ಈಗಿನ ಸುದ್ದಿ

ಮುಜಾಫರನಗರ ಕೋಮು ಗಲಭೆ: ಇಬ್ಬರು ಆರೋಪಿಗಳ ಶರಣಾಗತಿ

Published On :

ಮುಜಾಫರನಗರ: ಉತ್ತರ ಪ್ರದೇಶದ ಮುಜಾಫರನಗರದಲ್ಲಿ ನಡೆದಿದ್ದ ಕೋಮು ಗಲಭೆಗೆ ಕಾರಣಕರ್ತರೆನ್ನಲಾಗುತ್ತಿರುವ ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಬುಧವಾರ ಶರಣಾಗಿದ್ದಾರೆ.

ಅನುರಾಗ್ ಬನ್ಸಾಲ್ ಮತ್ತು ಸುದೀಪ್ ತ್ಯಾಗಿ ಎಂಬ ಇಬ್ಬರು ಆರೋಪಿಗಳು ಇಂದು ಮುಜಾಫರನಗರದ ಸ್ಥಳೀಯ ನ್ಯಾಯಾಲದಲ್ಲಿ ಶರಣಾಗಿದ್ದು, ಇಬ್ಬರನ್ನು 14 ದಿನಗಳವರೆಗೆ ನ್ಯಾಯಾಲಯ ನ್ಯಾಯಾಂಗ ವಶಕ್ಕೆ ನೀಡಿದೆ. ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾ.ನರೇಂದ್ರ ಕುಮಾರ್ ಅವರು ಇಬ್ಬರು ಆರೋಪಿಗಳನ್ನು ಫೆಬ್ರವರಿ 17ರ ವರೆಗೆ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ಕೋಮು ಹಿಂಸಾಚಾರದ ವೇಳೆ ಅನುರಾಗ್ ಬನ್ಸಾಲ್ ಮತ್ತು ಸುದೀಪ್ ತ್ಯಾಗಿ ಮನೆಗಳಿಗೆ ಬೆಂಕಿ ಹಚ್ಚಿ, ಆಸ್ತಿಪಾಸ್ತಿಗಳನ್ನು ಹಾಳು ಮಾಡಿರುವುದಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದಿದ್ದ ಕೋಮು ಗಲಭೆಯಲ್ಲಿ ಸುಮಾರು 60 ಮಂದಿ ಸಾವಿಗೀಡಾಗಿ 40 ಸಾವಿರಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದರು. ಪ್ರಕರಣ ಸಂಬಂಧ ಸುಮಾರು 23 ಮಂದಿಯ ವಿರುದ್ಧ ಕೊಲೆ, ಕೊಲೆ ಯತ್ನ ಮತ್ತು ಕೋಮು ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಆ 23 ಮಂದಿಯ ಪೈಕಿ ಇಂದು ನ್ಯಾಯಾಲಯಕ್ಕೆ ಶರಣರಾಗಿರುವ ಅನುರಾಗ್ ಬನ್ಸಾಲ್ ಮತ್ತು ಸುದೀಪ್ ತ್ಯಾಗಿ ಕೂಡ ಸೇರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.