ಡರ್ಟಿ ಸೀಕ್ರೆಟ್ಸ್: ಗದ್ದಾಫಿ ಎಂಬ ರಾಕ್ಷಸನ ಪಂಜರದ ಗಿಳಿ

ಪತ್ರಕರ್ತೆ ಅನ್ನೀಕ್ ಕೊಜುವಾನ್ ಬರೆದಿರುವ 'ಗದ್ದಾಫಿಸ್ ಹೇರಂ' (2012) ಮಹಿಳೆಯರ ವಿರುದ್ಧ ಗದ್ದಾಫಿ ನಡೆಸಿದ ಭಯಾನಕ ಲೈಂಗಿಕ ದೌರ್ಜನ್ಯಗಳನ್ನು ಬಯಲಿಗೆಳೆದಿದೆ. ಪ್ರತಿಯೊಂದು ಪುಟದಲ್ಲೂ ಬರುವ ಹೊಸ ಹೆಸರು, ಹೊಸ ನೊಂದ ಮುಖ, ಸಂತ್ರಸ್ತರ ನೋವು, ಗದ್ದಾಫಿಯ ವಿಧ್ವಂಸಕ ಕೃತ್ಯ, ಸರ್ವಾಧಿಕಾರಿಯ ಮುಖವಾಡ ಕಳಚಿ ಅವನ ನಿಜರೂಪವನ್ನು ತೋರಿಸುತ್ತವೆ.
ಏಪ್ರಿಲ್ 2008. ಲಿಬಿಯಾದ ಸಿರ್ತೆ ಪಟ್ಟಣದ ಶಾಲೆಯೊಂದರಲ್ಲಿ ಹಬ್ಬದ ವಾತಾವರಣ. ಶಾಲೆಯ ಸಭಾಂಗಣ ಶಿಕ್ಷಕರು, ವಿದ್ಯಾರ್ಥಿಗಳು, ನಿರ್ವಾಹಕರಿಂದ ತುಂಬಿ ತುಳುಕುತ್ತಿತ್ತು. ಎಲ್ಲರ ಕಣ್ಣಲ್ಲೂ ನಿರೀಕ್ಷೆ. ಅತಿಥಿಯನ್ನು ಸ್ವಾಗತಿಸಲು ಮುಖ್ಯದ್ವಾರದಲ್ಲಿ ಸಾಲು ಸಾಲಾಗಿ ನಿಂತಿದ್ದ ಹೆಣ್ಣು ಮಕ್ಕಳಲ್ಲಿ ಏನೋ ಸಡಗರ. 'ನಿಜವಾಗಿಯೂ, ಏನು ಅದೃಷ್ಟ ಮಾಡಿದ್ದೇವೆಅಲ್ಲವೇ? 'ಗೃಡ್' ನನ್ನು ಸ್ವಾಗತಿಸಲು ನಿಂತಿರುವ ಈ ಕ್ಷಣ ನಮ್ಮ ಜೀವನದಲ್ಲಿ ಮರೆಯಲಾರದ ಕ್ಷಣ' ಎಂದು ಪುಷ್ಪಗುಚ್ಛ ಹಿಡಿದ ಹುಡುಗಿಯರು ಪಿಸುಗುಡುತ್ತಿದ್ದಾರೆ.
ನಿಂತೂ ನಿಂತೂ ಕಾಲು ಮರಗಟ್ಟುತ್ತಿರುವಾಗ ಶಿಕ್ಷಕಿಯೊಬ್ಬಳು ಕಠೋರ ನೋಟ ಬೀರಿ, 'ನೇರವಾಗಿ ನಿಲ್ಲು ಸೊರೆಯಾ' ಎಂದು ಎಚ್ಚರಿಸುತ್ತಾಳೆ. ಅಷ್ಟರಲ್ಲಿ ಅತಿಥಿಯ ಆಗಮನವಾಗುತ್ತದೆ. ಕ್ಯಾಮೆರಾಗಳು ಕ್ಲಿಕ್ ಕ್ಲಿಕ್ ಸದ್ದು ಮಾಡುತ್ತಿದ್ದಂತೆಯೇ, ಬಿಳಿಸಮವಸ್ತ್ರ, ಎದೆಯ ಮೇಲೆ ಹಲವಾರು ಧ್ವಜಗಳು ಮತ್ತು ಲಾಂಛನಗಳನ್ನು ಧರಿಸಿದ ಅವನು ಹಲವಾರು ಅಂಗರಕ್ಷಕಿಯರೊಡನೆ ಪ್ರವೇಶಿಸುತ್ತಾನೆ.
ಸ್ವಾಗತದ ಸಾಲಿನಲ್ಲಿ ನಿಂತಿದ್ದ ಸೊರೆಯಾ ಅವನಿಗೆ ಪುಷ್ಪಗುಚ್ಛ ನೀಡಿ, ತಲೆಬಾಗಿ ಅವನ ಕೈಗೆ ಮುತ್ತೊಂದನ್ನು ನೀಡುತ್ತಾಳೆ. ಅವಳ ಕೈಯನ್ನು ವಿಚಿತ್ರವಾಗಿ ಅದುಮಿ, ಅವಳನ್ನು ಅಪಾದಮಸ್ತಕ ದಿಟ್ಟಿಸಿ, ಅವಳ ಭುಜವನ್ನು ಒತ್ತಿ, ತಲೆ ಸವರುತ್ತಾನೆ. ಆ ಒಂದು ಗಳಿಗೆಯಲ್ಲಿ ಅವಳ ಜೀವನದ ದಿಕ್ಕೇ ಬದಲಾಗಿ ಹೋಗುತ್ತದೆ. ಅವನು ಅವಳ ತಲೆಸವರಿದ್ದು ಮೆಚ್ಚುಗೆಯಿಂದಲ್ಲ, ಬದಲಾಗಿ ತನ್ನ ಅಂಗರಕ್ಷಕರಿಗೆ ನನಗಿವಳು ಬೇಕು ಎನ್ನುವ ಸೂಚನೆ ಎನ್ನುವುದು ಅರಿವಾಗುವಷ್ಟರಲ್ಲಿ ಕಾಲ ಮಿಂಚಿಹೋಗಿರುತ್ತದೆ.
ಇದು ಯಾವುದೋ ಚಲನಚಿತ್ರದಲ್ಲೋ ಇಲ್ಲಾ ಕಾದಂಬರಿಯಲ್ಲೋ ಬರುವಸನ್ನಿವೇಶವಾಗಿದ್ದಿದ್ದರೆ 42 ವರ್ಷಗಳ ಕಾಲ ಲಿಬಿಯಾ ಆಳಿದ ಸರ್ವಾಧಿಕಾರಿ ಮುವಮ್ಮರ್ ಗದ್ದಾಫಿ ಹುಚ್ಚುನಾಯಿಯಂತೆ ಸತ್ತಿದ್ದು ನೋಡಿ ಜಗತ್ತು ಮರುಗುತ್ತಿತ್ತೇನೋ. ಫ್ರೆಂಚ್ ಪತ್ರಿಕೆ 'ಲ ಮಾಂಡ್'ನ ವರದಿಗಾರ್ತಿಯ ಅದ್ಭುತ ತನಿಖೆಗದ್ದಾಫಿಯ ಇನ್ನೊಂದು ಮುಖವನ್ನು ಜಗತ್ತಿಗೆ ಪರಿಚಯ ಮಾಡಿಕೊಟ್ಟಿದೆ,ವಿಪರ್ಯಾಸವೆಂದರೆ ಈ ತನಿಖೆ ಅವನ ಮರಣದ ನಂತರ ಹೊರಬಂದಿರುವುದು.
ಪತ್ರಕರ್ತೆ ಅನ್ನೀಕ್ ಕೊಜುವಾನ್ಬರೆದಿರುವ 'ಗದ್ದಾಫಿಸ್ ಹೇರಂ'(2012) ಮಹಿಳೆಯರ ವಿರುದ್ಧ ಗದ್ದಾಫಿ ನಡೆಸಿದ ಭಯಾನಕ ಲೃಂಗಿಕ ದೌರ್ಜನ್ಯಗಳನ್ನು ಬಯಲಿಗೆಳೆದಿದೆ. ಪ್ರತಿಯೊಂದು ಪುಟದಲ್ಲೂ ಬರುವ ಹೊಸ ಹೆಸರು, ಹೊಸ ನೊಂದ ಮುಖ, ಸಂತ್ರಸ್ತರ ನೋವು, ಗದ್ದಾಫಿಯ ವಿಧ್ವಂಸಕ ಕೃತ್ಯ, ಸರ್ವಾಧಿಕಾರಿಯ ಮುಖವಾಡ ಕಳಚಿ ಅವನ ನಿಜರೂಪವನ್ನು ತೋರಿಸುತ್ತವೆ.
ಪುಸ್ತಕದ ಮೊದಲಾರ್ಧ ಭಾಗ 'ಸೊರೆಯಾ' ಎನ್ನುವ ಗುಪ್ತನಾಮದ ಯುವತಿಯ ಜೀವನದ ಬಗ್ಗೆ, ಅವಳ ಮೇಲೆ ಗದ್ದಾಫಿ ನಡೆಸಿದ ಅತ್ಯಾಚಾರದ ಬಗ್ಗೆ, ಅವಳು ಗದ್ದಾಫಿಯ ಟ್ರೈಪೋಲಿಯ ನೆಲಮಾಳಿಗೆಯಲ್ಲಿ ಐದು ವರ್ಷ ಅನುಭವಿಸಿದ ನರಕಯಾತನೆಯ ಬಗ್ಗೆ ಬೆಳಕು ಚೆಲ್ಲಿದರೆ, ಕೊನೆಯಾರ್ಧ ಭಾಗ ಗದ್ದಾಫಿಯ ಕಾಮತೃಷೆಗೆ ಬಲಿಯಾದ ಇತರೆ ಮಹಿಳೆಯರ ಸರಣಿ ಸಂದರ್ಭಗಳನ್ನುಒಳಗೊಂಡಿದೆ.
ಸೊರೆಯಾಳ ಬಾಲ್ಯ
ಫೆಬ್ರವರಿ 17, 1989ರಂದು ಈಜಿಪ್ಟ್ ಸರಹದ್ದಿನ ಬಳಿಯಿರುವ ಮರಾಗ್ ಎನ್ನುವ ಪುಟ್ಟ ನಗರದಲ್ಲಿ ಸೊರೆಯಾಳ ಜನನವಾಯಿತು. ಅವಳಿಗೆ ಮೂರು ಜನಅಣ್ಣಂದಿರು, ಇಬ್ಬರು ತಮ್ಮಂದಿರು ಮತ್ತು ಒಬ್ಬಳು ತಂಗಿ. ಅವಳ ತಾಯಿಯಪೋಷಕರು ಟ್ಯುನಿಷಿಯಾದವರು, ಹಾಗಾಗಿ ಪ್ಯಾರಿಸ್ನಲ್ಲಿ ಕೇಶ ವಿನ್ಯಾಸಕಿಯತರಬೇತಿಗೆ ಅವಳನ್ನು ಯಾವುದೇ ತಕರಾರಿಲ್ಲದೆ ಕಳುಹಿಸಿಕೊಟ್ಟಿದ್ದರು.
ರಂಜಾನ್ನ ಒಂದು ಔತಣಕೂಟದಲ್ಲಿ ಮೊದಲ ಬಾರಿಗೆ ಅವಳು ಲಿಬಿಯಾರಾಯಭಾರದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಭಾವಿ ಪತಿಯನ್ನು ಭೇಟಿಯಾದಳು. ಸ್ನೇಹ ಪ್ರೀತಿಗೆ ತಿರುಗಿ, ಅವಳ ಅಜ್ಜಿಯ ಮನೆ ಮೊರೊಕ್ಕೋದ ಫೆಜ್ನಲ್ಲಿ ಇಬ್ಬರೂ ಮದುವೆಯಾದರು. ಮದುವೆಯ ಬಳಿಕ ಸೊರೆಯಾಳ ತಂದೆ ತನ್ನ ಪತ್ನಿಯನ್ನುಲಿಬಿಯಾಕ್ಕೆ ಕರೆತಂದ. ಪ್ಯಾರಿಸ್ನಂತಹ ಸ್ವೇಚ್ಛೆಯ ನಗರದಲ್ಲಿ ಓದಿ, ಫ್ಯಾಷನ್ ಬಗ್ಗೆ ಸದಾ ಜಾಗೃತವಾಗಿದ್ದ ಅವಳಿಗೆ ಲಿಬಿಯಾ ಹುಲಿಯ ಬೋನು ಎಂದು ತಿಳಿಯುವುದಕ್ಕೆ ಬಹಳ ಸಮಯ ಬೇಕಾಗಲಿಲ್ಲ. ಲಿಬಿಯಾಕ್ಕೆ ಬಂದ ಮೇಲೆ ಆಕೆಗಿದ್ದ ಎಲ್ಲಾ ಸ್ವಾತಂತ್ರ್ಯವೂ ಮಾಯವಾಗಿಬಿಟ್ಟಿತು, ಹೆಂಡತಿಯ ದುಃಖ ಕಂಡು ಅಪರಾಧ ಮನೋಭಾವನೆಅವನನ್ನು ಸದಾ ಕಾಡುತ್ತಿತ್ತು.
ಸೊರೆಯಾಳ ಬಾಲ್ಯ ಬೆಂಗಾಜಿಯಲ್ಲಿ ಕಳೆದವು, ಅವಳಿಗೆ ಹನ್ನೊಂದು ವರ್ಷವಾದಾಗ ಬೆಂಗಾಜಿ ಮತ್ತು ಟ್ರೈಪೋಲಿ ನಡುವೆಯಿರುವ ಸಿರ್ತೆಗೆ ಹೋಗಿ ನೆಲೆಸುವುದಾಗಿ ಅವಳ ತಂದೆ ನಿರ್ಧರಿಸಿದರು. ತಾನು ಹುಟ್ಟಿದ ಹಳ್ಳಿಗೆ, ನಾಲ್ಕು ಪತ್ನಿಯರನ್ನು ಹೊಂದಿದ್ದ ತನ್ನ ತಂದೆಗೆ, ತನ್ನ ಸಹೋದರರಿಗೆ ಸಮೀಪದಲ್ಲಿರುವುದುಅವರ ಹಂಬಲವಾಗಿತ್ತು. ಬೆಂಗಾಜಿಯಲ್ಲಿ ಬೇರಿಲ್ಲದ ಮರದ ಹಾಗೆ ನಾವು ಎಂದು ಸದಾ ಹಪಹಪಿಸುತ್ತಿದ್ದ. ಹತ್ತಿರದಲ್ಲಿರಬೇಕೆನ್ನುವ ಅವನ ಹಂಬಲ ಮುಂದೊಂದು ದಿನ ತನ್ನ ಮಗಳನ್ನೇ ಕಿತ್ತುಕೊಳ್ಳುತ್ತದೆ ಎನ್ನುವ ಸತ್ಯ ಅರಿತಿದ್ದರೆ ಅವನ ನಿರ್ಧಾರಏನಾಗಿರುತ್ತಿತ್ತೋ ಗೊತ್ತಿಲ್ಲ.
ಸಿರ್ತೆಗೆ ಬಂದ ಮೇಲೆ ಶಾಲೆಯಲ್ಲಿ ಇತರರು ಅವಳ ತಾಯಿಯ ಟ್ಯುನಿಷಿಯಾ ಮೂಲವನ್ನು ಅರಿತು ಸೊರೆಯಾಳನ್ನು ನಗೆಪಾಟಲಿಗೀಡುಮಾಡುತ್ತಿದ್ದರು. ಸಿರ್ತೆ ಎಲ್ಲಾ ರೀತಿಯಲ್ಲೂ ಹಿಂದುಳಿದ, ಎಲ್ಲದಕ್ಕೂ ಕಟ್ಟುಪಾಡುಗಳನ್ನು ಹೇರುತ್ತಿದ್ದಪಟ್ಟಣವಾಗಿತ್ತು, ಮೇಲಾಗಿ ಗದ್ದಾಫಿಯ ಜನ್ಮಸ್ಥಳವಾಗಿತ್ತು. ಬುರ್ಖಾ ಇಲ್ಲದೆ ಮಹಿಳೆ ರಸ್ತೆಯಲ್ಲಿ ಸಂಚರಿಸಿದರೆ ಅವಳನ್ನು ಅಪಮಾನ ಮಾಡಲಾಗುತ್ತಿತ್ತು, ಒಂದು ವೇಳೆ ಬುರ್ಖಾ ಧರಿಸಿ ನಡೆದಾಡಿದರೆ, ಅದಕ್ಕೂ ಕೊಂಕು ಮಾತನಾಡುತ್ತಿದ್ದರು. ಒಟ್ಟಿನಲ್ಲಿ ಅಲ್ಲಿನ ಜನ ನೆರೆಹೊರೆಯವರ ಮೇಲೆ ಚಾಡಿ ಹೇಳುತ್ತಾ, ಅವರಿವರ ಬಗ್ಗೆ ಹರಟೆ ಹೊಡೆಯುತ್ತಾ, ಕಾಲಕಳೆಯುತ್ತಿದ್ದರು.
ಅಂಗರಕ್ಷಕಿಯರೋ ಇಲ್ಲಾ ಬಲಿಪಶುಗಳೋ
ಈ ನಡುವೆ ಪತಿಗೆ ಸಹಾಯವಾಗಲೆಂದು ಸೊರೆಯಾಳ ತಾಯಿ ತನ್ನದೇ ಆದ ಬ್ಯೂಟಿ ಸಲೂನ್ ತೆರೆದಿದ್ದಳು. ಏಳು ಮಕ್ಕಳಿರುವ ಕುಟುಂಬ ಅವಳ ಬ್ಯೂಟಿ ಸಲೂನಿನ ಆದಾಯದ ಮೇಲೆ ಅವಲಂಬಿಸಿತ್ತು. ಅವಳ ಜನಪ್ರಿಯತೆ ಎಷ್ಟಿತ್ತೆಂದರೆ ಒಮ್ಮೆ ಸರ್ವಾಧಿಕಾರಿ ಗದ್ದಾಫಿಯ ಪತ್ನಿ ಸಫೀಯಾ ತನ್ನ ಕೂದಲು ಮತ್ತು ಮೇಕಪ್ ಮಾಡಲು ಸೊರೆಯಾಳ ತಾಯಿಯನ್ನು ಅರಮನೆಗೆ ಆಹ್ವಾನಿಸಿದ್ದಳು. ವಾಸ್ತವವಾಗಿ, ಗದ್ದಾಫಿಯ ಸುತ್ತಲಿದ್ದ ಮಹಿಳೆಯರೂ ಆಗಿಂದಾಗ್ಗೆಅವಳ ಸಲೂನ್ಗೆ ಭೇಟಿ ನೀಡುತ್ತಿದ್ದರು.
ಒಮ್ಮೆ ಅಲ್ಲಿಗೆ ಬಂದಿದ್ದ ಗದ್ದಾಫಿಯ ಅಂಗರಕ್ಷಕಿಯ ಸೌಂದರ್ಯವನ್ನು ಕಂಡು ಸೊರೆಯಾ 'ನೀನು ಬಹಳ ಸುಂದರವಾಗಿದ್ದೀಯೆ' ಎಂದು ಪ್ರಶಂಸಿದ್ದಳು, ಅದಕ್ಕೆ ಉತ್ತರವಾಗಿ ಆಅಂಗರಕ್ಷಕಿ ಅವಳ ಕೆನ್ನೆಗೆ ಹೊಡೆದಿದ್ದಳು. ಆ ಹೊಡೆತದ ಅರ್ಥ ಸೊರೆಯಾಳಿಗೆ ಮನವರಿಕೆಯಾಗಿದ್ದು ಗದ್ದಾಫಿಯ ನೆಲಮಾಳಿಗೆಯಲ್ಲಿಬಂಧಿಯಾದಾಗಲೇ!
ಗದ್ದಾಫಿ ಸೊರೆಯಾಳ ಶಾಲೆಗೆ ಭೇಟಿ ನೀಡಿದ ಮಾರನೆಯ ದಿನ ಅವನ ಅಂಗರಕ್ಷಕಿಯರು ಹದಿನೈದು ವರ್ಷದ ಬಾಲಕಿಯನ್ನು ಹುಡುಕಿಕೊಂಡು ಅವಳ ತಾಯಿಯ ಬ್ಯೂಟಿ ಸಲೂನಿಗೆ ಬಂದರು. ಅವಳ ತಾಯಿಗೆ ಸೊರೆಯಾಳನ್ನು ಒಂದು ಗಂಟೆಅವರೊಡನೆ ಕಳುಹಿಸಿಕೊಡುವಂತೆ ಕೇಳಿಕೊಂಡು ಅವಳನ್ನು ಕರೆದುಕೊಂಡು ಹೋದರು. ಹಲವು ಗಂಟೆಗಳ ಪ್ರಯಾಣದ ಬಳಿಕ ಸ್ದಾದದಲ್ಲಿದ್ದ ಶಿಬಿರಗಳ ಬಳಿಗೆ ತಲುಪಿದರು.
ಮಬ್ರೌಕ ಎನ್ನುವ ಮಹಿಳೆ ಅವಳನ್ನು ಇತರ ಹುಡುಗಿಯರೊಂದಿಗೆ ಶಿಬಿರದೊಳಗೆ ಕರೆದುಕೊಂಡು ಹೋದಾಗ ಅಲ್ಲಿ ಗದ್ದಾಫಿ ಇದ್ದುದ್ದನ್ನು ಕಂಡು ಸೊರೆಯಾ ಅಚ್ಚರಿಪಡುತ್ತಾಳೆ. ಅವಳನ್ನು ತಯಾರು ಮಾಡೆಂದು ಗದ್ದಾಫಿ ಸೂಚಿಸಿದಾಗ, ಮಬ್ರೌಕ ಅವಳನ್ನು ತಯಾರು ಮಾಡಲು ಇತರ ಅಂಗರಕ್ಷಕಿಯರಿಗೆ ಹೇಳುತ್ತಾಳೆ. ಆಕೆಯನ್ನು ಶುಚಿಗೊಳಿಸಿದ ಮೇಲೆ ಉಕ್ರೇನಿನ ಲೀನಾಸೊರೆಯಾಳ ರಕ್ತಪರೀಕ್ಷೆ ಮಾಡಿ ಯಾವುದೇ ಖಾಯಿಲೆ ಇಲ್ಲವೆಂದು ಖಚಿತ ಪಡಿಸುತ್ತಾಳೆ. ತುಂಡು ಬಟ್ಟೆಗಳನ್ನು ನೀಡಿ, ಪಪ್ಪಾ ಮುವಮ್ಮರ್ ಹೇಳಿದಂತೆ ಕೇಳು, ಎಂದು ಹೇಳಿ, ಗದ್ದಾಫಿಯಿದ್ದ ಶಿಬಿರದೊಳಗೆ ಮಬ್ರೌಕ ಅವಳನ್ನು ಕಳುಹಿಸುತ್ತಾಳೆ.
ಸೊರೆಯಾಳ ಆಹುತಿ
ಶಿಬಿರದಲ್ಲಿ ನಗ್ನವಾಗಿ ಮಲಗಿದ್ದ ಗದ್ದಾಫಿಯನ್ನು ಕಂಡು ಸೊರೆಯಾ ಬೆಚ್ಚಿಬೀಳುತ್ತಾಳೆ, ಶಿಬಿರದಿಂದ ಹೊರಗೆ ಹೋಗಲು ಪ್ರಯತ್ನಿಸಿದಾಗ ಮಬ್ರೌಕ ಅವಳನ್ನು ಒಳಗೆ ನೂಕುತ್ತಾಳೆ. ಮಂಚದ ಮೇಲೆ ಬಲವಂತದಿಂದ ಅವಳನ್ನು ಕೂರಿಸಿ, 'ಹೆದರಬೇಡ. ನಾನು ನಿನ್ನ ಪಪ್ಪಾ... ಹಾಗೆಯೇ ಅಲ್ಲವೇ? ನೀನು ನನ್ನನ್ನು ಕರೆಯುವುದು! ಆದರೆ ನಾನು ನಿನ್ನ ಅಣ್ಣ ಸಹ, ಶೀಘ್ರದಲ್ಲೇ ನಾನು ನಿನ್ನ ಪ್ರೇಮಿಯೂ ಆಗುತ್ತೇನೆ. ನೀನು ಬಯಸಿದ್ದೆಲ್ಲಾ ಆಗುತ್ತೇನೆ... ಯಾಕೆಂದರೆ ಇನ್ನು ಮುಂದೆ ಶಾಶ್ವತವಾಗಿ ನನ್ನೊಂದಿಗೇ ಇರುತ್ತೀಯೇ' ಎಂದು ಗದ್ದಾಫಿ ಹೇಳಿಅವಳ ಮೇಲೆರಗುತ್ತಾನೆ. ಅವಳ ಪ್ರತಿಭಟನೆ ಕಂಡು ಸಿಡಿಮಿಡಿಗೊಂಡ ಗದ್ದಾಫಿ ಮಬ್ರೌಕಳನ್ನು ಕರೆದು, 'ಈ ಸೂಳೆಯನ್ನು ನೋಡು ನಾನು ಬಯಸುವ ಹಾಗೆ ವರ್ತಿಸಲು ನಿರಾಕರಿಸುತ್ತಿದ್ದಾಳೆ ಇವಳಿಗೆ ತಿಳಿಹೇಳು, ಪಾಠ ಹೇಳು, ಆ ಬಳಿಕ ನನ್ನ ಬಳಿಗೆ ಕರೆದುಕೊಂಡು ಬಾ' ಎಂದು ಆದೇಶ ನೀಡುತ್ತಾನೆ.
ಮಾರನೆಯ ದಿನ ಮಬ್ರೌಕ ಬಂದು ಇನ್ನು ಮೇಲೆ ಮರಳಿ ಮನೆಗೆ ಹೋಗುವ ವಿಚಾರವನ್ನು ತಲೆಯಿಂದ ತೆಗೆದು ಹಾಕುವಂತೆ ಹೇಳುತ್ತಾಳೆ. ಮತ್ತೊಬ್ಬ ಅಂಗರಕ್ಷಕಿ ಸಲ್ಮಾ ಬಂದು ಅವಳಿಗೆ ಕೆಲವು ವಿಚಾರಗಳನ್ನು ಹೇಳುತ್ತಾಳೆ: 'ಮುವಮ್ಮರ್ ನಿನ್ನ ಜೊತೆ ಮಲಗುತ್ತಾನೆ. ಇನ್ನು ಮುಂದೆನೀನವನ ಸ್ವತ್ತು. ಅವನು ನಿನ್ನನ್ನು ಎಂದಿಗೂ ಬಿಡುವುದಿಲ್ಲ. ಆದ್ದರಿಂದ ದುಃಖ ಪಡುವುದನ್ನು ನಿಲ್ಲಿಸು. ಪ್ರತಿಭಟಿಸುವುದರಲ್ಲಿ ಯಾವುದೇ ಅರ್ಥವಿಲ್ಲ, ಅದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ'. ಇದನ್ನು ಕೇಳಿ ಸೊರೆಯಾಗೆ ತಾನು ಬಂಧಿಯಾಗಿರುವುದರ ಬಗ್ಗೆ ಅರಿವಾಗುತ್ತದೆ.
ಈ ಬಾರಿಯೂ ಗದ್ದಾಫಿ ಸೊರೆಯಾಳನ್ನು ನಿಂದಿಸುತ್ತಾನೆ: 'ನಿನ್ನ ತಾಯಿ ಟ್ಯುನಿಷಿಯಾದವಳು, ಆದ್ದರಿಂದ ನೀನೊಬ್ಬ ಸೂಳೆ... ನಾನು ಹೇಳಿದ ಹಾಗೆ ನೀನುಕೇಳಬೇಕು. ನಾನು ನಿನಗೆ ಒಡವೆಗಳನ್ನೂ, ಸುಂದರವಾದ ಮನೆಯನ್ನೂ ಕೊಡುತ್ತೇನೆ, ಕಾರು ಓಡಿಸುವುದನ್ನು ನಿನಗೆ ಹೇಳಿಕೊಡುತ್ತೇನೆ. ವಿದೇಶದಲ್ಲಿ ವ್ಯಾಸಂಗ ಮಾಡಲು ನಿನ್ನನ್ನು ಕಳುಹಿಸಿಕೊಡುತ್ತೇನೆ, ನಿನ್ನನ್ನು ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗುತ್ತೇನೆ, ನಿನ್ನೆಲ್ಲಾ ಆಸೆಗಳನ್ನು ಪೂರೈಸುತ್ತೇನೆ...' ಎಂದು ಅವಳನ್ನು ರಮಿಸಲು ಪ್ರಯತ್ನಿಸಿದಾಗ ಸೊರೆಯಾ ತನ್ನ ತಾಯಿಯ ಬಳಿಗೆ ಹೋಗಬೇಕೆಂದುಆಗ್ರಹಿಸುತ್ತಾಳೆ. ಅದರಿಂದ ಕೋಪೋದ್ರಿಕ್ತನಾದ ಗದ್ದಾಫಿ, 'ಸಾಕು ನಿಲ್ಲಿಸು. ನಾನು ಹೇಳುವುದನ್ನು ಸರಿಯಾಗಿ ಕೇಳಿಸಿಕೋ. ಇನ್ನು ಮುಂದೆ ಮನೆಗೆ ಹೋಗುವ ಯೋಚನೆಯನ್ನು ಬಿಟ್ಟುಬಿಡು. ನೀನು ನನ್ನೊಡನೆ ಇರಬೇಕು' ಎಂದು ಕಿರುಚಿ, ಮಬ್ರೌಕಳಿಗೆ ಅವಳನ್ನು ಸರಿಯಾಗಿ ತಯಾರುಮಾಡುವಂತೆ ಹೇಳಿ ಕಳುಹಿಸುತ್ತಾನೆ.
ಮಾರನೆಯ ದಿನ ಮಬ್ರೌಕ ಅವಳಿಗೆ ಖಾಕಿ ಸಮವಸ್ತ್ರ ನೀಡಿ ತಯಾರಾಗುವಂತೆ ಹೇಳುತ್ತಾಳೆ. ಅಲ್ಲಿಂದ ಅವಳನ್ನುಟ್ರೈಪೋಲಿಯ ಬಳಿಯಿದ್ದ ಬಾಬ್ ಅಲ್-ಅಜೀಜಿಯಾದ ಭವ್ಯ ಬಂಗಲೆಯ ಕೆಳಗಿದ್ದ ನೆಲಮಾಳಿಗೆಗೆ ಸಾಗಿಸಲಾಗುತ್ತದೆ. ಮೂರನೆಯ ರಾತ್ರಿ ಗದ್ದಾಫಿಯ ಕೈಯಿಂದ ತಪ್ಪಿಸಿಕೊಳ್ಳಲಾಗದ ಸೊರೆಯಾ ಅತ್ಯಾಚಾರದ ಬಳಿಕ ಸತತವಾಗಿ 36 ಗಂಟೆಗಳ ಕಾಲರಕ್ತಸ್ರಾವವಾಗಿ ಜರ್ಜರಿತವಾಗಿಹೋದಳು.
ಮನಸ್ಸು ಕಲಕುವ ವಿವರಣೆಗಳು
ಪುಸ್ತಕದಲ್ಲಿ ಬರುವ ವಿವರಣೆಗಳು ಎಂಥಾ ಕಲ್ಲು ಮನಸ್ಸಿನವರನ್ನೂ ಕಲಕಿಬಿಡುತ್ತವೆ. ಮಹಿಳೆಯರು ಪ್ರತಿಯೊಂದು ಪುಟ ಓದುವಾಗಲೂ ತಮ್ಮ ಎದುರಿಗೆ ಅತ್ಯಾಚಾರ ನಡೆಯುತ್ತಿದೆಯೇನೋ ಎನ್ನುವಷ್ಟು ವಾಸ್ತವವಾಗಿ ಪದಗಳು ಹೃದಯಕ್ಕೆ ನಾಟುತ್ತವೆ, ಸೊರೆಯಾಳ ನೋವು, ಕಿರುಚಾಟ, ಓದುಗರ ಕಿವಿಗೆ ಕೇಳಿಸಿದರೆ, ಅದರಲ್ಲಿ ಅಚ್ಚರಿಯೇನೂ ಇಲ್ಲ. ಕಣ್ಣಿಗೆ ಕಾಣುವುದೆಲ್ಲಾ ಹಾಲಲ್ಲ ಎನ್ನುವುದು ಎಷ್ಟು ಸತ್ಯ, ಗೋಮುಖ ವ್ಯಾಘ್ರವೆಂದರೆ ಹೇಗಿರುತ್ತದೆನ್ನುವುದು ಈ ಪುಸ್ತಕದಲ್ಲಿ ಬರುವ ಬಲಿಪಶುಗಳ ಕಥೆ ಓದಿದಾಗ ಅರಿವಾಗುತ್ತದೆ.
ಪ್ರತಿ ದಿನವೂ ಅವನ ಕಾಮತೃಷೆಗೆ ಬಲಿಯಾಗುತ್ತಿದ್ದ ಯುವತಿಯರಲ್ಲಿ ಒಬ್ಬಳಾದ ಸೊರೆಯಾ ಅವನು ಪುರುಷರ ಮೇಲೂ ಅತ್ಯಾಚಾರ ಮಾಡುತ್ತಿದ್ದುದ್ದನ್ನು ಕಣ್ಣಾರೆ ಕಾಣುತ್ತಿದ್ದಳು. ಅಂತಿಮವಾಗಿ 2009ರಲ್ಲಿ ಮನೆಗೆ ಮರಳಿ ಹೋಗುವ ಅವಕಾಶ ದೊರೆತರೂ ಸೊರೆಯಾ ಹೋಗಲು ಮನಸ್ಸು ಮಾಡುವುದಿಲ್ಲ, ಕಾರಣ, ಮದುವೆಯಾಗದೆ ಲೃಂಗಿಕ ಜೀವನ ನಡೆಸಿರುವ ತಾನು ತನ್ನ ಕುಟುಂಬಕ್ಕೆ ಕಳಂಕ ತರಬಾರದೆನ್ನುವ ಉದ್ದೇಶದಿಂದ!
ಹಾಗೆ ನೋಡಿದರೆ ಇದು ಪ್ರಕ್ರಿಯೆಯ ಒಂದು ಭಾಗವಾಗಿತ್ತು ಎನಿಸುತ್ತದೆ. ಗದ್ದಾಫಿಯ ಲೈಂಗಿಕ ಗುಲಾಮರು ದೃಹಿಕವಾಗಿ ಮತ್ತು ಮಾನಸಿಕವಾಗಿ ಮುರಿದು ಬಿದ್ದ ಮೇಲೆ ಅವರಿಗೆ ಚೂರುಪಾರು ಸ್ವಾತಂತ್ರ್ಯ ದೊರೆಯುತ್ತಿತ್ತು. ಅವರಿಗೆ ಮೊಬೈಲು ಫೋನು ನೀಡಲಾಗುತ್ತಿತ್ತು, ಬೇಕಿದ್ದಲ್ಲಿ ಮನೆಗೆ ಭೇಟಿ ನೀಡಿ ಮರಳಬಹುದಿತ್ತು. ಫೋನಿದ್ದರೂ ಕರೆ ಮಾಡುವುದು ಯಾರಿಗೆ? ಗೆಳೆಯರಿಗೋ, ಇಲ್ಲಾ ಮನೆಯವರಿಗೋ? ಎರಡೂ ಇಲ್ಲ! ಇನ್ನು ಅವಮಾನದಿಂದಾಗಿ ಮನೆಗೆ ಭೇಟಿ ನೀಡುವುದು ಸಾಧ್ಯವಿರಲಿಲ್ಲ... ಟರ್ಕಿಗೆ ತಪ್ಪಿಸಿಕೊಂಡು ಹೋದ ಯುವತಿಯರನ್ನು ಗದ್ದಾಫಿಯ ಜನ ಹುಡುಕಿ ತಂದು ಕೊಲ್ಲುತ್ತಿದ್ದರು, ಅದರ ಅರಿವೂ ಇತರರಿಗಿತ್ತು, ಪ್ರಾಣವಿದ್ದರೆ ಎಲ್ಲ ಎನ್ನುವ ಭಯದಲ್ಲಿ ತಮ್ಮ ಪಂಜರ ಬಿಟ್ಟು ಹಕ್ಕಿಗಳು ಎಲ್ಲೂ ಹಾರಿಹೋಗುತ್ತಿರಲಿಲ್ಲ.
ಮಹಿಳೆಯರ ರಕ್ತ ಪರೀಕ್ಷೆ
ಗದ್ದಾಫಿಯನ್ನು ಭೇಟಿ ಮಾಡಲು ಬರುವ ಮಹಿಳೆಯರೆಲ್ಲರ ರಕ್ತ ಪರೀಕ್ಷೆ ಮಾಡಲಾಗುತ್ತಿತ್ತು. ಅದಕ್ಕೆ ಕಾರಣವೂ ಇಲ್ಲದಿಲ್ಲ,ಅವನೇನಾದರೂ ಆ ಮಹಿಳೆಯರ ಜೊತೆ ಮಲಗಲು ಬಯಸಿದರೆ ಅವರಿಗೆ ಯಾವುದೇ ರೋಗವಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು!
ಲೇಖಕಿಯ ತನಿಖೆಯಿಂದ ಬಯಲಾಗಿರುವ ಮತ್ತೊಂದು ದೊಡ್ಡ ಸಂಗತಿಯೆಂದರೆ, ಗದ್ದಾಫಿ ಅನೇಕ ಸಾರ್ವಜನಿಕಪ್ರದರ್ಶನಗಳಲ್ಲಿ, ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದದ್ದು ತನ್ನ ಅಹಂ ನೀಗಿಸಿಕೊಳ್ಳಲು ಮಾತ್ರವಲ್ಲ, ತನ್ನ ಅತೃಪ್ತ ಲೃಂಗಿಕ ಹಸಿವಿಗೆ ಆಹಾರ ಹುಡುಕಲೂ ಸಹ. ಶಾಲಾ ಭೇಟಿಗಳು ಸದಾ ಅವನ ಮುಂದಿನ ಬಲಿಪಶುಗಳನ್ನು ಹುಡುಕುವ ಸಲುವಾಗಿ ಆಯೋಜನೆಗೊಳ್ಳುತ್ತಿದ್ದವು. ಅವನ ವಿದೇಶಿ ಪ್ರವಾಸವೂ ಇದಕ್ಕೆ ಹೊರತಾಗಿರಲಿಲ್ಲ. ಆಫ್ರಿಕನ್ ರಾಷ್ಟ್ರಗಳಿಗೆ ಭೇಟಿ ನೀಡಿದಾಗ ಸದಾ ಮಹಿಳಾ ಸಂಘಗಳು ಮತ್ತು ಗುಂಪುಗಳನ್ನು ಅವನು ಭೇಟಿ ಮಾಡುತ್ತಿದ್ದದ್ದು ಇದೇ ಉದ್ದೇಶಕ್ಕಾಗಿ ಅವನ ಬಯಕೆ ಪೂರೈಸಿಕೊಳ್ಳಲು ಹಣ, ಒಡವೆ, ಚಿನ್ನದ ಉಡುಗೊರೆಯ ಆಮಿಷ ಒಡ್ಡುತ್ತಿದ್ದ, ಟ್ರೈಪೋಲಿಯಲ್ಲಿ ಒಂದು ವಾರ ರಜೆಗೆ ಬರುವಂತೆ ಆಮಂತ್ರಣ ನೀಡುತ್ತಿದ್ದ. ಹಾಗೆಂದ ಮಾತ್ರಕ್ಕೆ ಎಲ್ಲರೂ ಅವನ ಆಮಿಷಗಳಿಗೆ ಒಪ್ಪಿ ಬರುತ್ತಿದ್ದರು ಎಂದಲ್ಲ, ಅವನದುಷ್ಟತನ ಪ್ರತಿಭಟಿಸಿದವರ ಮೇಲೆ ಹಲ್ಲೆ ನಡೆಸುತ್ತಿದ್ದ.
ಲಿಬಿಯಾದ ಅನೇಕರು ಅವನನ್ನು ಸ್ತ್ರೀಸಮಾನತಾವಾದಿ ಎಂದು ಹೊಗಳಿ ಅವನ ಪ್ರಸಿದ್ಧ ಅಮೆಝಾನ್ ಗಾರ್ಡ್ಗಳು ಅದಕ್ಕೆ ಪುರಾವೆ ಎಂದಿದ್ದರು. ಯಾವುದೇ ಮಧ್ಯಪ್ರಾಚ್ಯ ನಾಯಕ ಇಂತಹ ವಿಷಯ ಯೋಚಿಸುವುದಿಲ್ಲ, ಎಂದಿದ್ದರು. ಮಾತ್ರವಲ್ಲ ತನ್ನ ಗ್ರೀನ್ ಬುಕ್ ಪುಸ್ತಕದಲ್ಲಿ ಮಹಿಳೆಯರ ಸಮಾನತೆಯನ್ನು ಪ್ರತಿಪಾದಿಸಿದ್ದನು - ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಹಿಳೆಯರನ್ನು ಕೀಳಾಗಿ ಕಾಣುತ್ತಾರೆಂದೂ ಹೀಯಾಳಿಸಿದ್ದನು.
ಸಮವಸ್ತ್ರದಲ್ಲಿದ್ದ ಲೃಂಗಿಕ ಗುಲಾಮರು
ಮಹಾನ್ ಸ್ತ್ರೀ ವಿಮೋಚಕನ ವೇಷ ಧರಿಸಿ ಸಾರ್ವಜನಿಕವಾಗಿ ಭಾಷಣ ಮಾಡುತ್ತಿದ್ದ ಗದ್ದಾಫಿ ಮಹಿಳಾ ಮಿಲಿಟರಿಅಕಾಡೆಮಿಯನ್ನು ಸ್ಥಾಪಿಸಿ ಯುವತಿಯರನ್ನು ಬೇಟೆಯಾಡುವ ಪ್ರದೇಶವನ್ನು ಸೃಷ್ಟಿಸಿದ್ದ. ಅವನ ಪ್ರಸಿದ್ಧ ಸ್ತ್ರೀ ಅಂಗರಕ್ಷಕರಾದ ಅಮೆಝಾನ್ಸ್ ಕೇವಲ ಸಮವಸ್ತ್ರ ಧರಿಸಿದ್ದ ಲೃಂಗಿಕ ಗುಲಾಮರಾಗಿದ್ದರೆ ಹೊರತು ಅವನ ಅಂಗರಕ್ಷಕಿಯರಾಗಿರಲಿಲ್ಲ, ತಾವು ಹಿಡಿದ ಮೆಷಿನ್ ಗನ್ನುಗಳನ್ನು ಬಳಸುವುದೂ ಅವರಿಗೆ ತಿಳಿದಿರಲಿಲ್ಲ ಎನ್ನುವುದು ವಿಚಿತ್ರವಾದರೂ ಸತ್ಯ!
ಅವನ ಮಂತ್ರಿಗಳು ಮತ್ತು ಜನರಲ್ಗಳುಅವನನ್ನು ಮದುವೆ ಸಮಾರಂಭಗಳಿಗೆ ಆಹ್ವಾನಿಸಲೂ ಹೆದರುತ್ತಿದ್ದರು. ಟ್ರೈಪೋಲಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳನ್ನು ಅಪಹರಿಸಿ ಅತ್ಯಾಚಾರ ಮಾಡಲು ಒಂದು ರಹಸ್ಯ ಕೋಣೆಯನ್ನೇ ಹೊಂದಿದ್ದನು. ರಾಜ್ಯದ ಮುಖಂಡರ, ರಾಯಭಾರಿಗಳ ಮತ್ತು ವಿವಿಧ ಗಣ್ಯರ ಪತ್ನಿಯರು, ಗೆಳತಿಯರು, ಹೆಣ್ಣುಮಕ್ಕಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವುದರಲ್ಲಿ ಸಂತಸ ಪಡುತ್ತಿದ್ದನು. ಇದಕ್ಕಾಗಿ ಒಂದು ಇಲಾಖೆಯನ್ನೇ ಸೃಷ್ಟಿಸಿದ್ದ, ದೇಶಕ್ಕೆ ಭೇಟಿ ನೀಡುತ್ತಿದ್ದ ಇತರ ರಾಜ್ಯಗಳ ಮುಖಂಡರ ಜೊತೆಯಲ್ಲಿ ಅವರ ಪತ್ನಿಯರು, ಹೆಣ್ಣು ಮಕ್ಕಳು ಭೇಟಿ ನೀಡುತ್ತಿದ್ದಾರೆಯೇ ಇಲ್ಲವೇ ಎನ್ನುವ ಕಡತದೊಂದಿಗೆ ಇಲಾಖೆ ಸದಾ ಸಿದ್ಧವಾಗಿರುತ್ತಿತ್ತು. ಬಂದ ಮಹಿಳೆಯರಿಗೆ ಬೆರಗುಗೊಳಿಸುವ ಆಭರಣಗಳು ಅಥವಾ ಶುದ್ಧ ಚಿನ್ನದ ಉಡುಗೊರೆ ನೀಡಿ ಸರ್ವಾಧಿಕಾರಿಯನ್ನು ಭೇಟಿ ಮಾಡಲು ಆಮಂತ್ರಣ ನೀಡಲಾಗುತ್ತಿತ್ತು. ಟಿವಿಯಲ್ಲಿ ಬರುವ ಪತ್ರಕರ್ತೆಯರು, ನಟಿಯರ ಮೇಲೂ ಅವನ ಕಣ್ಣು ಬೀಳುತ್ತಿತ್ತು.
ಸದಾ ವಯಾಗ್ರ ಸೇವಿಸುತ್ತಿದ್ದ ಗದ್ದಾಫಿ ದಿನಕ್ಕೆ ನಾಲ್ಕು ಸಲ ವಿವಿಧ ಯುವತಿಯರೊಂದಿಗೆ ಮಲಗುತ್ತಿದ್ದ. ಒಂದು ರೀತಿಯಲ್ಲಿಅವನ ಕಾಮತೃಷೆಯನ್ನು ತಣಿಸಲೆಂದೇ ಲಿಬಿಯಾದ ಜನರಿದ್ದರೇನೋ ಎನಿಸುತ್ತದೆ. ಅವನ ಕರಿನೆರಳು ಕೇವಲ ಮಹಿಳೆಯರ ಮೇಲೆ ಎಂದುಕೊಂಡರೆ ತಪ್ಪಾಗುತ್ತದೆ. ಮಿಲಿಟರಿಯ ಹಲವು ಪುರುಷ ಸೈನಿಕರ ಮೇಲೂ ಅವನು ಅತ್ಯಾಚಾರವೆಸಗಿದ್ದ ಎನ್ನುವುದು ಲೇಖಕಿಯತನಿಖೆಯಿಂದ ಹೊರಬಿದ್ದಿದೆ.
ಗಾಳಿಯನ್ನೂ ಮಾರಬಲ್ಲ ಮಬ್ರೌಕ
ಅಚ್ಚರಿಯ ವಿಷಯವೆಂದರೆ ಗದ್ದಾಫಿಯ ಈ ನೀತಿಗೆಟ್ಟ ಬದುಕಿನ ಬಗ್ಗೆ ಹಲವರಿಗೆ ತಿಳಿದೂ ಮೌನವಹಿಸಿದ್ದು. ಹೌದು, ಅನೇಕರಿಗೆ ಅವನ ಲೃಂಗಿಕ ಗೀಳಿನ ಬಗ್ಗೆ ತಿಳಿದಿತ್ತು. ಅವನ ಸಂಬಂಧಿಗಳಿಗೆ ತಿಳಿದಿತ್ತು. ಅವನ ಕುಟುಂಬ, ಪತ್ನಿ ಮತ್ತು ಮಕ್ಕಳಿಗೆ ಇದು ತಿಳಿಯದೆ ಇರಲು ಸಾಧ್ಯವಿಲ್ಲ. ತನ್ನ ಕೆಳಗಿನವರನ್ನು ಅವಮಾನ ಮಾಡಬೇಕೆಂದರೆಅವರ ಪತ್ನಿ ಇಲ್ಲವೇ ಹೆಣ್ಣು ಮಕ್ಕಳನ್ನು ಅಪಹರಿಸುತ್ತಿದ್ದ, ಹಾಗಾಗಿ ಅವನ ವಿರುದ್ಧ ದನಿಯೆತ್ತಲು ಎಲ್ಲರೂ ಹಿಂಜರಿಯುತ್ತಿದ್ದರು. ಅತ್ಯಾಚಾರ ಅವನಿಗೆ ಒಂದು ಅಸ್ತ್ರವಾಗಿತ್ತು, ಅದನ್ನು ಎಲ್ಲಾ ರೀತಿಯಲ್ಲೂಬಳಸಿಕೊಳ್ಳುತ್ತಿದ್ದ!
ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ. ಗದ್ದಾಫಿಯ ಬಲಗೃ ಬಂಟ ಯಾವುದೇ ಗಂಡಸಲ್ಲ, ಬದಲಾಗಿ ಮಬ್ರೌಕ ಷರೀಫ್ ಎನ್ನುವ ಮಹಿಳೆ. ಅವಳ ಪರಿಚಯ ಗದ್ದಾಫಿಯ ನಿಕಟವರ್ತಿಗಳಿಗೆ ಮಾತ್ರವಲ್ಲ ಅವನನ್ನು ಭೇಟಿ ಮಾಡಲು ಬರುವ ಎಲ್ಲಾ ಗಣ್ಯರಿಗೂ ಇತ್ತು. ಅವಳು ಯಾರು? ಅವಳ ಮತ್ತು ಗದ್ದಾಫಿಯ ಸಂಬಂಧವೇನು? ಅವಳೇಕೆ ಗದ್ದಾಫಿಯ ಎಲ್ಲ ಅನೈತಿಕ ಕೃತ್ಯಗಳಿಗೂ ಬೆಂಬಲ ನೀಡುತ್ತಿದ್ದಳು? ಅವಳೂ ಅವನ ಬಲಿಪಶುವೆ? ಅವಳು ಯಾರ ಮೇಲಾದರೂ ಸೇಡು ತೀರಿಸಿಕೊಳ್ಳುತ್ತಿದ್ದಳೆ? ಬಾಬ್ ಅಲ್ ಅಜೀಜಿಯಾಕ್ಕೆ ಬರುವ ಮುನ್ನ ಅವಳ ಜೀವನ ಹೇಗಿತ್ತು? ಹೀಗೆ ಹತ್ತು ಹಲವಾರು ಪ್ರಶ್ನೆಗಳು ಓದುಗರ ಮನದಲ್ಲಿ ಮೂಡುತ್ತವೆ. ಈ ಪ್ರಶ್ನೆಗಳಿಗೆ ಉತ್ತರವಾಗಿ ಪುಸ್ತಕದಲ್ಲಿ ಹತ್ತು ಪುಟಗಳ ಅಧ್ಯಾಯ ಇದೆ, ಆದರೆ ಈ ಪುಟಗಳಲ್ಲಿ ಅವಳ ಸಂಪೂರ್ಣ ವ್ಯಕ್ತಿತ್ವವಾಗಲಿ, ಅವಳ ಪರಿಚಯವಾಗಲಿ ಓದುಗರಿಗೆ ದೊರೆಯುವುದಿಲ್ಲ.
ಲೇಖಕಿಯ ತನಿಖೆಯ ಪ್ರಕಾರ 50ರ ಆಸುಪಾಸಿನಲ್ಲಿದ್ದ ಮಬ್ರೌಕ ಗದ್ದಾಫಿಯ ಸಂಗಡ ಇರುತ್ತಿದ್ದಳು, ಸದಾ ಗಂಭೀರವಾಗಿ ಬುರ್ಖಾದಲ್ಲಿದ್ದ ಅವಳು ಎಂದೂ ಮೇಕಪ್ ಧರಿಸುತ್ತಿರಲಿಲ್ಲ. ಆದರೆ ಒಬ್ಬ ಯೂರೋಪಿಯನ್ ರಾಯಭಾರಿಯ ಪ್ರಕಾರ ಪ್ರಾಯಶಃ- ಪ್ರಾಯದಲ್ಲಿ ಅವಳು ಬಹಳ ಸುಂದರಿಯಾಗಿದ್ದಿರಬಹುದು. ಯಾವುದೇ ಅಧಿಕಾರಿಗಳು, ರಾಯಭಾರಿಗಳು ಅವಳ ಹದ್ದಿಕಣ್ಣಿನಿಂದ ತಪ್ಪಿಸಿಕೊಂಡು ಹೋಗುವ ಹಾಗಿರಲಿಲ್ಲ. ಮಬ್ರೌಕ ಒಂದು ರೀತಿಯಲ್ಲಿ ಗದ್ದಾಫಿಯ ಕಿವಿಯಾಗಿದ್ದಳು, ಯಾವ ವಿಷಯವೇ ಇರಲಿ ಅದು ಅವಳ ಮೂಲಕವೇ ಸರ್ವಾಧಿಕಾರಿಯ ಕಿವಿ ತಲುಪಬೇಕಾಗಿತ್ತು.
ಹುಡುಗಿಯರ ಶಾಪಿಂಗ್
ಆಗಾಗ ಹುಡುಗಿಯರ ಶಾಪಿಂಗ್ ಮಾಡಲು ಪ್ಯಾರಿಸ್ಗೆ ಹೋಗುತ್ತಿದ್ದ ಮಬ್ರೌಕ ಒಮ್ಮೆ ಫ್ರೆಂಚ್ ರಿಪಬ್ಲಿಕ್ನ ಅಧ್ಯಕ್ಷ ನಿಕೋಲಸ್ ಸರ್ಕೋಜಿಯ ತಂಗಿ ಕ್ಯಾರೊಲಿನ್ಸರ್ಕೋಜಿಯನ್ನು ಕಂಡು, ಅವಳನ್ನು ಲಿಬಿಯಾಕೆ ಬರುವಂತೆ ಆಮಂತ್ರಿಸಿದ್ದಳು.ಅವಳು ಬಂದಳೋ ಬಿಟ್ಟಳೋ, ಆದರೆ ಸರ್ಕೋಜಿಯ ಪತ್ನಿ ಕಾರ್ಲ ಬ್ರೂನಿ ಒಮ್ಮೆ ಲಿಬಿಯಾಕ್ಕೆ ಭೇಟಿ ನೀಡಿದ್ದಳು! ಪ್ಯಾರಿಸ್ನಲ್ಲಿ ಕುಳಿತು ಯಾವ ಸುಂದರಿಯರನ್ನು ಲಿಬಿಯಾಕೆ ಕರೆದೊಯ್ಯಬೇಕೆನ್ನುವ ಲೆಕ್ಕಾಚಾರ ಹಾಕುತ್ತಿದ್ದಳು, ಹಣ, ಒಡವೆ,ಪ್ರವಾಸದ ಆಮಿಷ ತೋರುತ್ತಿದ್ದಳು.
ಗದ್ದಾಫಿಗೆ ಬೇಕಾದ ಸುಗಂಧ ದ್ರವ್ಯಗಳನ್ನೂ, ಪೌಡರ್, ಫೌಂಡೇಷನ್, ಮ್ಯಾಕ್ ಕನ್ಸೀಲರ್ ಮತ್ತು ಇನ್ನಿತರ ಸೌಂದರ್ಯಪ್ರಸಾಧನಗಳನ್ನು ಅವಳೇ ಖರೀದಿಸುತ್ತಿದ್ದಳು. ಸುಳ್ಳು, ಮೋಸ, ಯೋಜನೆ, ಭ್ರಷ್ಟಾಚಾರ, ಕಪ್ಪು ಜಾದೂ ಎಲ್ಲವನ್ನೂ ತನ್ನ ಕಾರ್ಯ ಸಾಧನೆಗೆ ಬಳಸಿಕೊಳ್ಳುತ್ತಿದ್ದಳು.ಅವಳನ್ನು ಬಾಲ್ಯದಲ್ಲಿ ಕಂಡವರ ಪ್ರಕಾರಅವಳು ವಿಷದ ಹಾವು. ಗಾಳಿಯನ್ನು ಚೀಲದಲ್ಲಿ ತುಂಬಿ ಜನರಿಗೆ ಮಾರಾಟ ಮಾಡುವ ಚಾಲಾಕಿತನ ಇರುವವಳು!
ಮಬ್ರೌಕಳ ತಂದೆ ಷರೀಫ್ ಕುಟುಂಬಕ್ಕೆ ಸೇರಿದವನು, ಆದರೆ ದಕ್ಷಿಣ ಲಿಬಿಯಾದ ಘಾಟ್ ಪಟ್ಟಣದ ಕೆಳಗಿನ ವರ್ಗದ ಹುಡುಗಿಯನ್ನು ಪ್ರೀತಿಸಿ ಮದುವೆಯಾದನು.ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹುಟ್ಟಿದರು, ಮಬ್ರೌಕ ಎರಡನೆಯವಳು.ಅವರು ತಮಗೆ ಬಂದಿದ್ದ ದುರ್ಗತಿಯನ್ನು ನಿವಾರಿಸಿಕೊಳ್ಳಲು ಇಬ್ಬರೂಮಕ್ಕಳನ್ನು ಗುಲಾಮರಿಗೆಕೊಟ್ಟುಬಿಟ್ಟರು.
ಅತಿ ಚಿಕ್ಕ ವಯಸ್ಸಿನಲ್ಲೇ ಮಬ್ರೌಕಳನ್ನು ಗದ್ದಾಫಿಯ ಕುಲದ ಒಬ್ಬ ಶ್ರೀಮಂತನಿಗೆ ಒಪ್ಪಿಸುವುದಾಗಿ ತೀರ್ಮಾನಿಸಲಾಯಿತು. ಗದ್ದಾಫಿಯ ಸಹೋದರಿಯೊಬ್ಬಳನ್ನು ಮೊದಲೇ ಮದುವೆಯಾಗಿದ್ದ ಮಸೌದ್ ಅಬ್ದೆಲ್ ಹಾಫಿಜ್ ತನ್ನ ಹೆಂಡತಿಯನ್ನು ಬಿಟ್ಟು ಮಬ್ರೌಕಳನ್ನು ಮದುವೆಯಾದ. ಕೆಲವೇ ದಿನಗಳಲ್ಲಿಅವನು ಅವಳನ್ನೂ ಬಿಟ್ಟುಬಿಟ್ಟ. ಮರಳಿ ಘಾಟ್ಗೆ ಬಂದ ಮಬ್ರೌಕ ಒಂದು ದಿನ ಇದ್ದಕ್ಕಿದಂತೆ ಟ್ರೈಪೋಲಿಯಲ್ಲಿಕಾಣಿಸಿಕೊಂಡಳು.
ಗದ್ದಾಫಿಯನ್ನು ಭೇಟಿ ಮಾಡಿದ ಕ್ಷಣದಿಂದ ಅವನಿಗೆ ಬಹಳ ಹತ್ತಿರವಾದಳು,ಅವನ ಬಲಗೈ ಬಂಟಳಾದಳು. 'ತನ್ನ ಕಪ್ಪು ಜಾದೂವಿನಿಂದ ಗದ್ದಾಫಿಯನ್ನು ತನ್ನೆಡೆಗೆ ಓಲೈಸಿಕೊಂಡಿದ್ದಳು, ಅವನ ವಿಶ್ವಾಸ ಗಳಿಸಿದ್ದಳು' ಎಂದು ಅವಳ ಪರಿಚಯದವರು ಲೇಖಕಿಗೆ ಹೇಳಿದರು.
ವೇಶ್ಯಾವೃತ್ತಿಗೆ ಶರಣು
ಆಗಸ್ಟ್ 23, 2011ರಂದು ಟ್ರೈಪೋಲಿ ಕುಸಿಯಿತು, ಅಕ್ಟೋಬರ್ 20ರಂದು ಗದ್ದಾಫಿ ನಾಯಿಯ ಹಾಗೆ ಸತ್ತ. ಜನರಿಗೆಅವನ ಅರಮನೆಯಲ್ಲಿ ಕೆಲವು ವಿಚಿತ್ರಸಂಗತಿಗಳು ಕಂಡುಬಂದವು: ಬಚ್ಚಿಟ್ಟ ಸಾವಿರಾರು ಬ್ಲೂಫಿಲಂಗಳು, ಖಾಸಗಿ ಮೃಗಾಲಯ, ಸಾಕಿದ ಸಿಂಹಗಳು, ಅಮ್ಯೂಸ್ಮೆಂಟ್ ಪಾರ್ಕ್, ಚಿನ್ನದ ಪಿಸ್ತೂಲುಗಳು, ಚಿನ್ನದ ಸೋಫಾ, ಅಮೇರಿಕನ್ ನಟ ಜೇಕ್ ಗಿಲ್ಲೆನ್ಹಾಲ್ನ ಆಳೆತ್ತರದ ಭಿತ್ತಿಚಿತ್ರ, ಅಮೆರಿಕದ ವಿದೇಶಾಂಗ ಸಚಿವೆಯಾಗಿದ್ದ ಕಾಂಡೊಲಿಸಾ ರೃಸ್ಗೆ ಮೀಸಲಾದ ಒಂದು ಫೋಟೋ ಆಲ್ಬಮ್ ('ನನ್ನ ಪ್ರಿಯ ಕಪ್ಪು ಆಫ್ರಿಕನ್ ಮಹಿಳೆ ಎಂದು ಗದ್ದಾಫಿ ಅವಳನ್ನು ಕರೆಯುತ್ತಿದ್ದ'), ಸುರಂಗಗಳು ಮತ್ತು ಸೊರೆಯಾ ಮತ್ತು ಅಸಂಖ್ಯಾತ ಇತರ ಒತ್ತೆಯಾಳುಗಳನ್ನು ಬಚ್ಚಿಟ್ಟಿದ್ದ ಭೂಗತ ನೆಲಮಾಳಿಗೆ.
ಇಂದು 24 ವರ್ಷದ ಸೊರೆಯಾ ಟ್ರೈಪೋಲಿಯಲ್ಲಿ ಏಕಾಂಗಿಯಾಗಿ, ಅನಾಮಧೇಯಳಾಗಿ ವಾಸಿಸುತ್ತಿದ್ದಾಳೆ. ಯಾವುದೇ ಸ್ನೇಹಿತರಿಲ್ಲದೆ, ಒಂಟಿಯಾಗಿ ತನ್ನ ಅಪಾರ್ಟ್ಮೆಂಟಿನಲ್ಲಿ ಕುಳಿತು ದಿನಕ್ಕೆ ಮೂರು ಸಿಗರೇಟ್ ಪ್ಯಾಕ್ಗಳನ್ನು ಸೇದುತ್ತಾ ಕಿಟಕಿಯಿಂದ ಹೊರಗೆ ನೋಡುತ್ತಾ, ತನಗೆ ಮತ್ತು ಇತರರಿಗೆ ಏನಾಯಿತು ಎಂದು ವಿಶ್ವ ಗುರುತಿಸುತ್ತದೆಯೇ ಎಂದು ಚಕಿತಗೊಳ್ಳುತ್ತಾಳೆ. ಲಿಬಿಯಾದಲ್ಲಿ ಒಂಟಿ ಮಹಿಳೆಗೆ ಯಾವುದೇ ಅಸ್ತಿತ್ವವಿಲ್ಲ, ಗದ್ದಾಫಿಯ ಸಾವಿನ ಬಳಿಕ ಅನೇಕರಿಗೆ ವೇಶ್ಯಾವೃತ್ತಿಗೆ ಶರಣಾಗದೆ ಬೇರೆ ದಾರಿ ಕಂಡಿಲ್ಲ!
ಬಲಿಪಶುಗಳು
ಪುಸ್ತಕದಲ್ಲಿರುವ ವಿವರಗಳು ಅಘಾತಕರ ಮತ್ತು ಭಯಾನಕ, ಮೇಲಾಗಿ ನೊಂದ ಮಹಿಳೆ ಮೌನವಾಗಿರಬೇಕು ಎನ್ನುವ ಸಮಾಜದ ಕಟ್ಟುಪಾಡು ಹೃದಯ ವಿದ್ರಾವಕ ದೃಶ್ಯಗಳನ್ನು ನೀಡುತ್ತದೆ. ಲೇಖಕಿ ಗದ್ದಾಫಿಗೆ ಬಲಿಪಶುಗಳಾದ ಮಹಿಳೆಯರ ಯಾತನೆ, ಒಂಟಿತನ ಮತ್ತು ಭಯವನ್ನು ನಿರ್ಭಿಡೆಯಿಂದ ತೋರಿಸಿದ್ದಾರೆ. ಒಂದು ರೀತಿಯಲ್ಲಿ ಈ ಯುವತಿಯರು ಕೇವಲ ಸರ್ವಾಧಿಕಾರಿಯೊಬ್ಬನ ಬಲಿಪಶುಗಳಲ್ಲ, ಎಲ್ಲವನ್ನೂ ಮೌನವಾಗಿ ಸಹಿಸಿಕೊಳ್ಳಬೇಕ್ಕೆನ್ನುವ ಸಮಾಜದ ಬಲಿಪಶುಗಳೂ ಹೌದು.
ಈ ಪುಸ್ತಕ ಗದ್ದಾಫಿಯ ಸರ್ವಾಧಿಕಾರ ಹೇಗೆ ಹಲವು ದುರಂತಗಳಿಗೆ ಕಾರಣವಾಯಿತು ಎನ್ನುವುದಕ್ಕೆ ಸಾಕ್ಷಿ, ಮಾತ್ರವಲ್ಲ ಹತೋಟಿಯಿಲ್ಲದ ಅಧಿಕಾರ ಹೇಗೆ ವೃಯಕ್ತಿಕ ಮಟ್ಟದಲ್ಲಿ ತೀವ್ರವಾದ ನಷ್ಟಗಳನ್ನು ಉಂಟುಮಾಡಬಲ್ಲದು ಎನ್ನುವುದಕ್ಕೆ ಉತ್ತಮ ನಿದರ್ಶನ, ಗದ್ದಾಫಿಯ ಲೃಂಗಿಕ ಅಪರಾಧಗಳ ಬಗ್ಗೆ ಮೌನದ ಪಿತೂರಿ ಹೂಡಿರುವ ಹೊಸ ಲಿಬಿಯಾದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆಯಬೇಕಾಗಿರುವ ಒಂದು ಮಹತ್ವದ ದಾಖಲೆ, ಹೊಸ ಆಡಳಿತ ಹಿಂದಿನ ದುರಂತಗಳನ್ನು ಎದುರಿಸಲು ಬೇಕಾದ ಪ್ರಭಾವಶಾಲಿ ಅಸ್ತ್ರ.
-ಚೈತ್ರಾ ಅರ್ಜುನಪುರಿ, ದುಬೈ
carjunp@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


