ಈಗಿನ ಸುದ್ದಿ

ಮಾಧ್ಯಮಗಳ ಕುರಿತು ಶಿಂಧೆ ಹೇಳಿಕೆ: ಕಾಂಗ್ರೆಸ್‌ನ ಅಧಃ ಪತನವೆಂದ ಬಿಜೆಪಿ

ಮಾಧ್ಯಮಗಳ ಕುರಿತು ಶಿಂಧೆ ಹೇಳಿಕೆ: ಕಾಂಗ್ರೆಸ್‌ನ ಅಧಃ ಪತನವೆಂದ ಬಿಜೆಪಿ
Published On :

ನವದೆಹಲಿ: ಮಾಧ್ಯಮಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಗೃಹಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಹೇಳಿಕೆಯನ್ನು ಟೀಕಿಸಿರುವ ಬಿಜೆಪಿ, ಇದು ಕಾಂಗ್ರೆಸ್ ಪಕ್ಷದ ಅಧಃ ಪತನವೆಂದು ಕಿಡಿಕಾರಿದೆ.

ವಿದ್ಯುನ್ಮಾನ ಮಾಧ್ಯಮಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಶಿಂಧೆ ವಿರುದ್ಧ ಕಿಡಿಕಾರಿದ ಬಿಜೆಪಿ ಮುಖಂಡ ಅಬ್ಬಾಸ್ ನಖ್ವಿ ಅವರು, ಕಾಂಗ್ರೆಸ್ ತನ್ನ ವೈಫಲ್ಯದಿಂದಾಗಿ ಕುಗ್ಗಿಹೋಗಿದ್ದು, ಸತ್ಯಾಂಶವನ್ನು ಅವರಿಗೆ ಒಪ್ಪಿಕೊಳ್ಳಲು ಸಾಧ್ಯವಾಗದೆ ತೀವ್ರ ಹತಾಶರಾಗಿದ್ದಾರೆ. ಭ್ರಷ್ಟಾಚಾರ ಮತ್ತು ದುರಾಡಳಿತ ಅವರ ಸಾಂವಿಧಾನಿಕ ಹಕ್ಕು ಎಂದು ಕಾಂಗ್ರೆಸ್ ಭಾವಿಸಿದಂತಿದೆ. ಅವರ ತಪ್ಪನ್ನು ಯಾರಾದರೂ ತೋರಿಸಿದರೆ ಅವರು ಈ ರೀತಿ ದುರ್ವರ್ತನೆ ತೋರುತ್ತಾರೆ. ಹೀಗಾಗಿಯೇ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.

ನಿನ್ನೆ ಮಹಾರಾಷ್ಟ್ರದ ಸೋಲಾಪುರದಲ್ಲಿ ಯುವಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗೃಹ ಸಚಿವ ಶಿಂಧೆ ಅವರು. ಕಳೆದ ನಾಲ್ಕು ತಿಂಗಳಿಂದ ಕೆಲ ಸುದ್ದಿವಾಹಿನಿಗಳು ಕಾಂಗ್ರೆಸ್ ವಿರೋಧಿ ವರದಿಗಳನ್ನು ಪ್ರಸಾರ ಮಾಡುತ್ತಿವೆ. ಇದಕ್ಕೆ ಯಾರು ಪ್ರೇರಣೆ ಎಂದು ನಮಗೆ ತಿಳಿದಿದೆ. ನಾನು ಕೂಡ ಗುಪ್ತಚರ ಇಲಾಖೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದೇನೆ. ಯಾರು ಏತಕ್ಕಾಗಿ ಇಂತಹ ಸುದ್ದಿಗಳನ್ನು ಬಿತ್ತರಿಸುತ್ತಿದ್ದಾರೆ ಎಂಬುದು ನಮಗೆ ತಿಳಿದಿದೆ. ಇಂತಹ ಸುದ್ದಿವಾಹಿನಿಗಳ ಮತ್ತು ಅವುಗಳ ಹಿಂದೆ ನಿಂತಿರುವ ಶಕ್ತಿಗಳ ಯತ್ನವನ್ನು ಪುಡಿಗಟ್ಟುತ್ತೇವೆ ಎಂದು ಶಿಂಧೆ ಹೇಳಿದ್ದರು.

ಕೇಂದ್ರ ಗೃಹ ಸಚಿವರ ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಪ್ರತಿಪಕ್ಷ ಬಿಜೆಪಿ ಶಿಂಧೆ ವಿರುದ್ಧ ತೀವ್ರ ಕಿಡಿಕಾರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.