ಈಗಿನ ಸುದ್ದಿ

ರಾಹುಲ್ ಗಾಂಧಿ ಕ್ಷಮೆ ಕೋರಿದ ರಾಜೀವ್ ಹಂತಕರ ಪುತ್ರಿ

ರಾಹುಲ್ ಗಾಂಧಿ  ಕ್ಷಮೆ ಕೋರಿದ ರಾಜೀವ್ ಹಂತಕರ ಪುತ್ರಿ
Published On :

ಚೆನ್ನೈ: ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಪ್ರಮುಖ ಅಪರಾಧಿಗಳಾದ ಮುರುಗನ್ ಮತ್ತು ನಳಿನಿ ದಂಪತಿಯ 22 ವರ್ಷದ ಪುತ್ರಿ ಹರಿತ್ರಾ ಶ್ರೀಹರನ್, ತನ್ನ ಪೋಷಕರನ್ನು ಕ್ಷಮಿಸುವಂತೆ ಮಾಜಿ ಪ್ರಧಾನಿಯ ಪುತ್ರ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಮನವಿ ಮಾಡಿದ್ದಾಳೆ.

'ನಿಜವಾಗಲೂ ರಾಹುಲ್ ಗಾಂಧಿ ಕ್ಷಮಿಸಬೇಕು. ನನ್ನ ಪೋಷಕರು ಸಾಕಷ್ಟು ವಿಷಾದ ವ್ಯಕ್ತಪಡಿಸಿದ್ದಾರೆ. ಅವರು ಕ್ಷಮೆಗೆ ಅರ್ಹರು. ನಾವು ಪ್ರೀತಿಸುವ ವ್ಯಕ್ತಿಗಳನ್ನು ಕಳೆದುಕೊಳ್ಳುವುದು ಎಷ್ಟು ಕಷ್ಟ ಅಂತ ನನಗೆ ಗೊತ್ತು' ಎಂದು ಕಳೆದ ಒಂಬತ್ತು ವರ್ಷಗಳಿಂದ ಯು.ಕೆ.ದಲ್ಲಿ ವಾಸಿಸುತ್ತಿರುವ ಹರಿತ್ರಾ ಅವರು ಇಂದು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

'ಪೋಷಕರಿಂದ ದೂರ ಇದ್ದು ನಾನು ಆದೇ ಶಿಕ್ಷೆಯನ್ನು ಅನುಭವಿಸುತ್ತಿದ್ದೇನೆ. ನನ್ನ ತಂದೆ ತಾಯಿ ಜೀವಂತವಾಗಿದ್ದರೂ ನಾನು ಅವರೊಂದಿಗೆ ಜೀವಿಸಲು ಸಾಧ್ಯವಾಗಿಲ್ಲ. ಇನ್ನುಮುಂದಾದರು ನಾನು ನನ್ನ ಪೋಷಕರೊಂದಿಗೆ ಇರಬೇಕು. ಅವರು ಮಾಡಿದ ತಪ್ಪಿಗೆ ಈಗಾಗಲೇ ಸಾಕಷ್ಟು ಶಿಕ್ಷೆ ಅನುಭವಿಸಿದ್ದಾರೆ. ಹೀಗಾಗಿ ದಯವಿಟ್ಟು ಅವರನ್ನು ಕ್ಷಮಿಸಿ ಎಂದು ಹರಿತ್ರಾ ಬೇಡಿಕೊಂಡಿದ್ದಾರೆ.

ಇದೇ ವೇಳೆ ತನ್ನ ಪೋಷಕರು ಸೇರಿದಂತೆ ಪ್ರಕರಣದ 7 ಅಪರಾಧಿಗಳನ್ನು ಬಿಡುಗಡೆ ಮಾಡುವ ನಿರ್ಧಾರ ತೆಗೆದುಕೊಂಡಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು ಹರಿತ್ರಾ ಅಭಿನಂದಿಸಿದ್ದಾರೆ.

ಪ್ರಧಾನಮಂತ್ರಿಗಳ ಹಂತಕರನ್ನೇ ಬಿಡುಗಡೆ ಮಾಡಿದರೆ ಇನ್ನು ಜನಸಾಮಾನ್ಯರಿಗೆ ಹೇಗೆ ನ್ಯಾಯ ಸಿಗಲು ಸಾಧ್ಯ? ನಮ್ಮ ದೇಶದಲ್ಲಿ ಪ್ರಧಾನಿಗೂ ನ್ಯಾಯ ಸಿಗುವುದಿಲ್ಲವೇ? ಎಂದು ರಾಹುಲ್ ಪ್ರಶ್ನಿಸಿದ್ದಾರೆ. ಅಲ್ಲದೆ ನನ್ನ ತಂದೆಯ ಹಂತಕರಿಗೆ ಗಲ್ಲುಶಿಕ್ಷೆಯಾಗಬೇಕೆಂದು ನಾನೇನು ಆಗ್ರಹಿಸುತ್ತಿಲ್ಲ. ಅದರಿಂದ ನನ್ನ ತಂದೆ ಹಿಂತಿರುಗಿ ಬರುವುದೂ ಇಲ್ಲ. ಇದು ಇಡೀ ದೇಶಕ್ಕೆ ಸಂಬಂಧಪಟ್ಟ ವಿಚಾರ. ತಮಿಳುನಾಡು ಸರ್ಕಾರದ ಈ ನಿರ್ಧಾರದಿಂದ ತೀವ್ರ ಬೇಸರವಾಗಿದೆ. ಇದನ್ನು ಮನಸ್ಸಿಂದ ಹೇಳುತ್ತಿದ್ದೇನೆ ಎಂದು ರಾಹುಲ್ ಗಾಂಧಿ  ಜಯಲಲಿತಾ ನಿರ್ಧಾರಕ್ಕೆ ನಿನ್ನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.