2ನೇ ಟೆಸ್ಟ್ ಡ್ರಾನಲ್ಲಿ ಅಂತ್ಯ: ಸರಣಿ ಕಿವೀಸ್ ಪಾಲು

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದು, ಭಾರತ ಸರಣಿ ಡ್ರಾ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ.
ವೆಲ್ಲಿಂಗ್ಟನ್ನಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಕ್ರಿಕೆಟ್ನಲ್ಲಿ ನ್ಯೂಜಿಲೆಂಡ್ ನಾಯಕ ಬ್ರೆಂಡನ್ ಮೆಕಲಮ್ ಸಿಡಿಸಿದ 302 ರನ್ ನೆರವಿನಿಂದ ಕಿವೀಸ್ ಸೋಲಿನ ದವಡೆಯಿಂದ ಪಾರಾಗಿದ್ದು, 1-0 ಅಂತರದಲ್ಲಿ ಟೆಸ್ಟ್ ಸರಣಿಯನ್ನು ನ್ಯೂಜಿಲೆಂಡ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ನ್ಯೂಜಿಲೆಂಡ್ ನಾಲ್ಕನೇ ದಿನದ ಅಂತ್ಯಕ್ಕೆ ಆರು ವಿಕೆಟ್ ಕಳೆದುಕೊಂಡು 571 ರನ್ ಗಳಿಸಿತ್ತು. ಇಂದು 5ನೇ ದಿನದಾಟವನ್ನು ಪ್ರಾರಂಭಿಸಿದ ಆಟಗಾರರು ಮಂದಗತಿಯಲ್ಲಿ ಬ್ಯಾಟಿಂಗ್ ಮಾಡಿ 8 ವಿಕೆಟ್ ನಷ್ಟಕ್ಕೆ 680 ರನ್ ಗಳಿಸಿ ಎರಡನೇ ಇನ್ನಿಂಗ್ಸ್ನ್ನು ಡಿಕ್ಲೇರ್ ಮಾಡಿಕೊಂಡು ಭಾರತಕ್ಕೆ ಗೆಲ್ಲಲು 435 ರನ್ಗಳ ಬೃಹತ್ ಮೊತ್ತವನ್ನು ನೀಡಿತು.
ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಪಂದ್ಯ ಗೆಲ್ಲುವುದಕ್ಕಿಂತಲೂ ಡ್ರಾ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಕೇವಲ 2 ರನ್ ಗಳಿಸಿದ್ದ ಶಿಖರ್ ಧವನ್ 4ನೇ ಓವರ್ನಲ್ಲೇ ಪೆವಿಲಿಯನ್ ಹಾದಿ ಹಿಡಿದರೆ 7 ರನ್ ಗಳಿಸಿದ್ದ ಮುರುಳಿ ವಿಜಯ್ ನಂತರದ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಹೀಗೆ ಸತತ ಮೂರು ವಿಕೆಟ್ ಕಳೆದು ಕೊಂಡ ಭಾರತಕ್ಕೆ ಆಸರೆಯಾಗಿ ಬಂದ ವಿರಾಟ್ ಕೊಹ್ಲಿ ಮಂದಗತಿಯಲ್ಲಿ ಬ್ಯಾಟ್ ಮಾಡಿ ಶತಕ ಭಾರಿಸಿದ್ದು, ತಂಡ ಮತ್ತೊಂದು ಸೋಲಿನ ಮುಖಭಂಗ ಎದುರಿಸುವುದನ್ನು ತಪ್ಪಿಸಿದರು.
ಸತತ ಎರಡು ದಿನಗಳ ಹೋರಾಟದಲ್ಲಿ ಮೆಕಲಮ್ ಅವರು 281 ರನ್ಗಳಿಸಿ ಜಹೀರ್ ಖಾನ್ ಬೌಲಿಂಗ್ನಲ್ಲಿ ಧೋನಿಗೆ ಕ್ಯಾಚ್ ನೀಡಿದರು. ಈನಂತರ ಬಂದ ಟಿಂ ಸೌಥಿ 11 ರನ್ ಗಳಿಸಿದ್ದು, ಮತ್ತೊಂದೆಡೆ ನೀಶಮ್ 154 ಚೆಂಡುಗಳಲ್ಲಿ 137 ರನ್ ಗಳಿಸಿದ್ದರು. ಈ ವೇಳೆ ನ್ಯೂಜಿಲೆಂಡ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
ಭಾರತದ ಪರ ಜಹೀರ್ ಖಾನ್ 5 ವಿಕೆಟೆ ಪಡೆದರೆ, ಮಹಮ್ಮದ್ ಶಮಿ 2 ಮತ್ತು ರವೀಂದ್ರ ಜಡೇಜಾ ಒಂದು ವಿಕೋಟ್ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


