ಚೆನ್ನೈ ಸೆಂಟ್ರಲ್ ರೇಲ್ವೇ ನಿಲ್ದಾಣದಲ್ಲಿ ಅವಳಿ ಸ್ಫೋಟ; ಮಹಿಳೆ ಸಾವು

ಚೆನ್ನೈ: ಚೆನ್ನೈ ಸೆಂಟ್ರಲ್ ರೇಲ್ವೇ ನಿಲ್ದಾಣದಲ್ಲಿ ಅವಳಿ ಸ್ಫೋಟ ಸಂಭವಿಸಿದ್ದು ಓರ್ವ ಮಹಿಳೆ ಸಾವಿಗೀಡಾಗಿರುವ ಬಗ್ಗೆ ವರದಿಯಾಗಿದೆ.
ಗುರುವಾರ ಬೆಳಗ್ಗೆ 7.15ಕ್ಕೆ ಬೆಂಗಳೂರು-ಗುವಾಹಟಿ (ಖಾಜಿರಂಗ) ಎಕ್ಸ್ಪ್ರೆಸ್- (ರೈಲು ಸಂಖ್ಯೆ 12509) ಪ್ಲಾಟ್ಫಾರಂ ನಂಬರ್ 9ಕ್ಕೆ ತಲುಪಿದ ಕೂಡಲೇ ಎಸ್4 ಮತ್ತು ಎಸ್5 ಬೋಗಿಯ ಸೀಟ್ ನಂಬರ್ 70ರಲ್ಲಿ ಅವಳಿ ಬಾಂಬ್ ಸ್ಫೋಟ ಸಂಭವಿಸಿದೆ.
ಪ್ರಸ್ತುತ ಸ್ಫೋಟದಲ್ಲಿ ಓರ್ವ ಮಹಿಳೆ ಸಾವಿಗೀಡಾಗಿದ್ದು, ಸಾವಿಗೀಡಾದ ಮಹಿಳೆಯನ್ನು ಆಂಧ್ರ ಪ್ರದೇಶದ ಗುಂಟೂರು ನಿವಾಸಿ ಸ್ವಾತಿ (22) ಎಂದು ಗುರುತಿಸಲಾಗಿದೆ. ಸ್ಫೋಟದಲ್ಲಿ ಕನಿಷ್ಠ 10 ಮಂದಿ ಗಾಯಗೊಂಡಿದ್ದು ಗಾಯಾಳುಗಳನ್ನು ರಾಜೀವ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಫೋಟದಲ್ಲಿ ಸಾವಿಗೀಡಾದವರಿಗೆ 1 ಲಕ್ಷ ರು., ತೀವ್ರ ಗಾಯಗೊಂಡವರಿಗೆ 25,000 ರು ಮತ್ತು ಸಣ್ಣ ಪುಟ್ಟ ಗಾಯಗೊಂಡಿರುವ ವ್ಯಕ್ತಿಗಳಿಗೆ ರು.5,000 ರು. ಸಹಾಯಧನವನ್ನು ತಮಿಳ್ನಾಡು ರಾಜ್ಯ ಸರ್ಕಾರ ಘೋಷಿಸಿದೆ.
ಏತನ್ಮಧ್ಯೆ, ರೈಲಿನಲ್ಲಿ ಅಡಗಿಕೊಂಡಿರುವ ಶಂಕಿತ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಸ್ಫೋಟದ ಬಗ್ಗೆ ತನಿಖೆ ಮುಂದುವರಿದಿದೆ.
ಸ್ಫೋಟದ ಹಿನ್ನೆಲೆಯಲ್ಲಿ ಚೆನ್ನೈ ಪೊಲೀಸರು ಸಹಾಯವಾಣಿ ಕೇಂದ್ರ ಆರಂಭಿಸಿದ್ದು ಸಹಾಯವಾಣಿ ಸಂಖ್ಯೆ ಹೀಗಿದೆ.
ಸಹಾಯವಾಣಿ ಸಂಖ್ಯೆ: 044-25357398
ಬೆಂಗಳೂರು ಸಹಾಯವಾಣಿ ಸಂಖ್ಯೆ: 08022356409, 08022156553
ರೇಲ್ವೆ ಕಂಟ್ರೊಲ್ ಸಂಖ್ಯೆ: 08022876288
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


