ಈಗಿನ ಸುದ್ದಿ

ಬಿಬಿಎಂಪಿಯಿಂದ 7779.51 ಕೋಟಿ ಬಜೆಟ್ ಮಂಡನೆ

ಬಿಬಿಎಂಪಿಯಿಂದ 7779.51 ಕೋಟಿ ಬಜೆಟ್ ಮಂಡನೆ
Published On :

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಗೆ 2014-2015ನೇ ಸಾಲಿನ ಬಜೆಟ್‌ನ್ನು ಸೋಮವಾರ ಮಂಡಿಸಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸುಮಾರು 7779.51 ಕೋಟಿ ರುಪಾಯಿ ಬಜೆಟ್ ಅನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್ ಶಿವಪ್ರಸಾದ್ ಅವರು ಮಂಡಿಸಿದ್ದು, ಬಿಬಿಎಂಪಿ ಸುಮಾರು 7731.43 ಕೋಟಿ ಆದಾಯ ನಿರೀಕ್ಷೆ ಇಟ್ಟುಕೊಂಡಿದೆ.

ಬಿಬಿಎಂಪಿ ಬಜೆಟ್‌ನ ಪ್ರಮುಖ ಅಂಶಗಳು:
*ಬೆಂಗಳೂರಿನ 8 ದಿಕ್ಕುಗಳಲ್ಲಿ ಕೆಂಪೇಗೌಡ ಸ್ವಾಗತ ಗೋಪುರ ನಿರ್ಮಾಣ
*ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ 5 ಕೋಟಿ ರೂಪಾಯಿ
*ನಗರದಲ್ಲಿ ಸ್ವಚ್ಛತೆ ಕಾಪಾಡಲು 'ಹಸಿರು' ಪೊಲೀಸ್ ತಂಡ ರಚನೆ
*ಹೊಸ ಕೆರೆಗಳ ಅಭಿವೃದ್ಧಿಗೆ 48 ಕೋಟಿ
*ನಗರದ ಮೂಲಸೌಕರ್ಯಕ್ಕೆ 2160 ಕೋಟಿ

ಬಿಬಿಎಂಪಿಗೆ ಆದಾಯದ ಮೂಲ:
*ಹೊರಗುತ್ತಿಗೆ ಮೂಲಕ ಜಾಹೀರಾತು ಸಂಗ್ರಹ
*ಅಂಗಡಿ ಮುಂಗ್ಟಟುಗಳ ಜಾಹೀರಾತು ಹೊರಗುತ್ತಿಗೆ
*ಸುಮಾರು 6 ಕೋಟಿ ರೂಪಾಯಿ ಸಂಗ್ರಹ ಗುರಿ
*ಆಪ್ಟಿಕಲ್ ಫೈಬರ್ ಕೇಬಲ್ ನೀತಿ ಜಾರಿಗೆ
*ನೂತನ ನೀತಿಯಿಂದ 750 ಕೋಟಿ ಸಂಗ್ರಹ ಗುರಿ

ಆರೋಗ್ಯ ಕ್ಷೇತ್ರಕ್ಕೆ ಬಿಬಿಎಂಪಿ ಯೋಜನೆ:
*ವಾಜಪೇಯಿ ನಿರಂತರ ಆರೋಗ್ಯ ಯೋಜನೆ ಮೂಲಕ ಆಸ್ಪತ್ರೆಗಳ ಉನ್ನತೀಕರಣ
*ಪಾಲಿಕೆಯ 2 ಪ್ರತಿಷ್ಠಿತ ಆಸ್ಪತ್ರೆಗಳನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ದರ್ಜೆಗೆ ಉನ್ನತೀಕರಣ
*ಎರಡೂ ಆಸ್ಪತ್ರೆಗಳ ಉನ್ನತೀಕರಣಕ್ಕೆ 10 ಕೋಟಿ ವೆಚ್ಚ
*6 ರೆಫರಲ್ ಆಸ್ಪತ್ರೆಗಳ ಆಧುನೀಕರಣ
*ಸಾಮಾನ್ಯ ಮತ್ತು ಹೆರಿಗೆ ಆಸ್ಪತ್ರೆ
*ಖಾಸಗಿ ಸಹಭಾಗಿತ್ವದಲ್ಲಿ ಆಧುನೀಕರಣ ನಿರ್ಧಾರ

ಬಡವರಿಗೆ ಒಂಟಿ ಮನೆ ನಿರ್ಮಾಣ
*ಸಂದೀಪ್ ದೀನ್‌ದಯಾಳ್ ಗೃಹ ನಿರ್ಮಾಣ ಯೋಜನೆ ಮೂಲಕ ಅಲ್ಲಸಂಖ್ಯಾತರಿಗೆ ಮನೆ
*ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ, ಪರಿಶಿಷ್ಟ ಜಾತಿ, ಪಂಗಡಗಳಿಗೆ ಒಂಟಿ ಮನೆ ನಿರ್ಮಾಣಕ್ಕೆ 15 ಕೋಟಿ

ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಒತ್ತು
*ರಸ್ತೆ ಅಗಲೀಕರಣ, ಪ್ರಮುಖ ಜಂಕ್ಷನ್ಗಳ ಅಭಿವೃದ್ಧಿ
*ರಸ್ತೆ ನಿರ್ವಹಣೆ ಸೇರಿ ನಗರದ ಮೂಲಸೌಕರ್ಯಕ್ಕೆ ಒತ್ತು
*ರಸ್ತೆ ವಿಸ್ತರಣೆಗೆ ಟಿಡಿಆರ್ ಬ್ಯಾಂಕ್ಗಳ ಸ್ಥಾಪನೆ

ಬೆಂಗಳೂರು ಸಂಸ್ಕೃತಿ ಪ್ರಚಾರಕ್ಕೆ ಬೆಂಗಳೂರು ಸಂತೆ
*ಗೃಹೋಪಯೋಗಿ, ಖಾದಿ ಗ್ರಾಮೋದ್ಯೋಗ ಪ್ರದರ್ಶನ
*ಪಾರಂಪರಿಕ ಸಂಸ್ಕೃತಿ ಪ್ರಚಾರ, ಕರಕುಶಲ ವಸ್ತುಗಳು,

ಬೆಂಗಳೂರು ಇತಿಹಾಸ ಬಿಂಬಿಸುವ ಮ್ಯೂಸಿಯಂ
*ಬೆಂಗಳೂರು ಮ್ಯೂಸಿಯಂ ಸ್ಥಾಪನೆಗೆ 3 ಕೋಟಿ
*ಪ್ರೀಡಂಪಾರ್ಕ್‌ನಲ್ಲಿ ಮ್ಯೂಸಿಯಂ ಸ್ಥಾಪನೆಗೆ ನಿರ್ಧಾರ

ನಾಗರಿಕ ಸೌಲಭ್ಯಗಳ ನಿರ್ವಹಣೆಗೆ ಹೊಸ ಯೋಜನೆ
*ಸ್ವಯಂಜಾಲಿತ ಇ-ಶೌಚಾಲಯ ನಿರ್ಮಾಣ
*ನಮ್ಮ ಬೆಂಗಳೂರು ನಿಧಿ ಸ್ಥಾಪಿತ ಜನಪರ ಕಾರ್ಯಕ್ರಮ
*ನಗರದ ಪರಿಸರ ರಕ್ಷಣೆಗೆ ಹಸಿರು ಪೊಲೀಸ್ ಪಡೆ

ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ
*ಅಂಗವಿಕಲರ ಕಲ್ಯಾಣಕ್ಕೆ 1.74ಕೋಟಿ ರೂ. ಮೀಸಲು

ಪಾಲಿಕೆ ವ್ಯಾಪ್ತಿಯ ವ್ಯಾಪಾರಿಗಳಿಗೆ ಹೊಸ ಪರವಾನಗಿ
*ಆನ್‌ಲೈನ್ ನೋಂದಣಿ ಮೂಲಕ ಪರವಾನಗಿ ವಿತರಣೆ
*ಬಿಬಿಎಂಪಿಗೆ 60 ಕೋಟಿ ರೂಪಾಯಿ ಆದಾಯ ನಿರೀಕ್ಷೆ
*4 ಲಕ್ಷ ವ್ಯಾಪಾರ ಕೇಂದ್ರಗಳಿಂದ ಆದಾಯ ನಿರೀಕ್ಷೆ








Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.