ತೃತೀಯರಂಗಕ್ಕೆ ಅಧಿಕೃತ ಚಾಲನೆ

ನವದೆಹಲಿ: ಯುಪಿಎ ಮತ್ತು ಎನ್ಡಿಎ ಮೈತ್ರಿಕೂಟಗಳಿಗೆ ಪರ್ಯಾಯ ತೃತೀಯರಂಗಕ್ಕೆ ಅಧಿಕೃತ ಚಾಲನೆ ದೊರೆತಿದ್ದು, ನವದೆಹಲಿಯಲ್ಲಿ 11 ಪಕ್ಷಗಳನ್ನು ಒಳಗೊಂಡಿರುವ ತೃತೀಯ ರಂಗದ ಮೊದಲ ಸಭೆ ನಡೆಯಿತು.
ಸಿಪಿಐ(ಎಂ), ಜೆಡಿಯು, ಜೆಡಿಎಸ್, ಎಜಿಪಿ, ಬಿಜೆಡಿ ಮತ್ತು ಅಣ್ಣಾ ಡಿಎಂಕೆ ಯಂತಹ 11 ಪಕ್ಷಗಳ ತೃತೀಯರಂಗಕ್ಕೆ ಅಧಿಕೃತ ಚಾಲನೆ ದೊರೆತಿದೆ. ಇಂದು ನವದೆಹಲಿಯಲ್ಲಿ ನಡೆದ ತೃತೀಯರಂಗದ ಸಭೆಯಲ್ಲಿ 11 ಪಕ್ಷಗಳ ಮುಖಂಡರು ಭಾಗವಹಿಸಿದ್ದರು. ಅಲ್ಲದೆ ತಾವು ಎನ್ಡಿಎ ಮತ್ತು ಯುಪಿಎ ಮೈತ್ರಿಕೂಟಗಳಿಗೆ ಪರ್ಯಾಯ ಎಂದು ಘೋಷಿಸಿಕೊಂಡಿವೆ.
ತೃತೀಯರಂಗದ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಪಿಐ(ಎಂ) ಮುಖಂಡ ಪ್ರಕಾಶ್ ಕಾರಟ್, ಕೇಂದ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ನಾವು ಪರ್ಯಾಯ ರಂಗವನ್ನು ತಂದಿದ್ದು, ಆ ಮೂಲಕ ಮತ್ತೊಂದು ಆಯ್ಕೆಯನ್ನು ದೇಶದ ಜನತೆಯ ಮುಂದಿಟ್ಟಿದ್ದೇವೆ ಎಂದು ಹೇಳಿದರು.
ಅಂತೆಯೇ ತೃತೀಯರಂಗದ ಪ್ರಧಾನಿ ಅಭ್ಯರ್ಥಿ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ಕಾರಟ್ ಅವರು, ಈ ವರೆಗೂ ಯಾವೊಬ್ಬ ನಾಯಕರು ಪ್ರಧಾನಿ ಅಭ್ಯರ್ಥಿ ಕುರಿತು ಮಾತುಕತೆ ನಡೆಸಿಲ್ಲ ಎಂದು ಮೇಡಂ ಜಯಲಲಿತಾ ಅವರು ಹೇಳಿದ್ದಾರೆ. ಈ ಬಗ್ಗೆ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಚುನಾವಣೆ ನಂತರ ಈ ಬಗ್ಗೆ ಘೋಷಿಸುತ್ತೇವೆ ಎಂದು ಹೇಳಿದರು.
ಇಂದು ನಡೆದ ಸಭೆಯಲ್ಲಿ ದೇಶದ ಪ್ರಮುಖ ರಾಜಕೀಯ ಪಕ್ಷಗಳಾದ ಸಮಾಜವಾದಿ ಪಕ್ಷ, ಅಣ್ಣಾ ಡಿಎಂಕೆ, ಜೆಡಿಯು, ಜೆಡಿಎಸ್, ಸಿಪಿಐ(ಎಂ) ಸೇರಿದಂತೆ ಪ್ರಾದೇಶಿಕ ಪಕ್ಷಗಳಾದ ಎಜಿಪಿ, ಜೆವಿಎಂ, ಬಿಜೆಡಿ ಸೇರಿದಂತೆ ಒಟ್ಟು 11 ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


