ಮಾನನಷ್ಟ ಪ್ರಕರಣ: ಗಡ್ಕರಿಯನ್ನು ಕ್ಷಮೆಯಾಚಿಸಿದ ತಿವಾರಿ

ನವದೆಹಲಿ: ಆದರ್ಶ ಹೌಸಿಂಗ್ ಸೊಸೈಟಿಯಲ್ಲಿ ಬಿಜೆಪಿ ಹಿರಿಯ ಮುಖಂಡ ನಿತೀನ್ ಗಡ್ಕರಿಯವರು ಬೇನಾಮಿ ಹೆಸರಲ್ಲಿ ಪ್ಲಾಟ್ ಹೊಂದಿದ್ದಾರೆ ಎಂದು ಆರೋಪಿಸಿದ್ದ ಕೇಂದ್ರ ಸಚಿವ ಮನೀಷ್ ತಿವಾರಿಯವರು ಬುಧವಾರ ಕ್ಷಮೆಯಾಚಿಸಿದ್ದು, ಮನೀಷ್ ತಿವಾರಿ ಮೇಲೆ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ಗಡ್ಕರಿಯವರು ಹಿಂಪಡೆದಿದ್ದಾರೆ.
ಗಡ್ಕರಿಯವರನ್ನು ಕ್ಷಮೆಯಾಚಿಸಿ ಮನೀಷ್ ತಿವಾರಿಯವರು ಪತ್ರ ಬರೆದಿದ್ದು, ನಿಮ್ಮ ಮೇಲೆ ಆರೋಪವರಿಸಿದ್ದರಿಂದ ನೀವು ಸಮಾಜದಲ್ಲಿ ಅಪಖ್ಯಾತಿ ಮತ್ತು ಅಹಿತಕರ ಪರಿಸ್ಥಿತಿಯನ್ನು ಎದುರಿಸಬೇಕಾಯಿತು ಎಂದು ಬರೆದಿದ್ದು, ಇದಕ್ಕಾಗಿ ನಾನು ನಿಮ್ಮಲ್ಲಿ ಬೇಷರತ್ತು ಕ್ಷಮೆಯಾಚಿಸುತ್ತಿರುವುದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮನೀಷ್ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಹಿಂಪಡೆದುಕೊಳ್ಳಲಾಗಿದೆ ಎಂದು ಗಡ್ಕರಿ ಪರ ವಕೀಲರಾದ ರಾಮೇಶ್ವರ್ ಗೀತೆ ಅವರು ತಿಳಿಸಿದ್ದಾರೆ.
ಗಡ್ಕರಿಯವರು 2010ರಲ್ಲಿ ಮನೀಷ್ ತಿವಾರಿ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಮುಂಬೈ ಕೋರ್ಟ್ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಮನೀಷ್ ತಿವಾರಿಯವರಿಗೆ ಜಾಮೀನು ಮಂಜೂರು ಮಾಡಿತ್ತು.
ವಿವಾದಾತ್ಮಕ ಆದರ್ಶ ಹೌಸಿಂಗ್ ಸೊಸೈಟಿಯ ಕಟ್ಟಡದಲ್ಲಿ ನಿತೀನ್ ಗಡ್ಕರಿಯವರು ಬೇನಾಮಿ ಹೆಸರಲ್ಲಿ ಪ್ಲಾಟ್ ಹೊಂದಿದ್ದಾರೆ ಎಂದು ಮನೀಷ್ ತಿವಾರಿ ಆರೋಪಿಸಿದ ಹಿನ್ನೆಲೆಯಲ್ಲಿ 2010ರಲ್ಲಿ ಮೆಟ್ರೋಪಾಲಿಟನ್ ಕೋರ್ಟ್‌ನಲ್ಲಿ ಸುಳ್ಳು, ಆಧಾರರಹಿತ ಮತ್ತು ದುರುದ್ದೇಶಪೂರಿತವಾಗಿ ಆರೋಪ ಮಾಡಿದ್ದಾರೆ ಎಂದು ಗಡ್ಕರಿಯವರು ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಹಿನ್ನೆಲೆಯಲ್ಲಿ ಮನೀಷ್ ತಿವಾರಿ ವಿರುದ್ಧ ಐಪಿಸಿ ಸೆಕ್ಷನ್ 499 ಮತ್ತು 500ರ ಅಡಿ ಪ್ರಕರಣ ದಾಖಲಾಗಿತ್ತು.
ಮಹಾರಾಷ್ಟ್ರದ ದಕ್ಷಿಣ ಮುಂಬೈನ ಕೋಲಾಬಾ ಎಂಬಲ್ಲಿ 31 ಅಂತಸ್ಥಿನ ಬಹುಮಹಡಿ ಕಟ್ಟಡವನ್ನು ಆದರ್ಶ ಹೌಸಿಂಗ್ ಸೊಸೈಟಿ ನಿರ್ಮಿಸಿತ್ತು. ಈ ಕಟ್ಟಡದಲ್ಲಿ ಗಡ್ಕರಿಯವರು ತಮ್ಮ ಕಾರು ಚಾಲಕ ಮತ್ತು ಬಿಜೆಪಿ ಮುಖಂಡ ಅಜೇಯ್ ಸಂಜೇಟಿ ಹೆಸರಲ್ಲಿ ಪ್ಲಾಟ್ ಹೊಂದಿದ್ದಾರೆ ಎಂದು ಮನೀಷ್ ಆರೋಪಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


