆಸಿದ ನ್ಯಾ. ಪಿ.ಸದಾಶಿವಂ ಅವರು, ರಹಸ್ಯ ಕಾರ್ಯಾಚರಣೆಗಳು ದುರುಪಯೋಗವಾಗುತ್ತಿರುವುದನ್ನು ನ್ಯಾಯಾಲಯ ಮನಗಂಡಿದೆ. ಹೀಗಾಗಿ ರಹಸ್ಯ ಕಾರ್ಯಾಚರಣೆಗಳಿಗೆ ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕ ಮತ್ತಿತರ ದೇಶಗಳಲ್ಲಿ ರಹಸ್ಯ ಕಾರ್ಯಾಚರಣೆಗೆ ಸೀಮಿತ ಕಾನೂನು ಮಾನ್ಯತೆ ಇದ್ದರೂ, ಭಾರತದಲ್ಲಿ ಇದನ್ನು ಜಾರಿ ಮಾಡಲು ಸಾಧ್ಯವಿಲ್ಲ. ರಹಸ್ಯ ಕಾರ್ಯಾಚರಣೆ ಕುರಿತ ಪ್ರಕರಣಗಳನ್ನು ಕೂಲಂಕುಷವಾಗಿ ಪರಿಶೀಲಿಸುತ್ತಾ ಹೋದರೆ ಕಾರ್ಯಾಚರಣೆಯ ಆರಂಭದಲ್ಲಿನ ಆಶಯ ಕೊನೆಯಲ್ಲಿ ಕಾಣುವುದಿಲ್ಲ. ಇಲ್ಲಿ ಉಪಯೋಗಕ್ಕಿಂತ ದುರುಪಯೋಗವೇ ಹೆಚ್ಚಾಗಿ ಕಂಡುಬರುತ್ತಿದೆ. ಹೀಗಾಗಿ ಕುಚುಕು ಕಾರ್ಯಾಚರಣೆಗೆ ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ನ್ಯಾ.ಪಿ.ಸದಾಶಿವಂ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಕುಟುಕು ಕಾರ್ಯಾಚರಣೆಯಲ್ಲಿ ವ್ಯಕ್ತಿಗೆ ಆಸೆ ತೋರಿಸಿ ಆ ಮೂಲಕ ಅವನು ತಪ್ಪು ಮಾಡುವ ಹಾಗೆ ಮಾಡುವುದು ಸರಿಯಲ್ಲ. ಇಲ್ಲಿ ವ್ಯಕ್ತಿಯ ಅಪರಾಧವನ್ನು ಸಾಬೀತು ಮಾಡುವ ಸದುದ್ದೇಶವಿದ್ದರೂ, ಒಂದು ವೇಳೆ ಈತ ಆಸೆ ತೋರಿಸದೇ ಇದಿದ್ದರೆ ಅಪರಾಧಕ್ಕೆ ಮುಂದಾಗುತ್ತಿರಲಿಲ್ಲವೇನೋ ಎಂಬ ಪ್ರಶ್ನೆ ಮೂಡುತ್ತದೆ. ವ್ಯಕ್ತಿಗೆ ಆಸೆ ತೋರಿಸಿ ಅಪರಾಧ ಎಸಗುವಂತೆ ಮಾಡುವ ಕ್ರಿಯೆ ಕೂಡ ಅಪರಾಧವಾಗುವುದಿಲ್ಲವೇ ಎಂದು ಸದಾಶಿವಂ ಅವರು ಪ್ರಶ್ನಿಸಿದ್ದಾರೆ.
ಒಟ್ಟಾರೆ ಸತ್ಯಾಂಶವನ್ನು ಬಯಲಿಗೆಳೆಯಲು ಮಾಧ್ಯಮಗಳ ಬಳಿ ಇದ್ದ ಕುಟುಕು ಕಾರ್ಯಾಚರಣೆ ಎಂಬ ಅಸ್ತ್ರ ದುರ್ಬಳಕೆಯಾಗುತ್ತಿವುದು ವಿಪರ್ಯಾಸವೇ ಸರಿ...
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


