2ಜಿ ಹಗರಣ: ಕರುಣಾನಿಧಿ ಕುಟುಂಬಕ್ಕೆ 200ಕೋಟಿ ಸಂದಾಯ..!

ನವದೆಹಲಿ: ಬಹುಕೋಟಿ 2ಜಿ ಹಗರಣದಲ್ಲಿ ಕರುಣಾನಿಧಿ ಕುಟುಂಬಕ್ಕೆ 200 ಕೋಟಿ ರುಪಾಯಿ ಅಕ್ರಮವಾಗಿ ಸಂದಾಯವಾಗಿದೆ ಎಂದು 'ಆಪ್' ಮುಖಂಡ ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಶಾಂತ್ ಭೂಷಣ್ ಅವರು, '2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಕರುಣಾನಿಧಿ ಅವರ ಕುಟುಂಬವನ್ನು ರಕ್ಷಿಸಲು ವ್ಯವಸ್ಥಿತ ಪಿತೂರಿ ನಡೆಸಲಾಗುತ್ತಿದ್ದು, ಹಗರಣದ ಬಗ್ಗೆ ಡಿಎಂಕೆ ಮುಖಂಡ ಕರುಣಾನಿಧಿ ಅವರಿಗೆ ಎಲ್ಲವೂ ತಿಳಿದಿದೆ. ಅವರ ಕುಟುಂಬಕ್ಕೆ ಹಗರಣಕ್ಕೆ ಕುರಿತಂತೆ ಸುಮಾರು 200 ಕೋಟಿ ರುಪಾಯಿಗಳು ಸಂದಾಯವಾಗಿದೆ. ಅಲ್ಲದೆ ಹಗರಣ ಸಂಬಂಧ ಕರುಣಾ ನಿಧಿ ಕುಟುಂಬದ ಸದಸ್ಯರು ಮಾತನಾಡಿರುವ ಟೇಪ್ ತಮ್ಮ ಬಳಿ ಇದ್ದು, 'ಆಪ್' ವೆಬ್ ಸೈಟ್ ನಲ್ಲಿ ಇದನ್ನು ಪ್ರಕಟಿಸುವುದಾಗಿ' ಪ್ರಶಾಂತ್ ಭೂಷಣ್ ಹೇಳಿದರು.
'ಅಲ್ಲದೆ ಈ ಹಗರಣದಲ್ಲಿ ತಮಿಳುನಾಡು ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಸ್ಥ ಮತ್ತು ಹಿರಿಯ ಐಪಿಎಸ್ ಅಧಿಕಾರಿ ಜಾಫರ್ ಅವರ ಕೈವಾಡವಿದ್ದು, ಕರುಣಾನಿಧಿ ಕುಟುಂಬದೊಂದಿಗೆ ಅವರು ಆತ್ಮೀಯರಾಗಿದ್ದಾರೆ. 2ಜಿ ಹಗರಣ ಸಂಬಂಧ ನಮ್ಮ ಬಳಿ ಸುಮಾರು 4 ಟೇಪ್ ಗಳಿದ್ದು, ಈ ಆಡಿಯೋ ರೆಕಾರ್ಡ್ ನಲ್ಲಿ ಐಪಿಎಸ್ ಅಧಿಕಾರಿ ಜಾಫರ್ ಮತ್ತು ಕಲೈನರ್ ಟಿವಿ ಮ್ಯಾನೇಜರ್ ಶರತ್ ರೆಡ್ಡಿ, ಜಾಫರ್ ಮತ್ತು ಕರುಣಾನಿಧಿ ಆಪ್ತ ಸಹಾಯಕ ಷಣ್ಮುಖನಾಥನ್, ಕನ್ನಿಮೋಳಿ ಮತ್ತು ಕರುಣಾನಿಧಿ ಅವರ ನಡುವಿನ ಸಂಭಾಷಣೆಗಳಾಗಿವೆ'.
'ಈ ಎಲ್ಲಾ ಸಂಭಾಷಣೆಗಳು 2010ರಿಂದ 2012ರ ವರ್ಷದ ನಡುವಿನ ಸಂಭಾಷಣೆಗಳಾಗಿವೆ. ಈ ಸಂಭಾಷಣೆಗಳಲ್ಲಿ ಜಾಫರ್ ಮತ್ತು ಶರತ್ ರೆಡ್ಡಿ ನಡುವಿನ ಸಂಭಾಷಣೆ ಇಂಗ್ಲೀಷ್ ಭಾಷೆಯಲ್ಲಿದ್ದು, ಉಳಿದವು ತಮಿಳು ಭಾಷೆಯಲ್ಲಿವೆ. ಇವುಗಳೆಲ್ಲವನ್ನೂ ಭಾಷಾಂತರ ಮಾಡಲಾಗುತ್ತಿದೆ. ಹಗರಣ ಸಂಬಂಧ ಎ.ರಾಜಾ ಅವರ ಬಂಧನದ ನಂತರದ ಬೆಳವಣಿಗಳು ಸಂ
ಭಾಷಣೆಗಳಲ್ಲಿ ದಾಖಲಾಗಿವೆ. ಈ ಎಲ್ಲ ಸಂಭಾಷಣೆಗಳಿಂದ ತಿಳಿದು ಬರುವುದೇನೆಂದರೆ ಕರುಣಾನಿಧಿ ಅವರ ಕುಟುಂಬಸ್ಥರ ರಕ್ಷಣೆಗಾಗಿ ವ್ಯವಸ್ಥಿತವಾಗಿ ಪಿತೂರಿ ನಡೆಸಲಾಗುತ್ತಿದೆ. ಹೀಗಾಗಿ ಹಗರಣ ಸಂಬಂಧ ಸೂಕ್ತ ತನಿಕೆಯಾಗಬೇಕು' ಎಂದು ಪ್ರಶಾಂತ್ ಭೂಷಣ್ ಹೇಳಿದರು.
ಕಲೈನರ್ ಟಿವಿ ಸಿಇಒರನ್ನು ಭೇಟಿ ಮಾಡಿದ ಕನ್ನಿಮೋಳಿ
ಅತ್ತ ನವದೆಹಲಿಯಲ್ಲಿ 2ಜಿ ಹಗರಣ ಕುರಿತು ಪ್ರಶಾಂತ್ ಭೂಷಣ್ ಆಡಿಯೋ ಟೇಪ್ಗಳನ್ನು ಬಿಡುಗಡೆ ಮಾಡಿದ್ದರೆ, ಇತ್ತ ತಮಿಳುನಾಡಿನಲ್ಲಿ ಕರುಣಾನಿಧಿ ಪುತ್ರಿ ಕನ್ನಿಮೋಳಿ ಅವರು ಕಲೈನರ್ ವಾಹಿನಿಯ ಸಿಇಒ ಶರದ್ ಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕನ್ನಿಮೋಳಿ ಅವರ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


