ಈಗಿನ ಸುದ್ದಿ

ರಾಜನಾಥ್ ಸಿಂಗ್ ರಿಂದ ಸ್ಪಷ್ಟೀಕರಣ ಕೋರಿದ ಶಿವಸೇನೆ

ರಾಜನಾಥ್ ಸಿಂಗ್ ರಿಂದ ಸ್ಪಷ್ಟೀಕರಣ ಕೋರಿದ ಶಿವಸೇನೆ
Published On :

ನವದೆಹಲಿ: ಗುಜರಾತ್ ಕೋಮು ಗಲಭೆ ಕುರಿತು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ನೀಡಿದ್ದ ಹೇಳಿಕೆ ಕುರಿತು ಸ್ಪಷ್ಟೀಕರಣ ನೀಡಬೇಕು ಎಂದು ಶಿವಸೇನೆ ಹೇಳಿದೆ.

ಎನ್ಡಿಎ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿರುವ ಶಿವಸೇನೆ ರಾಜನಾಥ್ ಸಿಂಗ್ ಅವರು ತಮ್ಮ ಹೇಳಿಕೆ ರಾಮಮಂದಿರಕ್ಕೆ ಸಂಬಂಧಿಸಿದ್ದೇ ಅಥವಾ ಇತರೆ ಬೇರೆ ವಿಚಾರಗಳ ಕುರಿತಾಗಿದ್ದೇ ಎಂಬುದರ ಕುರಿತು ಸ್ಪಷ್ಟೀಕರಣ ನೀಡಬೇಕು ಎಂದು ಹೇಳಿದೆ.

ನಿನ್ನೆ ನವದೆಹಲಿಯಲ್ಲಿ ನಡೆದ ಮುಸ್ಲಿಂ ಸಮುದಾಯದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಜನಾಥ್ ಸಿಂಗ್ ಅವರು, 'ಕಾಂಗ್ರೆಸ್ ಮಾತುಗಳನ್ನು ನಂಬದಿರಿ. ನಮ್ಮ ವಿರುದ್ಧ ಬೇಕೆಂದೇ ಅವರು ಅಪಪ್ರಚಾರ ಮಾಡುತ್ತಿದ್ದಾರೆ. ಈ ಹಿಂದೆ ನಮ್ಮಿಂದೇನಾದರೂ ತಪ್ಪಾಗಿದ್ದರೆ ಅದಕ್ಕೆ ನಾವು ತಲೆಬಾಗಿ ಕ್ಷಮೆ ಕೋರಲು ಸಿದ್ಧ. ಲೋಕಸಭಾ ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸುವ ಮೂಲಕ ನಮಗೊಂದು ಅವಕಾಶ ನೀಡಿ. ನಿಮ್ಮ ನಿರೀಕ್ಷೆಗಳನ್ನು ನಾವು ತಲುಪಲು ವಿಫಲವಾದರೆ ಮತ್ತೆ ನಮಗೆ ಮತ ನೀಡಬೇಡಿ' ಎಂದು ಹೇಳಿದ್ದರು.

"ವೋಟ್ ಬ್ಯಾಂಕ್ ಗಾಗಿ ಮತ್ತು ಮುಸ್ಲಿಮರ ಓಲೈಕೆಗಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೇ ಮುಸ್ಲಿಂ ಸಮುದಾಯದ ಹತ್ಯೆ ಮಾಡಲು ಆದೇಶ ನೀಡಿದ್ದರು ಎಂದು ಅಪಪ್ರಚಾರ ನಡೆಸುತ್ತಿದೆ ಎಂದು ರಾಜನಾಥ್ ಸಿಂಗ್ ದೂರಿದರು.

'ಇದನ್ನು ಸಮುದಾಯದ ಮುಖಂಡರು ಗಮನಿಸಬೇಕು. ನ್ಯಾಯಾಲಯಗಳು ಕೂಡ ನರೇಂದ್ರ ಮೋದಿಗೆ ಕ್ಲೀನ್ ಚಿಟ್ ನೀಡಿವೆ. ಹೀಗಿದ್ದರೂ ಕಾಂಗ್ರೆಸ್ ಅವರ ಬಗ್ಗೆ ಅಪಪ್ರಚಾರ ನಡೆಸುತ್ತಿದೆ' ಎಂದು ದೂರಿದ್ದರು.

ರಾಜನಾಥ್ ಸಿಂಗ್ ಅವರ ಈ ಹೇಳಿಕೆಯನ್ನು ಟೀಕಿಸಿದ್ದ ಕಾಂಗ್ರೆಸ್ ಮುಸ್ಲಿಮರ ಓಲೈಕೆಯಿಂದ ಪ್ರಯೋಜನವಾಗದು. ಬಿಜೆಪಿಗೆ ಚುನಾವಣೆ ಬಂದಾಗ ಮಾತ್ರ ಮುಸ್ಲಿಮರ ನೆನಪಾಗುತ್ತದೆ. ಗುಜರಾತ್ ನಲ್ಲಿ ಯಾವೊಬ್ಬ ಮುಸ್ಲಿಂ ನಾಯಕರಿಗೂ ಬಿಜೆಪಿ ಟಿಕೆಟ್ ನೀಡಿಲ್ಲ ಎಂದು ಟೀಕಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.