ಈಗಿನ ಸುದ್ದಿ

"ಸತ್ಯಾ ನಡೆಲ್ಲಾ" ಮೈಕ್ರೋಸಾಫ್ಟ್ ನೂತನ ಸಾರಥಿ

"ಸತ್ಯಾ ನಡೆಲ್ಲಾ" ಮೈಕ್ರೋಸಾಫ್ಟ್ ನೂತನ ಸಾರಥಿ
Published On :

ನವದೆಹಲಿ: ಐಟಿ ದೈತ್ಯ ಮೈಕ್ರೋಸಾಫ್ಟ್ ಸಂಸ್ಥೆಯ ನೂತನ ಸಿಇಒ ಆಗಿ ಭಾರತೀಯ ಸಂಜಾತ ಸತ್ಯಾ ನಡೆಲ್ಲಾ ಅವರು ನೇಮಕವಾಗಿದ್ದಾರೆ.

ಐಟಿ ಕ್ಷೇತ್ರದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಮೈಕ್ರೋಸಾಫ್ಟ್‌ನ ನೂತನ ಸಿಇಒ ಆಯ್ಕೆ ಗೊಂದಲ ಇದೀಗ ಶಮನಗೊಂಡಿದ್ದು, ಪ್ರಸ್ತುತ ಮೈಕ್ರೋಸಾಫ್ಟ್ ಸಿಇಒ ಸ್ಟೀವ್ ಬಾಲ್ಮರ್ನ್ ಅವರ ಉತ್ತರಾಧಿಕಾರಿಯಾಗಿ ಆಗಿ ಹೈದರಾಬಾದ್ ಮೂಲದ ಸತ್ಯ ನಡೆಲ್ಲಾ ಅವರು ಆಯ್ಕೆಯಾಗಿದ್ದಾರೆ. ನೂತನ ಸಿಇಒ ಆಯ್ಕೆಗಾಗಿ ಇಂದು ಕರೆಯಲಾಗಿದ್ದ ಸಭೆಯಲ್ಲಿ ಸತ್ಯಾ ನಡೆಲ್ಲಾ ಅವರನ್ನು ಆಯ್ಕೆ ಮಾಡಲಾಗಿದೆ.

ಇದಕ್ಕೂ ಮೊದಲು ನೂತನ ಸಿಇಒ ಆಯ್ಕೆಗಾಗಿ ಗೂಗಲ್ ಸಂಸ್ಥೆಯ ಆಂಡ್ರಾಯ್ಡ್ ವಿಭಾಗದ ಮುಖ್ಯಸ್ಥ ಸುಂದರ್ ಫಿಚಾಯ್ ಅವರನ್ನು ಮೈಕ್ರೋಸಾಫ್ಟ್ ಸಂಪರ್ಕಿಸಿತ್ತು ಎನ್ನಲಾಗುತ್ತಿತ್ತು. ಭಾರತ ಮೂಲದವರೇ ಆದ ಫಿಚಾಯ್ ಕೂಡ ಈ ಬಗ್ಗೆ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದರು. ಆದರೆ ಇದೀಗ ಮೈಕ್ರೋಸಾಫ್ಟ್ ನೂತನ ಸಿಇಒ ಆಗಿ ಸತ್ಯ ನಡೆಲ್ಲಾ ಅವರನ್ನು ನೇಮಕ ಮಾಡಲಾಗಿದೆ.

ಮೈಕ್ರೋಸಾಫ್ಟ್ ಸಿಇಒ ಆಗಿ ಸತ್ಯಾ ನಡೆಲ್ಲಾ ಅವರ ನೇಮಕವನ್ನು ಸಮರ್ಥಿಸಿಕೊಂಡಿರುವ 'ಟೆಕ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ರೂಟ್ ಬರ್ಗ್ ಅಂಡ್ ಕಂಪನಿ'ಯ ಮ್ಯಾನೇಜಿಂಗ್ ಡೈರೆಕ್ಟರ್ ರಾಜೀವ್ ಚಾಂದ್ ಅವರು, 'ಸತ್ಯಾ ನಡೆಲ್ಲಾ ಅವರು ಈ ಜವಾಬ್ದಾರಿಗೆ ಸೂಕ್ತ ವ್ಯಕ್ತಿಯಾಗಿದ್ದಾರೆ. ಮೈಕ್ರೋಸಾಫ್ಟ್ ಸಂಸ್ಥೆಗೆ ಅವರು ಹೊಸ ಶಕ್ತಿಯಾಗಲಿದ್ದಾರೆ. ಕಂಪ್ಯೂಟರ್ ತಂತ್ರಜ್ಞಾನದಲ್ಲಿ ವಿಶ್ವದ ಶೇ.90ರಷ್ಟು ಮಂದಿ ಮೈಕ್ರೋಸಾಫ್ಟ್ ತಂತ್ರಾಂಶಗಳನ್ನೇ ಬಳಸುತ್ತಿದ್ದು, ಆ ವಿಚಾರದಲ್ಲಿ ಸಂಸ್ಥೆಗೆ ಸರಿಸಾಟಿ ಇಲ್ಲ. ಆದರೆ ಮೊಬೈಲ್ ತಂತ್ರಾಂಶ ವಿಚಾರದಲ್ಲಿ ವಿಶ್ವದ ಶೇ.4ರಷ್ಟು ಜನ ಮಾತ್ರ ವಿಂಡೋಸ್ ಮೊಬೈಲ್ ಗಳನ್ನು ಬಳಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರು ಸಾಕಷ್ಟು ಕಾರ್ಯಗಳನ್ನು ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆ ವಿಶ್ವದ ಐಟಿ ದೈತ್ಯ ಮೈಕ್ರೋಸಾಫ್ಟ್ ನೂತನ ಸಾರಥಿಯಾಗಿ ಸತ್ಯಾ ನಡೆಲ್ಲಾ ಅವರು ಆಯ್ಕೆಯಾಗಿರುವು ಭಾರತೀಯರಿಗೆ ಹೆಮ್ಮೆಯ ಸಂಗತಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.