ಎಲ್ಪಿಜಿ ಬಳಕೆದಾರರಿಗೆ ಮುಷ್ಕರ ಬಿಸಿ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಎಲ್ಪಿಜಿ ವಿತರಕರ ಸಂಘ ಫೆ. 25 ರಂದು ದೇಶಾದ್ಯಂತ ಅನಿದೀಷ್ಟಾವಧಿ ಮುಷ್ಕರ ನಡೆಸಲಿದ್ದು, ಎಲ್ಪಿಜಿ ಬಳಕೆದಾರರಿಗೆ ಮುಷ್ಕರ ಬಿಸಿ ತಟ್ಟಲಿದೆ.
ಬೆಲೆ ನಿಗದಿ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವ ಸರ್ಕಾರ ವಿರುದ್ಧ ಅನಿದೀಷ್ಟಾವಧಿ ಮುಷ್ಕರ ನಡೆಸಲು ವಿತರಕರ ಸಂಘ ಮುಂದಾಗಿದೆ ಎಂದು ಬೆಂಗಳೂರಿನಲ್ಲಿ ಎಲ್ಪಿಜಿ ವಿತರಕರ ಸಂಘದ ಕಾರ್ಯದರ್ಶಿ ಸತ್ಯನ್ ಅವರು ಹೇಳಿದ್ದಾರೆ.
ನಿಗದಿತ ಬೆಲೆ ಕಡ್ಡಾಯಗೊಳಿಸದೆ ಇರುವುದರಿಂದ ಎಲ್ಪಿಜಿ ವಿತರಕರಿಗೆ ಅನ್ಯಾಯವಾಗಿದೆ. ಹೀಗಾಗಿ ಸರ್ಕಾರ ವಿತರಕರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು. ಅಲ್ಲದೆ ಹೊಸದಾಗಿ ಎಲ್ಪಿಜಿ ಸಿಲಿಂಡರ್ ವಿತರಣೆಗೆ ಲೈಸನ್ಸ್ ನೀಡಬಾರದು. ಈಗಿರುವ ಅಗ್ರಿಮೆಂಟ್ಗಳು 50 ವರ್ಷಗಳ ಹಳೆಯದಾಗಿದ್ದು, ಆದಷ್ಟು ಬೇಗ ಅಗ್ರಿಮೆಂಟ್ಗಳ ನವೀಕರಣಕ್ಕೆ ಮುಂದಾಗಬೇಕು. ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುವವರೆಗೂ ಮುಷ್ಕರ ಕೈಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಎಲ್ಪಿಜಿ ಸಿಲಿಂಡರ್ ವಿತರಕರ ಮುಷ್ಕರ ಹಿನ್ನೆಲೆಯಲ್ಲಿ ಫೆಬ್ರವರಿ 25 ರಿಂದ ಸಿಲಿಂಡರ್ ವಿತರಣೆ ಬಂದ್ ಆಗಲಿದ್ದು, ಇದರಿಂದ ಗ್ರಾಹಕರು ತೊಂದರೆ ಅನುಭವಿಸಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


