ಅಂಬರೀಷ್ ಗೆ ಸ್ಲೀಪ್ ಅಪ್ನಿಯ?

ಅಂಬರೀಷ್ ಅವರು ಬಹುಕಾಲದಿಂದ ತೊಂದರೆಗೆ ಒಳಗಾಗಿರುವುದು 'ಸ್ಲೀಪ್ ಅಪ್ನಿಯ' ಎಂಬ ವೈದ್ಯಕೀಯ ಸಮಸ್ಯೆಯಿಂದ. ಈಗ ಅವರು ಆಸ್ಪತ್ರೆಗೆ ದಾಖಲಾಗಲು ಕಾರಣವಾಗಿರುವುದು ಸಹ 'ಸ್ಲೀಪ್ ಅಪ್ನಿಯ' ದ ಕಾರಣದಿಂದ ಎನ್ನುತ್ತವೆ ಮೂಲಗಳು.
ಏನಿದು ಸ್ಲೀಪ್ ಅಪ್ನಿಯ?
ಅತ್ಯಂತ ಸಾಮಾನ್ಯವಾಗಿ ಕಾಣುವ ತೊಂದರೆ- ಇಲ್ಲಿ ವ್ಯಕ್ತಿಯು ನಿದ್ರಿಸುತ್ತಿರುವಾಗ ಒಂದು ಅಥವಾ ಅದಕ್ಕಿಂತ ಹೆಚ್ಚು ಬಾರಿ - ಉಸಿರಾಟ ಕ್ಷಣಕಾಲ 'ನಿಲ್ಲುತ್ತದೆ'. ನೀವು ಚಲಿಸುತ್ತಿರುವ ವೀಡಿಯೊ ಚಿತ್ರವನ್ನು, ಅಥವಾ ಹಾಡನ್ನು "ಪಾಜ್' (pause) ಮಾಡುವುದಿಲ್ಲವೇ ಹಾಗೆ! ಅಥವಾ ಅತಿ ದೀರ್ಘವಾದ ಉಸಿರು ತೆಗೆದುಕೊಂಡ ನಂತರ ಕ್ಷಣ ಕಾಲ ಉಸಿರಾಟ (ಕೆಲವೇ ಸೆಕೆಂಡ್ ನಿಂದ ನಿಮಿಷಗಳ ವರೆಗೆ ) ನಿಲ್ಲುತ್ತದೆ. ಇದು ಒಂದು ಗಂಟೆಗೆ ೩೦ ಬಾರಿ ಅಥವಾ ಅದಕ್ಕಿಂತ ಹೆಚ್ಚು ಬಾರಿ ಆಗಬಹುದು. ನಂತರ ಸಹಜವಾದ ಉಸಿರಾಟ ಶುರುವಾಗುತ್ತದೆ, ಕೆಲವೊಮ್ಮೆ ದೊಡ್ಡ ಗೊರಕೆಯೊಂದಿಗೆ ಅಥವಾ ಉಸಿರು ಬಿಗಿದಂತೆ ಶಬ್ದ - ರೋಗಿಯಲ್ಲಿ ಕಾಣಿಸುವುದು ಅತ್ಯಂತ ಸಾಮಾನ್ಯ.
ಇದು ಅತಿಯಾದ ತೂಕ ಹೊಂದಿರುವ ಬೊಜ್ಜು ಶರೀರದ ವ್ಯಕ್ತಿಗಳಲ್ಲಿ ಅತ್ಯಂತ ಸಾಮಾನ್ಯ. ನಿದ್ರೆಯಲ್ಲಿ ತೀರ ತೊಂದರೆ ತರುವ ಸ್ಲೀಪ್ ಅಪ್ನಿಯ - ಹಗಲಿನ ವೇಳೆಯಲ್ಲಿ ತುಂಬಾ ಸುಸ್ತಾಗುವಂತೆ ಅಥವಾ ತೀರ ನಿದ್ರೆ ಮಾಡಲು ಕಾರಣವಾಗುವ ಅತಿ ಮುಖ್ಯ ಕಾರಣ ಇದು.
ಈ ಸಮಯದಲ್ಲಿ ಶ್ವಾಸಕೋಶದಲ್ಲಿ ಕಾರ್ಬನ್ ಡೈಆಕ್ಸೈಡ್ ಮಟ್ಟ (ಇಂಗಾಲದ ಡೈಆಕ್ಸೈಡ್) ಹೆಚ್ಚಿ ಉಸಿರಾಟ ತೀರಾ ಕಷ್ಟಕರ ಆಗುವುದರ ಜೊತೆಗೆ, ರೋಗಿಯು ವಿಶ್ರಾಂತಿರಹಿತ ಆಗುತ್ತಾನೆ.
ಸ್ಲೀಪ್ ಅಪ್ನಿಯ ಸಾಮಾನ್ಯವಾಗಿ ಪತ್ತೆ ಮಾಡಲಾಗುವುದಿಲ್ಲ, ಅಂದರೆ ವೈದ್ಯರು ಸಾಮಾನ್ಯವಾಗಿ 'ತಮ್ಮ ರುಟೀನ್ ಚೆಕಪ್' ಗಳಲ್ಲಿ ಪತ್ತೆ ಹಚಲಾಗುವುದಿಲ್ಲ. ರಕ್ತ ಪರೀಕ್ಷೆ ಯಿಂದಲೂ ಪತ್ತೆ ಹಚ್ಚಲಾಗುವುದಿಲ್ಲ. ನಿದ್ದೆಯ ಹೊತ್ತಲ್ಲಿ ಆಗುವ ಕಾರಣ ರೋಗಿಗೂ ತಿಳಿಯುವುದಿಲ್ಲ, ಕುಟುಂಬದ ಸದಸ್ಯರು ಅಥವಾ ಜೊತೆಯಲ್ಲಿ ನಿದ್ರಿಸುತ್ತಿರುವವರು ಹೆಚ್ಚಿನ ಸಮಯದಲ್ಲಿ ಸ್ಲೀಪ್ ಅಪ್ನಿಯದ ಲಕ್ಷಣಗಳನ್ನು ಮೊದಲ ಬಾರಿಗೆ ಗುರುತಿಸಬಲ್ಲರು.
- ಡಾವೆಂಕಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


