ಚು.ಆಯೋಗದ ಪ್ರಸ್ತಾಪ ತಳ್ಳಿ ಹಾಕಿದ ಕೇಂದ್ರ: ಚುನಾವಣಾ ವೆಚ್ಚ ಏರಿಕೆ

ನವದೆಹಲಿ: ರಾಜಕಾರಣಿಗಳ ಚುನಾವಣಾ ವೆಚ್ಚವನ್ನು ಏರಿಕೆ ಮಾಡದಂತೆ ಕೇಂದ್ರ ಚುನಾವಣಾ ಆಯೋಗ ಸಲ್ಲಿಸಿದ್ದ ಪ್ರಸ್ತಾಪವನ್ನು ತಳ್ಳಿಹಾಕಿರುವ ಕೇಂದ್ರಸರ್ಕಾರ ಚುನಾವಣಾ ವೆಚ್ಚವನ್ನು ಏರಿಕೆ ಮಾಡಿದೆ.
ಲೋಕಭಾ ಚುನಾವಣೆಯ ವೆಚ್ಚವನ್ನು ಕನಿಷ್ಟ 54 ಲಕ್ಷದಿಂದ ಗರಿಷ್ಟ 70ಲಕ್ಷಕ್ಕೇರಿಸಿರುವ ಕೇಂದ್ರ ಸರ್ಕಾರ, ಚುನಾವಣಾ ಆಯೋಗದ ಪ್ರಸ್ತಾಪವನ್ನು ತಿರಸ್ಕರಿದೆ. ಕಳೆದ ಫೆಬ್ರವರಿ 17ರಂದು ಕೇಂದ್ರ ಕಾನೂನು ಇಲಾಖೆಗೆ ಪತ್ರವೊಂದನ್ನು ಬರೆದಿದ್ದ ಚುನಾವಣಾ ಆಯೋಗ, ಚುನಾವಣಾ ವೆಚ್ಚವನ್ನು ಗರಿಷ್ಟ 28 ಲಕ್ಷಕ್ಕೆ ಕನಿಷ್ಟ 20 ಲಕ್ಷಕ್ಕೆ ಮಿತಿಗೊಳಿಸುವಂತೆ ಕೋರಿತ್ತು. ಆದರೆ ಇಂದು ನವದೆಹಲಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಯೋಗದ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ.
ದೊಡ್ಡ ರಾಜ್ಯಗಳು ಅಂದರೆ ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಮಧ್ಯ ಪ್ರದೇಶ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಸ್ಪರ್ಧಿಗಳು ರ್ಯಾಲಿಗೆ ಬಳಸುವ ವಾಹನಗಳ ಖರ್ಚು, ಶ್ಯಾಮಿಯಾನ, ಕುರ್ಚಿಗಳು ಸೇರಿದಂತೆ ಬಹುತೇಕ ಎಲ್ಲ ಖರ್ಚುಗಳು ಸೇರಿ ಕನಿಷ್ಟ 40 ಲಕ್ಷದಿಂದ ಆರಂಭಿಸಿ ಗರಿಷ್ಟ 70 ಲಕ್ಷದ ವರೆಗೂ ಖರ್ಚು ಮಾಡಬಹುದಾಗಿದೆ. ಅಂತೆಯೇ ಸಣ್ಣ ರಾಜ್ಯಗಳಾದ ಗೋವಾ ಮತ್ತು ಪುದುಚೇರಿಯಂತಹ ರಾಜ್ಯಗಳಲ್ಲಿ ಸ್ಪರ್ಧಿಗಳು ಕನಿಷ್ಟ 22 ಲಕ್ಷದಿಂದ 54 ಲಕ್ಷದವರೆಗೂ ಖರ್ಚು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ದೆಹಲಿಯಂತಹ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಭ್ಯರ್ಥಿಗಳು ಕನಿಷ್ಟ 54 ಲಕ್ಷದಿಂದ 70 ಲಕ್ಷದವರೆಗೂ ವೆಚ್ಚ ಮಾಡಬಹುದಾಗಿದೆ. ಕಳೆದ ಬಾರಿಗೆ ಹೊಲಿಸಿದರೆ ಈ ಬಾರಿಯ ಅಭ್ಯರ್ಥಿಗಳ ವೆಚ್ಚ 1.75ರಷ್ಟು ಹೆಚ್ಚಳವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


