ಶರಣ ಸಂಗಮ ಕಾರ್ಯಕ್ರಮ ಇಂದು
ಜೇವರ್ಗಿ: ಬಸವಕೇಂದ್ರ ತಾಲೂಕು ಘಟಕದ ವತಿಯಿಂದ ಶರಣ ಸಂಗಮ ಕಾರ್ಯಕ್ರಮವನ್ನು ಮೇ 1ರಂದು ಗುರುವಾರ ಸಾಯಂಕಾಲ 7 ಗಂಟೆಗೆ ಪಟ್ಟಣದ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದೆ.
ಶರಣರು ಮತ್ತು ಕಾಯಕ ಎಂಬ ವಿಷಯವಾಗಿ ಬಸವ ತತ್ವ ಪ್ರಚಾರಕ ಶಂಕ್ರಣ್ಣ ಅಂಗಡಿ ಅನುಭಾವ ನೀಡಲಿದ್ದಾರೆ. ಬಾಗಲಕೋಟೆಯ ಡಾ. ಬಸವಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶರಣಯ್ಯಸ್ವಾಮಿ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಮಜ್ಹರ್ ಹುಸೇನ್ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಗುವುದು ಎಂದು ಬಸವ ಕೇಂದ್ರದ ಅಧ್ಯಕ್ಷ ಶರಣಬಸವ ಕಲ್ಲಾ ತಿಳಿಸಿದ್ದಾರೆ.
ಬಸವೇಶ್ವರರ 881ನೇ ಜಯಂತ್ಯುತ್ಸವ(ಗುಲ್ಬರ್ಗ ವರದಿ): ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ವತಿಯಿಂದ ಮೇ 2ರಂದು ಬೆ.11 ಗಂಟೆಗೆ ರಾಜ್ಯ ಸರ್ಕಾರ ನೌಕರರ ಭವನದಲ್ಲಿ ಬಸವೇಶ್ವರರ 881ನೇ ಜಯಂತ್ಯುತ್ಸವವನ್ನು ಹಮ್ಮಿಕೊಂಡಿದೆ. ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಘಟಕದ ಅಧ್ಯಕ್ಷ ರಾಜು ಲೇಂಗಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕಾರ್ಮಿಕ ದಿನ: ಇಂದು ರ್ಯಾಲಿ
ಗುಲ್ಪರ್ಗ: ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ ನಿಮಿತ್ತ ಮೇ 1ರಂದು ಬೆ.10.30ಕ್ಕೆ ರ್ಯಾಲಿ ನಡೆಸಲು ನಿರ್ಧರಿಸಲಾಗಿದೆ. ನಗರದ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದಿಂದ ವಿದ್ಯಾನಗರದ ಹನುಮಾನ್ ದೇವಸ್ಥಾನದವರೆಗೆ ರ್ಯಾಲಿ ನಡೆಸಿ ನಂತ ಬಹಿರಂಗ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಪ್ರಭುದೇವ ತಿಳಿಸಿದ್ದಾರೆ.
'ಸಾದಾ ಮರಳು ಲಭ್ಯ'
ಗುಲ್ಬರ್ಗ: ಜಿಲ್ಲೆಯ ಜೇವರ್ಗಿ ತಾಲೂಕಿನ ಇಟಗಾ ಹಾಗೂ ಕೊಳಕೂರ ಮತ್ತು ಗುಲ್ಬರ್ಗ ತಾಲೂಕಿನ ನದಿಸಿನ್ನೂರ, ಸೋಮನಾಥನಹಳ್ಳಿಗಳಲ್ಲಿ ಸಾದಾ ಮರಳು ಸಾರ್ವಜನಿಕರ ವಿತರಣೆಗೆ ಲಭ್ಯವಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಅಧ್ಯಕ್ಷರಾದ ಡಾ. ಎನ್.ವಿ. ಪ್ರಸಾದ್ ತಿಳಿಸಿದ್ದಾರೆ. ಬುಧವಾರ ಜರುಗಿದ ಗುಲ್ಬರ್ಗ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯ ತೀರ್ಮಾನದಂತೆ ಸಾದಾ ಮರಳು ಸಾರ್ವಜನಿಕರ ವಿತರಣೆಗೆ ಅವಕಾಶ ಕಲ್ಪಿಸಲಾಗಿದೆ. ನಿಯಮಾನುಸಾರ ನಿಗದಿತ ಶುಲ್ಕ ಪಾವತಿಸಿ ಮರಳನ್ನು ಪಡೆಯಬಹುದಾಗಿದೆ. ಮರಳು ಪಡೆಯಲು ಬೆಳಗಿನ 6ರಿಂದ ಸಂಜೆ 6ರವರೆಗೆ ಸಮಯ ನಿಗದಿಪಡಿಸಲಾಗಿದೆ. ಯಾರಾದರೂ ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಮರಳು ಸಾಗಾಟ ಮಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.
ಅಂಬೇಡ್ಕರ್ ಜಯಂತಿ ಇಂದು
ಗುಲ್ಬರ್ಗ: ಆಳಂದ ರಸ್ತೆಯಲ್ಲಿರುವ ಕರ್ನಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮೇ 1ರಂದು ಬೆ.11 ಗಂಟೆಗೆ ಹಮ್ಮಿಕೊಂಡಿರುವ ಡಾ. ಅಂಬೇಡ್ಕರರ 123ನೇ ಜಯಂತಿ ಕಾರ್ಯಕ್ರಮವನ್ನು ಕರ್ನಾಟಕ ವಿದ್ಯುತ್ ನಿಗಮದ ಮುಖ್ಯ ಎಂಜಿನಿಯರ್ ಶಂಕರ್ ದೇವನೂರ್ ಉದ್ಘಾಟಿಸಲಿದ್ದಾರೆ. ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಚಂದ್ರಕಾಂತ್ ಯಾತನೂರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಕರ್ನಾಟಕ ಕೇಂದ್ರೀಯ ವಿವಿ ಕುಲಪತಿ ಪ್ರೊ. ಎಂಎನ್‌ಎಸ್ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸಿಡಿಲು, ಮಳೆ ಆರ್ಭಟ: 9 ಕುರಿಗಳ ಬಲಿ, ಜನಜೀವನ ಅಸ್ತವ್ಯಸ್ತ
ಸುರಪುರ/ಶಹಾಪುರ: ಮಂಗಳವಾರ ಸಂಜೆ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಎರಡು ಪ್ರತ್ಯೇಕ ಘಟನೆಯಲ್ಲಿ ಸಿಡಿಲಿಗೆ 9 ಕುರಿಗಳು ಬಲಿಯಾಗಿವೆ. ಅನೇಕ ವಿದ್ಯುತ್ ಕಂಬಗಳು, ಮರ ಧರೆಗುರುಳಿದ್ದು, ಮನೆ ಮತ್ತು ಹೋಟೆಲ್‌ಗಳ ಚಾವಣಿಗಳು ಹಾರಿ ಹೋಗಿರುವ ಬಗ್ಗೆ ವರದಿಯಾಗಿದೆ. ಸುರಪುರದ ಅಂಬೇಡ್ಕರ್ ನಗರದಲ್ಲಿ ಯಲ್ಲಮ್ಮ ವಿಜಯಕುಮಾರ ಎಂಬುವರಿಗೆ ಸೇರಿದ ನಾಲ್ಕು ಕುರಿಗಳು, ಶಹಾಪುರ ತಾಲೂಕು ಹೋತಪೇಟೆಯ ಭೀಮಣ್ಣ, ಹೈಯಾಳಪ್ಪ ಅವರಿಗೆ ಸೇರಿದ ಐದು ಕುರಿಗಳು ಮೃತಪಟ್ಟಿವೆ. ಪಶು ವೈದ್ಯಾಧಿಕಾರಿ ಡಾ. ಸುರೇಶ ಅಂಬೇಡ್ಕರ್ ನಗರಕ್ಕೆ ಮಾತ್ರ ಘಟನಾ ಸ್ಥಳಕ್ಕೆ ಭೇಟಿಯಿತ್ತು ಪರಿಶೀಲಿಸಿದರು. ಆದರೆ ಹೋತಪೇಟೆ ಗ್ರಾಮಕ್ಕೆ ಸಂಬಂಧಿತ ಅಧಿಕಾರಿಗಳು ಭೇಟಿ ನೀಡಿ ಜಾನುವಾರು ಹಾನಿ ಪರಿಹಾರ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
14 ತಾಸು ವಿದ್ಯುತ್ ಇಲ್ಲ: ಕೆಲ ಮರಗಳು ಟಿಸಿ ಮೇಲೆ ಬಿದ್ದ ಪರಿಣಾಮವಾಗಿ ಪಟ್ಟಣದಲ್ಲಿ ಸುಮಾರು 14 ತಾಸು ವಿದ್ಯುತ್ ಸ್ಥಗಿತಗೊಂಡಿತ್ತು. ಅದೇ ರಸ್ತೆಯಲ್ಲಿ ಮರವೊಂದು ಬಿದ್ದ ಪರಿಣಾಮವಾಗಿ ಮಲ್ಲಿಬಾವಿ ಗ್ರಾಮದ ರಸ್ತೆ ಸಂಚಾರ ಮಧ್ಯಾಹ್ನದವರೆಗೂ ನಿಂತು ಹೋಗಿತ್ತು. ಐತಿಹಾಸಿಕ ಟೇಲರಸ್ ಮಂಜಿಲ್, ಉಪ ಕಾರಾಗೃಹದ ಬಳಿ ಅನೇಕ ಮರಗಳು ಬಿದ್ದಿವೆ.
24 ಮಿ.ಮೀಟರ್ ಮಳೆ: ಸುರಪುರ ಪಟ್ಟಣದಲ್ಲಿ 24 ಮಿ.ಮೀಟರ್ ಮಳೆಯಾಗಿದೆ. ಯಾವುದೇ ಜೀವಹಾನಿಯಾದ ವರದಿಯಾಗಿಲ್ಲ. ದೇವರಪುರ ಗ್ರಾಮದಲ್ಲಿ ಮಹಿಳೆಯರಿಗೆ ಸಿಡಿಲು ಬಡಿದಿದೆ ಎನ್ನಲಾಗುತ್ತಿದ್ದರೂ ಅಧಿಕೃತವಾಗಿ ಖಚಿತವಾಗಿಲ್ಲ. ಮಳೆಯಿಂದ ವಿದ್ಯುತ್ ಸಮಸ್ಯೆಯಾಗಿದೆ ಎಂದು ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ ಪತ್ರಿಕೆಗೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

