ಈಗಿನ ಸುದ್ದಿ

ರಾಜೀವ್ ಹಂತಕರಿಗೆ ಕ್ಷಮೆ ಬೇಡ: ಕೇಂದ್ರ

ರಾಜೀವ್ ಹಂತಕರಿಗೆ ಕ್ಷಮೆ ಬೇಡ: ಕೇಂದ್ರ
Published On :

ನವದಹೆಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರಿಗೆ ಕ್ಷಮೆ ನೀಡುವುದು ಬೇಡ ಎಂದು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ಮನವಿ ಮಾಡಿಕೊಂಡಿದೆ.

ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಜಿ.ಇ.ವಹನ್ವತಿ ಅವರು ಮುಖ್ಯ ನ್ಯಾ.ಪಿ.ಸದಾಶಿವಂ ಮತ್ತು ನ್ಯಾ.ರಂಜನ್ ಗಗೋಯ್ ಮತ್ತು ನ್ಯಾ. ಶಿವಕೀರ್ತಿ ಸಿಂಗ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠಕ್ಕೆ 'ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಕೊಂದ ಕೊಲೆಗಾರರ ಶಿಕ್ಷೆಯನ್ನು ಕಡಿತಗೊಳಿಸುವುದು ಬೇಡ' ಎಂದು ಮಂಗಳವಾರ ಮನವಿ ಸಲ್ಲಿಸಿದ್ದಾರೆ.

'ರಾಜೀವ್ ಗಾಂಧಿ ಹಂತಕರಿಗೆ ತಮ್ಮ ತಪ್ಪಿನ ಕುರಿತು ಯಾವುದೇ ರೀತಿಯ ಪಾಶ್ಚಾತ್ಥಾಪವಿಲ್ಲ. ಅಲ್ಲದೆ ಈ ಎಲ್ಲ ಮೂವರು ಅಪರಾಧಿಗಳಿಗೆ ಜೈಲಲ್ಲಿ ಸಂಗೀತ, ಕಲಾ ಪ್ರದರ್ಶನ ಮತ್ತು ಇತರೆ ಮನರಂಜನಾ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿದ್ದೆವು. ಕಳೆದ 11 ವರ್ಷಗಳಿಂದ ಅವರಿಗೆ ಯಾವುದೇ ರೀತಿಯ ನೋವು ನೀಡದೆ ನೋಡಿಕೊಳ್ಳುತ್ತಿದ್ದು, ಅವರೊಂದಿಗೆ ಅಮಾನವೀಯವಾಗಿ ನಡೆದುಕೊಂಡಿಲ್ಲ. ಹೀಗಾಗಿ ಅವರ ಗಲ್ಲು ಶಿಕ್ಷೆ ರದ್ಧತಿಯನ್ನು ರದ್ದು ಮಾಡಬೇಕು ಎಂದು ವಹನ್ವತಿ ಅವರು ತಮ್ಮ ವಾದವನ್ನು ಮಂಡಿಸಿದರು. ಪ್ರಕರಣ ಸಂಬಂಧ ವಿಚಾರಣೆ ಪೂರ್ಣಗೊಂಡಿದ್ದು, ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿದೆ.

"ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹಂತಕರಿಗೆ ಕ್ಷಮಾದಾನ ಇಲ್ಲ. ಅವರಿಗೆ ಗಲ್ಲು ಶಿಕ್ಷೆಯೇ ಸೂಕ್ತ" ಎಂದು  ಸುಪ್ರೀಂಕೋರ್ಟ್ ಈ ಹಿಂದಿನ ವಿಚಾರಣೆಯಲ್ಲಿ ಅಭಿಪ್ರಾಯಪಟ್ಟಿತ್ತು. ಆಮೂಲಕ ಕ್ಷಮಾದಾನ ನೀಡಬೇಕೆಂದು ಅವರ ಪರ ವಕೀಲರು ಸಲ್ಲಿಸಿರುವ ಅರ್ಜಿಗಳನ್ನು ಕೋರ್ಟ್ ತಿರಸ್ಕರಿಸಿತ್ತು.

 "ಗಲ್ಲುಶಿಕ್ಷೆ ಜಾರಿಗೊಳಿಸುವಲ್ಲಿ ವಿಳಂಬವಾಗಿದೆ ಎಂಬ ಕಾರಣಕ್ಕಾಗಿ ಕರ್ನಾಟಕದ 7 ಮಂದಿ ಸೇರಿ15 ಮಂದಿಯ ಮರಣದಂಡನೆಯನ್ನು ಕೋರ್ಟ್ ಜೀವಾವಧಿಯಾಗಿ ಮಾರ್ಪಡಿಸಿ ಆದೇಶ ನೀಡಿತ್ತು. 'ಅವರಿಗೆ ಗಲ್ಲು ಶಿಕ್ಷೆಯೇ ಸೂಕ್ತ. ಆದರೆ ಅವರು ಇನ್ನು ಎಷ್ಟು ಕಾಲ ಕಾರಾಗೃಹದಲ್ಲಿರಬೇಕು?' ಎಂದು ಮುಖ್ಯ ನ್ಯಾ. ಸದಾಶಿವಂ ಪ್ರಶ್ನಿಸಿದ್ದರು.

ಎಲ್‌ಟಿಟಿಇ ವಿರುದ್ದದ ಕಾರ್ಯಾಚರಣೆಗೆ ಭಾರತದಿಂದ ಶಾಂತಿಪಾಲನಾ ಪಡೆಯನ್ನು ರವಾನಿಸಿದ್ದ ರಾಜೀವ್ ಗಾಂಧಿ ಅವರು ಎಲ್‌ಟಿಟಿಇ ಉಗ್ರ ಸಂಘಟನೆಯ ಕೆಂಗಣ್ಣಿಗೆ ಗುರಿಯಾಗಿದ್ದರು. 1991ರ ಮೇ 21ರಂದು ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ತಮಿಳುನಾಡಿನ ಶ್ರೀಪೆರುಂಬದೂರ್‌ಗೆ ಆಗಮಿಸಿದ್ದ ರಾಜೀವ್ ಅವರನ್ನು ಎಲ್‌ಟಿಟಿಇ ಸಂಘಟನೆಯ ಸದಸ್ಯರು ಮಾನವ ಬಾಂಬ್ ಸಿಡಿಸುವ ಮೂಲಕ ಕೊಂದು ಹಾಕಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.