ಧರಣಿ ಮಂತ್ರಿ ಮಂಡಲದೊಳಗೆ

ನವದೆಹಲಿ: ಭ್ರಷ್ಟ ಪೊಲೀಸರನ್ನು ಅಮಾನತ್ತು ಮಾಡುವಂತೆ ಆಗ್ರಹಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ರೈಲ್ ಭವನ್ ಹತ್ತಿರ ಧರಣಿ ನಡೆಸುತ್ತಿದ್ದಾರೆ.
ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರ ವಿರುದ್ದ ಇಂದು ಕೇಂದ್ರ ಗೃಹ ಸಚಿವಾಲಯದ ಎದುರು ಪ್ರತಿಭಟನೆ ನಡೆಸಲು ಕೇಜ್ರಿವಾಲ್ ಮುಂದಾಗಿದ್ದರು. ಆದರೆ ಗಣರಾಜ್ಯೋತ್ಸವದ ಪರೇಡ್ ಅಭ್ಯಾಸ ನಡೆಸುತ್ತಿರುವುದರಿಂದ ನಾರ್ಥ್ ಬ್ಲಾಕ್‌ನಲ್ಲಿ ನಿಷೇಧವೇರಲಾಗಿದ್ದು. ಈ ಹಿನ್ನೆಲೆಯಲ್ಲಿ ಗೃಹ ಸಚಿವಾಲಯದ ಎದುರು ಪ್ರತಿಭಟನೆಗೆ ಮುಂದಾಗದಂತೆ ಕೇಜ್ರಿವಾಲ್ ಅವರ ವಾಹನವನ್ನು ಪೊಲೀಸರು ರೈಲ್ ಭವನ್ ಹತ್ತಿರ ತಡೆದ ನಿಲ್ಲಿಸಿದ್ದಾರೆ. ಹೀಗಾಗಿ ಕೇಜ್ರೀವಾಲ್ ಅವರು ರೈಲ್ ಭವನ್ ಹತ್ತಿರವೇ ಧರಣಿ ನಿರತಾಗಿದ್ದಾರೆ.
ಧರಣಿ ನಿರತ ಸಿಎಂ ಕೇಜ್ರಿವಾಲ್ ಅವರು, ನಮ್ಮ ಬೇಡಿಕೆ ಈಡೇರುವವರಗೂ ನಾವು ಧರಣಿ ಕೈಬಿಡುವುದಿಲ್ಲ ಎಂದಿದ್ದಾರೆ. ಈ ಧರಣಿಯಲ್ಲಿ ಪಾಲ್ಗೊಂಡಿರುವ ಪಕ್ಷದ ಇತರ ಸಹೋದ್ಯೋಗಿಗಳು ಕೇಜ್ರಿವಾಲ್ ಅವರಿಗೆ ಸಾಥ್ ನೀಡಿದ್ದಾರೆ. ಅಲ್ಲದೆ ಎಎಪಿ ಪಕ್ಷದ ಅಪಾರ ಕಾರ್ಯಕರ್ತರು ಸ್ಥಳದಲ್ಲಿ ಬಿಡುಬಿಟ್ಟಿದ್ದು, 'ಹಿನ್ಖಿಲಾಬ್ ಜಿಂದಾಬಾದ್' ಎಂಬ ಘೋಷ ವಾಕ್ಯಗಳನ್ನು ಕೂಗುತ್ತಿದ್ದಾರೆ. ಹೀಗಾಗಿ ರೈಲ್ ಭವನ್ ಹತ್ತಿರ ಪ್ರತಿಭಟನೆಯ ಕಾವು ಜೋರಾಗಿದೆ.
ರೈಲ್ ಭವನ್‌ನ ಸಣ್ಣ ಆವರಣದಲ್ಲಿ ಕೇಜ್ರಿವಾಲ್ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಟ್ರಾಫಿಕ್ ಜಾರ್ಮ್ ನಿರ್ಮಾಣವಾಗಿದೆ. ಅಲ್ಲದೆ ಸುಮಾರು ನಾಲ್ಕು ಮೆಟ್ರೋ ರೈಲ್ವೇ ಸ್ಟೇಷನ್‌ಗಳು ಸ್ಥಬ್ಧಗೊಂಡಿದೆ.
ಅನಿರೀಕ್ಷಿತ ಧರಣಿ ಹಿನ್ನೆಲೆಯಲ್ಲಿ ರೈಲ್ ಭವನ್ ಮುಖ್ಯರಸ್ತೆಗಳು ಸಂಪೂರ್ಣ ಸ್ಥಬ್ಧಗೊಂಡಿದೆ. ಹೀಗಾಗಿ ಈ ಕೂಡಲೇ ಧರಣಿ ನಿಲ್ಲಿಸಿ, ಜಂತರ್ ಮಂತರ್‌ನಲ್ಲಿ ಧರಣಿ ನಡೆಸುವಂತೆ ಕೇಜ್ರಿವಾಲ್ ಅವರಿಗೆ ಪೊಲೀಸರು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


