ದೆಹಲಿ ಜನತೆಗಾಗಿ ಪ್ರಾಣ ಬಿಡಲು ಸಿದ್ಧ: ಸೋಮನಾಥ್ ಭಾರ್ತಿ

ನವದೆಹಲಿ: ದೆಹಲಿಯ ಜನತೆಗಾಗಿ ಆಮ್ ಆದ್ಮಿ ಪಕ್ಷ(ಎಎಪಿ) ನಿರಂತರವಾಗಿ ಹೋರಾಟ ನಡೆಸಲಿದ್ದು, ಈ ಹೋರಾಟದಲ್ಲಿ ತಮ್ಮ ಜೀವಕ್ಕೆ ತೊಂದರೆಯಾದರು ನಾವು ಹೆದರುವುದಿಲ್ಲ ಎಂದು ದೆಹಲಿ ಕಾನೂನು ಸಚಿವ ಸೋಮನಾಥ್ ಭಾರ್ತಿ ಅವರು ತಿಳಿಸಿದ್ದಾರೆ.
ಕಾನೂನು ಪರಿಪಾಲಕರಾಗಿರುವ ಪೊಲೀಸರು ಭ್ರಷ್ಟಾಚಾರದಲ್ಲಿ ತೊಡಿಗಿಕೊಂಡಿದ್ದಾರೆ. ಹೀಗಾಗಿ ಅರಾಜಕತೆಗೆ ಕುಮ್ಮಕ್ಕು ನೀಡುತ್ತಿರುವ ಪೊಲೀಸರನ್ನು ವಜಾಗೊಳಿಸುವಂತೆ ಎಎಪಿ ಧರಣಿ ನಡೆಸುತ್ತಿದ್ದು, ಈ ಹೋರಾಟದಲ್ಲಿ ನಮ್ಮ ಪ್ರಾಣಕ್ಕೆ ತೊಂದರೆಯಾದರು ನಾವು ಹೆದರುವುದಿಲ್ಲ. ಜನತೆಗಾಗಿ ಪಕ್ಷದ ಮುಖಂಡರು ನಿರಂತರವಾಗಿ ಹೋರಾಟ ನಡೆಸುತ್ತಾರೆ ಎಂದು ಸೋಮನಾಥ್ ಭಾರ್ತಿ ಹೇಳಿದ್ದಾರೆ.
ಈ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಮ್ಮ ಜೀವನವನ್ನೇ ಬೇಕಾದರು ಬಿಡುತ್ತೇವೆ. ಆದರೆ ದೆಹಲಿಯ ಜನತೆಯಗಾಗಿ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತಿರುತ್ತದೆ ಎಂದರು. ಅಲ್ಲದೆ ದೆಹಲಿ ಪೊಲೀಸರ ಕ್ರೂರ ವರ್ತನೆಯ ವಿರುದ್ಧ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿಯ ಅರಾಜಕತೆಯಿಂದ ದೆಹಲಿ ಜನತೆ ಅತೃಪ್ತಿ ಹೊಂದಿದ್ದಾರೆ. ಹೀಗಾಗಿ ಈ ಜನತೆಯ ಏಳಿಗೆಗಾಗಿ ಮತ್ತು ಸಾರ್ವಜನಿಕರ ಧ್ವನಿಯಾಗಿ ಎಎಪಿ ನಿಲ್ಲುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


