ಈಗಿನ ಸುದ್ದಿ

7,000 ವರ್ಷಗಳ ಹಿಂದೆಯಷ್ಟೇ ಯುರೋಪಿಯನ್ನರಿಗೆ ಬಿಳಿತ್ವಚೆ ಬಂದದ್ದು

Published On :

ಲಂಡನ್:  40,000 ವರ್ಷಗಳ ಹಿಂದೆಯೇ ಯುರೋಪಿಯನ್ನರು ಬಿಳಿ ತ್ವಚೆ ಹೊಂದಿದ್ದರು ಎಂಬ ವಾದವನ್ನು ಸಂಶೋಧಕರು ಈಗ ತಳ್ಳಿ ಹಾಕಿದ್ದಾರೆ . ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದರಲ್ಲಿ 7,000 ವರ್ಷಗಳ ಹಿಂದೆಯಷ್ಟೇ ಯುರೋಪಿಯನ್ನರು ಬಿಳಿ ತ್ವಚೆ ಹೊಂದಿದ್ದಾರೆ ಎಂದು ಸಂಶೋಧಕರು ಹೇಳಿದ್ದಾರೆ.

7,000 ವರ್ಷಗಳ ಹಿಂದೆ ಸ್ಪೇನ್ನಲ್ಲಿ ವಾಸವಾಗಿದ್ದ ಜನರಿಗೆ ಕಪ್ಪು ತ್ವಚೆ ಮತ್ತು ನೀಲಿ ಕಣ್ಣುಗಳಿದ್ದವು ಎಂಬುದು ಸಂಶೋಧಕರ ಅಂಬೋಣ.

ಆಫ್ರಿಕಾದೊಂದಿಗೆ ಹೋಲಿಸಿದರೆ ಯುರೋಪಿನ ಹವಾಮಾನಕ್ಕೆ ಹೊಂದುವುದಕ್ಕಾಗಿ ಜನರಿಗೆ ಬಿಳಿ ತ್ವಚೆ ಬಂದಿಲ್ಲ, ಬದಲಾಗಿ ಅಲ್ಲಿನ ಕೃಷಿಯಲ್ಲುಂಟಾದ ಕ್ರಾಂತಿಯೇ ಬಿಳಿ ತ್ವಚೆಗೆ ಕಾರಣ ಎಂದು ಸ್ಪೇನ್ನ ಪಂಪಾವು ಫಾಬ್ರಾ ವಿಶ್ವ ವಿದ್ಯಾನಿಲಯದ ಸಂಶೋಧಕರು ವಾದಿಸಿದ್ದಾರೆ.

ಮೇಲ್ಮಟ್ಟದ ಅಕ್ಷಾಂಶರೇಖೆಯಲ್ಲಿರುವ ಪ್ರದೇಶದಲ್ಲಿ ಬೀಳುವ ಅತಿನೇರಳೆ ಕಿರಣಗಳೊಂದಿಗೆ ವಿಟಾಮಿನ್ ಡಿ ಸಂಯೋಜನೆಗೊಂಡರೆ ಅಲ್ಲಿನ ಜನರು ಬಿಳಿ ತ್ವಚೆ ಹೊಂದುತ್ತಾರೆ ಎಂದು ಊಹಿಸಲಾಗುತ್ತಿತ್ತು. ಆದರೆ ಈಗಿನ ಸಂಶೋಧನೆಗಳಲ್ಲಿ ಪ್ರಕಾರ ಅಕ್ಷಾಂಶ ರೇಖೆಗಳು ಮಾತ್ರ ಬಿಳಿ ತ್ವಚೆ ಹೊಂದಲು ಕಾರಣವಲ್ಲ ಎಂದು ಹೇಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.