ಈಗಿನ ಸುದ್ದಿ

ಬ್ರಿಟನ್ ನಲ್ಲಿ ವಿಶ್ವದ ಅತಿ ಉದ್ದದ ವಿಮಾನ ಅನಾವರಣ

ಬ್ರಿಟನ್ ನಲ್ಲಿ ವಿಶ್ವದ ಅತಿ ಉದ್ದದ ವಿಮಾನ ಅನಾವರಣ
Published On :

ಲಂಡನ್: ವಿಶ್ವದ ಅತಿ ಉದ್ದದ ವಿಮಾನವನ್ನು ಬ್ರಿಟನ್ನಲ್ಲಿ ಶುಕ್ರವಾರ ಅನಾವರಣಗೊಳಿಸಲಾಗಿದೆ.

ಎಚ್‌ಎವಿ 304 ಎಂಬ ಈ ವಿಮಾನ ದೈತ್ಯವನ್ನು ಬ್ರಿಟನ್‌ನಲ್ಲಿ ಅನಾವರಣಗೊಳಿಸಲಾಗಿದೆ. ವಿಶ್ವದ ಅತಿ ಉದ್ದದ ವಿಮಾನ ಎಂಬ ಖ್ಯಾತಿಗೆ ಇದು ಪಾತ್ರವಾಗಿದೆ. ಸುಮಾರು 91 ಮೀಟರ್ ಉದ್ದದ ಈ ವಿಮಾನ ಗರಿಷ್ಟ 60 ಟನ್ ತೂಕಹೊರುವ ಸಾಮರ್ಥ್ಯ ಹೊಂದಿದೆ. ಸರಕು ಸಾಗಾಟ ವಿಮಾನಗಳಿಗಿಂತ ಶೇ.70 ರಷ್ಟು ಇದು ಹೆಚ್ಚು ಪರಿಸರ ಸ್ನೇಹಿ ವಿಮಾನವಾಗಿದೆ. ಈ ವಿಮಾನ ಟೇಕ್ ಆಫ್ ಆಗಲು ರನ್ ವೇ ಅಗತ್ಯವಿಲ್ಲ ಎಂದು ನಿರ್ಮಾಣ ಸಂಸ್ಥೆ ಹೇಳಿದೆ.

ಇದರ ವೈಶಿಷ್ಟ್ಯವೆಂದರೆ ಸತತ 3 ವಾರಗಳ ಕಾಲ ಈ ವಿಮಾನ ಆಗದಲ್ಲೇ ಇರುವ ಸಾಮರ್ಥ್ಯವನ್ನು ಹೊಂದಿದೆ. ಪರಿಹಾರ ಕಾರ್ಯಾಚರಣೆಗೆ ಈ ದೈತ್ಯ ವಿಮಾನ ನೆರವಾಗಬಲ್ಲದು ಎಂದು ಹೇಳಲಾಗುತ್ತಿದೆ.

ಪ್ರಸ್ತುತ ದೊಡ್ಡ ವಿಮಾನಗಳೆಂಬ ಕೀರ್ತಿಗೆ ಭಾಜನವಾಗಿರುವ ಡ್ರೀಮ್ ಲೈನರ್ ವಿಮಾನಗಳಿಗೆ ಹೋಲಿಸಿದರೆ ಈ ವಿಮಾನ ಗಾತ್ರದಲ್ಲಿ ಮತ್ತು ಉದ್ದದಲ್ಲಿ ಸಾಕಷ್ಟು ದೊಡ್ಡದಾಗಿದೆ. ಆರಂಭಿಕ ಹಂತದಲ್ಲಿ ಅಮೆರಿಕದ ಮಿಲಿಟರಿ ಅಧಿಕಾರಿಗಳು ಖರೀಧಿಸಿದ್ದ ಈ ವಿಮಾನವನ್ನು ಬ್ರಿಟೀಷ್ ಡೆವಲಪರ್ಸ್‌ಗಳು ಪುನರ್ ಖರೀದಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.