ಹಿರಿಯ ಗಾಯಕ ಆರ್.ಕೆ ಶ್ರೀ'ಕಂಠ'ನ್ ವಿಧಿವಶ

ಬೆಂಗಳೂರು: ಕರ್ನಾಟಕ ಸಂಗೀತದ ಮೇರು ಗಾಯಕ ಆರ್.ಕೆ. ಶ್ರೀಕಂಠನ್ (ರುದ್ರಪಟ್ಟಣ ಕೃಷ್ಣ ಶಾಸ್ತ್ರಿ ಶ್ರೀಕಂಠನ್) ಸೋಮವಾರ ರಾತ್ರಿ ವಿಧಿವಶರಾಗಿದ್ದಾರೆ.
ಸೋಮವಾರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ಶ್ರೀಕಂಠನ್ ಕೊನೆಯುಸಿರೆಳೆದಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.
1920, ಜನವರಿ 14ರಂದು ಹಾಸನದ ರುದ್ರಪಟ್ಟಣದಲ್ಲಿ ಜನಿಸಿದ ಇವರು ಆಕಾಶವಾಣಿಯಲ್ಲಿ ಪ್ರಥಮಶ್ರೇಣಿ ಕಲಾವಿದರಾಗಿ, ಸಂಗೀತ ಪ್ರಾ.ಯೋಜಕರಾಗಿ ಸುಮಾರು 32 ವರ್ಷ ಅಸಾಮಾನ್ಯ ಸೇವೆ ಸಲ್ಲಿಸಿದ್ದರು.
ಶ್ರೀಕಂಠನ್ ೧೯೪೯ ರಲ್ಲಿ, 'ಬೆಂಗಳೂರು ಆಕಾಶವಾಣಿ'ಯಲ್ಲಿ ವೃತ್ತಿ ಆರಂಭಿಸಿದರು. . 'ಜಿ.ಎನ್.ಬಿ', 'ಶ್ರೀನಿವಾಸ ಅಯ್ಯರ್' ಮೊದಲಾದ ಅಕಾಶವಾಣಿ-ಕಲಾವಿದರೊಡನೆ ಒಡನಾಟದಿಂದ ಅವರ ಸಂಗೀತ ಕಲೆ, ಪಕ್ವವಾಯಿತು. ಹೀಗೆ ಬೆಳೆದ ಆರ್.ಕೆ.ಎಸ್. ಯವರಿಗೆ ಮುಂದೆ, ಪಕ್ಕವಾದ್ಯಗಾರರಾಗಿದ್ದವರು, 'ಪಾಲ್ಘಾಟ್ ಮಣಿ ಅಯ್ಯರ್', 'ಪಳನಿ ಶುಬ್ರಹ್ಮಣ್ಯ ಪಿಳ್ಳೆ', 'ಸಿ. ಎಸ್. ಮುರಗ ಭೂಪತಿ', 'ಲಾಲ್ಗುಡಿ ಜಯರಾಮನ್', 'ಬಿ.ಎನ್.ಕೃಷ್ಣನ್', 'ಎಂ. ಎಸ್. ಗೋಪಾಲಕೃಷ್ಣನ್', ರಂತಹ ಘನವಿದ್ವಾಂಸರುಗಳು. ಸಂಗೀತವೇ ಸರ್ವಸ್ವವೆಂದು ಪರಿಗಣಿಸಿ ಅದರಲ್ಲೇ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದ, ಶ್ರೀಕಂಠನ್ ವರಿಗೆ ತಮಿಳು, ತೆಲುಗು, ಸಂಸ್ಕೃತದಲ್ಲಿ ಅಪಾರ ಜ್ಞಾನವಿತ್ತು. ಕನ್ನಡ ಇಂಗ್ಲೀಷ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತಾಡಬಲ್ಲವರಾಗಿದ್ದರು; ಬರೆಯಬಲ್ಲವರಾಗಿದ್ದರು. ಅವರು ನಡೆಸಿಕೊಡುತ್ತಿದ್ದ, 'ಸಂಗೀತ ಶಿಬಿರ ಕಾರ್ಯಕ್ರಮ'ಗಳು ಇಂದಿಗೂ ಪ್ರಸ್ತುತವಾಗಿವೆ. ದರ್ಬಾರ್-ಗಾಯಕಿ, ರೀತಿ ಗೌಳ-ಆನಂದ ಭೈರವಿ ,ನಿಶಾದಾಂತ ರಾಗಗಳು, ಬಹುಮುಖ್ಯವಾದವುಗಳು.
ಇವರ ಕಲಾಸೇವೆಗೆ ಶೃಂಗೇರಿ ಶಾರದಾ ಪೀಠದಿಂದ ಆಸ್ವಾನ್ ವಿದ್ವಾನ್ ಬಿರುದು, 2011ರಲ್ಲಿ ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.
ಪ್ರಶಸ್ತಿಗಳು
- ೧೯೭೪ ಗಾನ ಭಾಸ್ಕರ ಪ್ರಶಸ್ತಿ,
- ೧೯೭೦ ರಲ್ಲಿ, ಕೇಂದ್ರ ಸರಕಾರದ ’ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ’
- ೧೯೮೧ ರಲ್ಲಿ ’ರಾಜ್ಯ ಸಂಗೀತ ನಾಟಕ
- ಗಾನ ಕಲಾಪರಿಷತ್ತಿನಿಂದ ’ಗಾನಕಲಾಶ್ರೀ’
- ೧೯೪೪ ರಲ್ಲಿ ಕರ್ನಾಟಕ ರಾಜ್ಯಸಂಗೀತ ವಿದ್ವಾನ್
- ೧೯೬೬ ಮದರಾಸ್ ಸಂಗೀತ ಅಕಾಡೆಮಿಯಿಂದ, ’ಸಂಗೀತ ಕಲಾನಿಧಿ’
- ೧೯೯೭ ’ಕನಕ ಪುರುಂದರ ಪ್ರಶಸ್ತಿ’
- ಹೈದರಾಬಾದ್ ನ ’ಸಂಗೀತ ಕಲಾಸಾಗರ’
- ತಿರುವಾಂಕೂರಿನ, ಸ್ವಾತಿ ತಿರುನಾಳ್ ಸಂಗೀತ ಸಭೆಯಿಂದ ’ಗಾಯಕ ರತ್ನ’
- ಶೃಂಗೇರಿ ಶಾರದಾ ಪೀಠದಿಂದ ಆಸ್ವಾನ್ ವಿದ್ವಾನ್ ಬಿರುದು
- ಯು.ಎಸ್.ನಿಂದ ’ಸಂಗೀತ ರತ್ನಾಕರ’
- ಬೆಂಗಳೂರಿನ ಎಸ್.ವಿ.ಎಸ್. ಅಕಾಡೆಮಿಯಿಂದ ’ಜೀವನ ಸಾಧನಾ ಪ್ರಶಸ್ತಿ’
- ೨೦೧೧ ರಲ್ಲಿ, ಭಾರತ ಸರಕಾರದ ಪದ್ಮ ಭೂಷಣಪ್ರಶಸ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


