ದೇಶವನ್ನು ಮುನ್ನಡೆಸಲು ವಿಶಾಲ ಹೃದಯ ಬೇಕು: ಪ್ರಿಯಾಂಕಾ

ನವದೆಹಲಿ: ದೇಶವನ್ನು ಅಭಿವೃದ್ಧಿಯತ್ತ ಮುನ್ನೆಡಸಲು 56 ಇಂಚಿನ ಎದೆ ಬೇಕಿಲ್ಲ, ವಿಶಾಲ ಹೃದಯವಿದ್ದರೆ ಸಾಕು ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ರಾಯ್ಬರೇಲಿಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಪ್ರಿಯಾಂಕಾಗಾಂಧಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇಶವನ್ನು ಮುನ್ನಡೆಸಲು ಅಧಿಕಾರದಲ್ಲಿ ಕ್ರೂರಪಡೆಯ ಅವಶ್ಯಕತೆ ಇಲ್ಲ. ದೇಶವನ್ನು ಮುನ್ನಡೆಸಬೇಕು ಎಂಬ ನೈತಿಕ ಶಕ್ತಿಯೊಂದಿದ್ದರೆ ಸಾಕು. ದೇಶದ ಸಂಸ್ಕೃತಿಯನ್ನು ಸಂರಕ್ಷಿಸಲು ತನ್ನ ಜೀವನವನ್ನಾದರೂ ಅರ್ಪಿಸಲು ಸಿದ್ಧವಿರಬೇಕು ಎಂದು ಪ್ರಿಯಾಂಕಾ ಹೇಳಿದರು.
ನಿನ್ನೆ ಗೋರಕ್ಪುರದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು, ಉತ್ತರ ಪ್ರದೇಶವನ್ನು ಗುಜರಾತ್ ಆಗಿ ಪರಿವರ್ತಿಸಲು 56 ಇಂಚಿನ ಎದೆ ಬೇಕು ಎಂದು ಹೇಳಿದ್ದರು. 'ಗುಜರಾತ್ ಮಾದರಿ ಎಂದರೆ ನಿಮಗೆ ಅರ್ಥ ಗೊತ್ತಿದೆ ಏನು..? 24 ಗಂಟೆ ವಿದ್ಯುತ್, ವರ್ಷಂ ಪ್ರತಿ ವಿದ್ಯುತ್ ಕಡಿತ ವಿಲ್ಲದೇ ಇರುವುದು. ನಿಮ್ಮಿಂದ ಇದು ಸಾಧ್ಯವಿಲ್ಲ. ಉತ್ತರ ಪ್ರದೇಶವನ್ನು ಗುಜರಾತ್ ಆಗಿ ಪರಿವರ್ತಿಸುವ ಧೈರ್ಯ ನಿಮಲ್ಲಿಲ್ಲ' ಎಂದು ಕಿಡಿಕಾರಿದ್ದರು.
ಮೋದಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಎಸ್.ಪಿ.ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು, ಉತ್ತರ ಪ್ರದೇಶವನ್ನು ಗುಜರಾತ್ ಆಗಿ ಪರಿವರ್ತಿಸಲು ಬಿಡುವುದಿಲ್ಲ ಎಂದು ಹೇಳಿದ್ದರು.
ಪ್ರಿಯಾಂಕಾ ಹೇಳಿಕೆಗೆ ಬಿಜೆಪಿ ತಿರುಗೇಟು
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದೆ. ಗುಜರಾತ್ ಮಾದರಿ ಸರಿ ಇಲ್ಲ ಎಂದಾದರೆ ಹರಿಯಾಣ ಮಾದರಿ ಸರಿಯೇ? ಅಥವಾ ವಾದ್ರಾ ಭೂಕಬಳಿಕೆ ಮಾದರಿ ಸರಿಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಸೋನಿಯಾಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ಭೂಕಬಳಿಕೆ ಪ್ರಕರಣ ಕುರಿತು ಸಿಎಜಿ ವರದಿ ನೀಡಿತ್ತು. ಆದರೆ ಕೇಂದ್ರದ ಯುಪಿಎ ಸರ್ಕಾರ ನಿರ್ಲಕ್ಷಿಸಿದ್ದು ಏಕೆ.? ಇದು ಹರಿಯಾಣ ಮಾದರಿಯ ಲೂಟಿಯೇ ಎಂದು ಬಿಜೆಪಿ ಪ್ರಶ್ನಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


