ಈಗಿನ ಸುದ್ದಿ

ದೇಶಕ್ಕಾಗಿ ಮಗನನ್ನು ಸಮರ್ಪಣೆ ಮಾಡದ ಸೋನಿಯಾ: ಮೋದಿ

Published On :

ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ದೇಶದ ಸೇವೆಗೆ ಮಗ ರಾಹುಲ್ ಗಾಂಧಿಯನ್ನು ಸಮರ್ಪಣೆ ಮಾಡಲಿಲ್ಲ ಎಂದು ಭಾರತೀಯ ಜನತಾ ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಅವರ ಹೆಸರನ್ನು ಘೋಷಿಸಲು ಸೋನಿಯಾ ಹಿಂದೇಟು ಹಾಕುತ್ತಿದ್ದಾರೆ. ಇದರಲ್ಲೇ ತಿಳಿಯುತ್ತದೆ ಸ್ವಾರ್ಥ ಯಾರದೆಂಬುದು. ದೇಶಕ್ಕಾಗಿ ಮಗ ಸೇವೆ ಮಾಡಲಿ ಎಂದು ಉತ್ತೇಜಿಸುವ ಬದಲು, ತಮ್ಮ ಸ್ವಾರ್ಥಕ್ಕಾಗಿ ರಾಹುಲ್ ಅವರನ್ನು ಪ್ರಧಾನಿ ಅಭ್ಯರ್ಥಿ ಆಯ್ಕೆಯಿಂದ ಹಿಂದೆ ಸರಿಸಿದ್ದಾರೆ.

ಏಕೆಂದರೆ ಸೋಲು ಖಚಿತ ಎಂದು ತಿಳಿದಿರುವ ಸೋನಿಯಾ, ಕಾಂಗ್ರೆಸ್ ಸೋಲಿಗೆ ತಮ್ಮ ಮಗ ಹೊಣೆಯಾಗಬಾರದು ಎಂಬ ಉದ್ದೇಶದಿಂದ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಹೆಸರನ್ನು ಘೋಷಿಸಿಲ್ಲ ಎಂದು ಮೋದಿ ಆಪಾದಿಸಿದ್ದಾರೆ.

ಭಾರತ ನೆಲದ ಮಹಿಳೆ ದೇಶಕ್ಕೆ ಶಕ್ತಿ. ಅಂತಹ ಮಹಿಳೆಯನ್ನು ಗೌರವಿಸಬೇಕು. ಮಹಿಳೆಗೆ ಉದ್ಯೋಗ ಅವಕಾಶಗಳು ಕೊಡಬೇಕು. ಮಹಿಳಾ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಸಮಾಜದಲ್ಲಿ ಅವರಿಗೆ ಸಮಾನ ಹಕ್ಕು ನೀಡಬೇಕು ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಕಾಂಗ್ರೆಸ್ ಹೇಳುತ್ತದೆ, ಯಾರು ಕಾಂಗ್ರೆಸ್‌ನ್ನು ಹೃದಯದಲ್ಲಿಟ್ಟು ಪೂಜಿಸುತ್ತಾರೋ ಅವರಿಗೆ ಟಿಕೆಟ್ ನೀಡುತ್ತೇವೆಂದು. ಆದರೆ ಬಿಜೆಪಿ ಹಾಗೆ ಮಾಡುವುದಿಲ್ಲ. ಯಾರು ತಮ್ಮ ಹೃದಯದಲ್ಲಿ ಭಾರತ ಮಾತೆಯನ್ನು ಪೂಜಿಸುತ್ತಾರೋ ಅಂತಹವರಿಗೆ ಟಿಕೆಟ್ ನೀಡುತ್ತೇವೆ ಎಂದು ಮೋದಿ ತಿಳಿಸಿದ್ದಾರೆ.

ಮಾದಕ ವಸ್ತುಗಳಿಂದ ಯುವಜನತೆಯನ್ನು ರಕ್ಷಿಸುವುದು ಅಗತ್ಯವಾಗಿದೆ. ಬಿಜೆಪಿ ಇದರಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿದೆ ಎಂದ ಮೋದಿ, ನಮಗೆ ಯುವಜನತೆ ಶಕ್ತಿ ಇದೆ. ಇದರಿಂದ ದೇಶವನ್ನೇ ಬದಲಿಸಬಹುದು. ದೇಶದ ಆರ್ಥಿಕತೆಯಲ್ಲಿ ಅಭಿವೃದ್ಧಿ ಕಾಣಬಹುದು ಎಂದು ಹೇಳಿದ್ದಾರೆ.

ದೇಶ ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣವು ಮುಖ್ಯವಾಗಿದೆ. ಬಡವರಿಗೆ ಉಚಿತ ಶಿಕ್ಷಣ ವ್ಯವಸ್ಥೆ ಕಲ್ಪಿಸಬೇಕು. ಪ್ರಾಥಮಿಕ ಶಿಕ್ಷಣ ಮಟ್ಟದಲ್ಲೇ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಮೋದಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.