ಈಗಿನ ಸುದ್ದಿ

ಮೋದಿ ರ್ಯಾಲಿಗೆ ತೆರಿಗೆ ಕಟ್ಟಿ: ಬಿಜೆಪಿಗೆ ಅಬಕಾರಿ ಇಲಾಖೆ ನೋಟಿಸ್

ಮೋದಿ ರ್ಯಾಲಿಗೆ ತೆರಿಗೆ ಕಟ್ಟಿ: ಬಿಜೆಪಿಗೆ ಅಬಕಾರಿ ಇಲಾಖೆ ನೋಟಿಸ್
Published On :

ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ರ್ಯಾಲಿಗಳಿಗೆ ತೆರಿಗೆ ವಿನಾಯಿತಿ ನೀಡುವುದಿಲ್ಲ ಎಂದಿರುವ ಕೇಂದ್ರೀಯ ಅಬಕಾರಿ ಗುಪ್ತಚರ ನಿರ್ದೇಶನಾಲಯ(ಡಿಜಿಸಿಇಐ), ಮೋದಿ ರ್ಯಾಲಿಗಳಲ್ಲಿ ಟಿಕೆಟ್ ಮೂಲಕ ಸಂಗ್ರಹಿಸುತ್ತಿರುವ ಹಣಕ್ಕೆ ತೆರಿಗೆ ಪಾವತಿಸುವಂತೆ ಮಂಗಳವಾರ ಬಿಜೆಪಿಗೆ ನೋಟಿಸ್ ನೀಡಿದೆ.

ದೇಶಾದಾದ್ಯಂತ ಬಿಜೆಪಿ ನರೇಂದ್ರ ಮೋದಿ ಅವರ ರ್ಯಾಲಿಗಳನ್ನು ನಡೆಸಿ, ರ್ಯಾಲಿಗಳಿಗೆ ಪ್ರವೇಶ ಶುಲ್ಕ ನಿಗದಿಪಡಿಸಿ ಲಕ್ಷಾಂತರ ರುಪಾಯಿ ಸಂಗ್ರಹಿಸಲಾಗುತ್ತಿದ್ದು, ಈ ಹಣಕ್ಕೆ ಸಂಬಂಧಿಸಿದಂತೆ ತೆರಿಗೆ ಪಾವತಿಸುವಂತೆ ಹಾಗೂ ರ್ಯಾಲಿಗಳಲ್ಲಿ ಸಂಗ್ರಹಿಸಿರುವ ಹಣದ ಮಾಹಿತಿ ನೀಡುವಂತೆ ಛತ್ತೀಸ್‌ಗಡದ ಬಿಜೆಪಿ ಘಟಕಕ್ಕೆ ನೋಟಿಸ್ ಜಾರಿ ಮಾಡಿದೆ.

ಬಿಜೆಪಿ ರಾಜಕೀಯ ಚಳುವಳಿಗಳು ತೆರಿಗೆ ರಿಯಾಯಿತಿ ಪಡೆಯಲು 'ಮನರಂಜನಾ' ಕಾರ್ಯಕ್ರಮವಲ್ಲ. ಹೀಗಾಗಿ ರ್ಯಾಲಿಗಳಲ್ಲಿ ಮಾರಾಟ ಮಾಡಲಾಗಿರುವ ಟಿಕೆಟ್‌ಗಳಿಗೆ ತೆರಿಗೆ ಪಾವತಿಸಬೇಕಿದೆ ಎಂದು ಡಿಜಿಸಿಇಐ ವಾದಿಸಿದೆ.

ಇತ್ತೀಚೆಗೆ ಭಾರತದ ವಿವಿಧ ಸ್ಥಳಗಳಲ್ಲಿ ಮೋದಿ ಅವರ ಸಾರ್ವಜನಿಕ ಸಭೆಗಳನ್ನು ನಡೆಸಲಾಗುತ್ತಿದ್ದು, ಆ ಮೂಲಕ ರ್ಯಾಲಿಗಳಿಗೆ ಪ್ರವೇಶ ಟಿಕೆಟ್‌ಗಳನ್ನು ಮಾರಾಟ ಮಾಡಿ ಅಪಾರ ಪ್ರಮಾಣದಲ್ಲಿ ಹಣ ಸಂಗ್ರಹಿಸುತ್ತಿರು ಹಿನ್ನೆಲೆಯಲ್ಲಿ ಡಿಜಿಸಿಇಐ ನೋಟಿಸ್ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.