ಈಗಿನ ಸುದ್ದಿ

ಡಬ್ಬಿಂಗ್ ವಿರೋಧಕ್ಕೆ ತೊಂದರೆಯಾದರೆ ರಾಜಿನಾಮೆ: ಸಾ.ರಾ. ಗೋವಿಂದ್

Published On :

ಬೆಂಗಳೂರು: ಪರಭಾಷಾ ಚಿತ್ರಗಳ ಡಬ್ಬಿಂಗ್ ವಿರೋಧಿಸಿ ಕಲಾವಿದರ ತಂಡ ನೀಡಿರುವ ಬಂದ್‌ಗೆ ತೊಂದರೆಯಾದರೆ ವಾಣಿಜ್ಯ ಮಂಡಳಿಗೆ ರಾಜಿನಾಮೆ ನೀಡುವುದಾಗಿ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಸಾ.ರಾ. ಗೋವಿಂದ್ ಅವರು ಎಚ್ಚರಿಕೆ ನೀಡಿದ್ದಾರೆ.

ಪರಭಾಷಾ ಚಿತ್ರಗಳನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡುವ ಕುರಿತಾಗಿ ಕನ್ನಡ ಚಿತ್ರೋದ್ಯಮದಲ್ಲಿ ಭಿನ್ನಮತ ಶುರುವಾಗಿದ್ದು, ಡಬ್ಬಿಂಗ್ ವಿರೋಧಿಸಿ ಕಲಾವಿದರ ಸಂಘ ಜನವರಿ 27ಕ್ಕೆ ಬಂದ್ ಕರೆ ನೀಡಿದ್ದರೆ. ಅದಕ್ಕೆ ಚಲನಚಿತ್ರ ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರು ಭಾಗವಹಿಸುತ್ತಿಲ್ಲ. ಈ ಮೂಲಕ ಚಿತ್ರರಂಗದ ಕನ್ನಡ ಚಿತ್ರೋದ್ಯಮದ ಸಂಘಗಳಲ್ಲಿ ಒಮ್ಮತವಿಲ್ಲ ಎಂಬುದು ಬಹಿರಂಗವಾಗಿದೆ.

ಇಂದು ವಾಣಿಜ್ಯ ಮಂಡಳಿಯ ಅಧ್ಯಕ್ಷ ಹೆಚ್.ಡಿ. ಗಂಗರಾಜು ಅವರ ನೇತೃತ್ವದಲ್ಲಿ ನಡೆದ ವಾಣಿಜ್ಯ ಮಂಡಳಿಯ ಸಭೆಯಲ್ಲಿ, ಡಬ್ಬಿಂಗ್ ವಿರೋಧಿಸಿ ಕಲಾವಿದರು ನೀಡಿರುವ ಸಭೆಯಲ್ಲಿ ವಾಣಿಜ್ಯ ಮಂಡಳಿಯಿಂದ ಯಾರೂ ಭಾಗವಹಿಸಬಾರದು ಎಂಬ ಸೂಚನೆ ನೀಡಲಾಗಿದೆ. ಪರಭಾಷಾ ಚಿತ್ರಗಳ ಡಬ್ಬಿಂಗ್ ವಿವಾದ ನ್ಯಾಯಾಲಯದ ಮುಂದಿದೆ. ಹೀಗಾಗಿ ಬಂದ್‌ನಲ್ಲಿ ಯಾರು ಭಾಗವಹಿಸಬಾರದು ಎಂದು ತಿಳಿಸಿದ್ದಾರೆ.

ವಾಣಿಜ್ಯ ಮಂಡಳಿಯ ಸಭೆಯಲ್ಲಿ ನೀಡಲಾದ ಸೂಚನೆ ಮೇರೆಗೆ ಜ.27ರಂದು ನಡೆಯುವ ಡಬ್ಬಿಂಗ್ ವಿರೋಧಿ ಬಂದ್‌ಗೆ ತೊಂದರೆಯಾದರೆ ತಾವು ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ವಾಣಿಜ್ಯ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.