ಆಪ್ ನಿಂದ ಸಚಿವ ಸೋಮನಾಥ್ ದಾಳಿ ವಿಡಿಯೋ ಬಿಡುಗಡೆ

ನವದೆಹಲಿ: ಕಾನೂನು ಸಚಿವ ಸೋಮನಾಥ್ ಭಾರ್ತಿ ಅವರು ದೆಹಲಿಯ ಕರ್ಕಿಯಲ್ಲಿ ಮಧ್ಯರಾತ್ರಿ ನಡೆಸಿದ್ದ ದಿಢೀರ್ ದಾಳಿಯ ದೃಶ್ಯಾವಳಿಗಳನ್ನು ಆಮ್ ಆದ್ಮಿ ಪಕ್ಷ(ಆಪ್) ಶನಿವಾರ ಬಿಡುಗಡೆ ಮಾಡಿದೆ.
ಕರ್ಕಿಯಲ್ಲಿ ಉಗಾಂಡ ಮಹಿಳೆಯರ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಸೋಮನಾಥ್ ಭಾರ್ತಿ ಅವರ ಜೊತೆ ಮಹಿಳಾ ಪೊಲೀಸರು ಇರುವಂತಾ ವಿಡಿಯೊವೊಂದನ್ನು ಆಪ್ ಬಿಡುಗಡೆ ಮಾಡಿದ್ದು, ಸೋಮನಾಥ್ ಭಾರ್ತಿ ಅವರ ದಾಳಿಯನ್ನು ಆಪ್ ಸಮರ್ಥಿಸಿಕೊಂಡಿದೆ.
ದೆಹಲಿ ಪೊಲೀಸರ ವಿರುದ್ದ ಆಪ್ ನಿನ್ನೆಯೂ ಒಂದು ವಿಡಿಯೋವೊಂದನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ದೆಹಲಿ ಪೊಲೀಸರು ವ್ಯಕ್ತಿಯೋರ್ವನಿಗೆ ಥಳಿಸುತ್ತಿರುವ ದೃಶ್ಯಗಳನ್ನು ಒಳಗೊಂಡಿತ್ತು. ದೆಹಲಿ ಪೊಲೀಸರ ವಿರುದ್ಧ ಸಮರ ಸಾರಿರುವ ಆಪ್ ಇಲ್ಲಿಯವರೆಗೆ ಸುಮಾರು 8 ವಿಡಿಯೋಗಳನ್ನು ಬಿಡುಗಡೆ ಮಾಡಿದೆ.
ಮಧ್ಯರಾತ್ರಿಯಲ್ಲಿ ಉಗಾಂಡ ಮಹಿಳೆಯರ ಮೇಲಿನ ದಾಳಿಯಿಂದಾಗಿ ಸೋಮನಾಥ್ ಭಾರ್ತಿ ಅವರು ತೀವ್ರ ವಿವಾದಕ್ಕೀಡಾಗಿದ್ದರು. ಈ ಸಂಬಂಧ ಮಹಿಳಾ ಆಯೋಗ ಸಹ ಭಾರ್ತಿ ಅವರಿಗೆ ನೋಟಿಸ್ ಜಾರಿ ಮಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


