'ಮರುಭೂಮಿಯ ಹೂ' ಬಿಡುಗಡೆ

Published On :
ಡಾ. ಎನ್ ಜಗದೀಶ್ ಕೊಪ್ಪ ಅವರ ಪುಸ್ತಕ 'ಮರುಭೂಮಿಯ ಹೂ' ಹಲವಾರು ಗಣ್ಯರ ಸಮ್ಮುಖದಲ್ಲಿ ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು.
'ಮರುಭೂಮಿಯ ಹೂ' ಕಾದಂಬರಿ ೧೯೯೦ರ ದಶಕದಲ್ಲಿ ಜಾಹಿರಾತು ಜಗತ್ತಿನಲ್ಲಿ ರಾಣಿಯಂತೆ ಮೆರೆದ ವಾರಿಸ್ ಡೆರಿಸ್ಳ ಸಾಹಸಮಯ ಮತ್ತು ರೋಮಾಂಚನಕಾರಿ ಬದುಕಿನ ಕಥನ.
ಸಮಾರಂಭದಲ್ಲಿ ಪುಸ್ತಕದ ಕುರಿತು ಗಣ್ಯರು ಮಾತನಾಡಿದ್ದು ಇಲ್ಲಿದೆ:
ಇದು ಕನ್ನಡದ್ದೇ ಆದ, ಭಾರತದ, ಮೂರನೇ ಜಗತ್ತಿನ ಕೃತಿ. ಎಲ್ಲ ಭಾಷೆಗಳಿಗೆ ಸೇರಿದಂತ ಕೃತಿ. ಜಗದೀಶ್ ಕೊಪ್ಪ ಅವರ ಭಾಷಾ ಸಾಮರ್ಥ್ಯ, ಅನುವಾದದ ಸೊಗಸನ್ನು ಹೆಚ್ಚಿಸಿ ಸಂವೇದನೆಯುಳ್ಳ ಸೊಗಸಾದ ಪುಸ್ತಕವಾಗಿ ರೂಪುಗೊಂಡಿದೆ. ಈ ಪುಸ್ತಕ ಓದುಗರ ಪುಸ್ತಕ.
ಜಗತ್ತಿನ 85 ಭಾಷೆಗಳಿಗೆ ಅನುವಾದಗೊಂಡಿರುವ ಆಕೆಯ ಆತ್ಮಚರಿತ್ರೆಯಲ್ಲಿ ಅಕ್ಷರದಲ್ಲಿ ಹಿಡಿದಿಡಲು ಮುಜುಗರವಾಗುವಂತಹ ಅಪಮಾನ ಮತ್ತು ಅತ್ಯಾಚಾರದ ಘಟನೆಗಳಿವೆ.ಆಫ್ರಿಕಾದ ಸೋಮಾಲಿಯ ಬುಡಕಟ್ಟು ಜನಾಂಗದ ಕುಟುಂಬದಲ್ಲಿ ಜನಿಸಿ ಅನಕ್ಷರಸ್ಥೆಯಾಗಿ ಬೆಳೆದು ಮರುಭೂಮಿಯನ್ನು ದಾಟಿ ಪಾಶ್ಚಿಮಾತ್ಯ ಜಗತ್ತಿನಲ್ಲಿ ಬದುಕುಕಟ್ಟಿಕೊಂಡಿದ್ದು ಯಶಸ್ವೀ ಸಿನಿಮಾವೊಂದರ ಚಿತ್ರಕತೆಯಂತಿದೆ. ಆಫ್ರಿಕಾ ದೇಶಗಳಲ್ಲಿರುವ ಅಮಾನವೀಯ ಆಚರಣೆ ಕುರಿತು ವಾರಿಸ್ ದಾಖಲಿಸಿರುವ ಘಟನೆಗಳು ಮೈನಡುಗಿಸುವಂತಿವೆ. ಯಾವುದೇ ಸಂಕೋಚ, ಮುಜುಗರವಿಲ್ಲದೆ ತನ್ನ ಹೋರಾಟದ ಬದುಕನ್ನು ದಾಖಲಿಸಿರುವುದು ಆಕೆಯ ವಿಶೇಷ. ಈ ಕಾರಣಕ್ಕಾಗಿ ವಾರಿಸ್ ನಮಗೆ ಆಪ್ತವಾಗಿ ಬಿಡುತ್ತಾಳೆ. ಈ ಅನಾಮಿಕ ಹೆಣ್ಣು ಮಗಳ ಸಾಹಸಗಾಥೆ ಎಲ್ಲರ ಎದೆಯಲ್ಲಿ ಬಹುಕಾಲ ಉಳಿಯುವಂಥಹದ್ದು. ಇದು ಹೆಣ್ಣು ಮಕ್ಕಳಿಗೆ ಇಷ್ಟವಾಗುವ, ಗಂಡಸರ ಮನಕಲುಕುವ ಹಾಗು ಎಂತಹ ಮಡಿವಂತಿಕೆಯವರಿಗೂ ಅಶ್ಲೀಲವೆನಿಸದ ಅಪರೂಪದ ಆತ್ಮಕಥನ.
(
(
'ಮರುಭೂಮಿಯ ಹೂ' ಪುಸ್ತಕದ
ಬೆನ್ನುಡಿಯಲ್ಲಿ )
- ಲೇಖಕ
- ಲೇಖಕ
ಕಾದಂಬರಿಯ ಪ್ರತಿಗಾಗಿ ಸಂಪರ್ಕಿಸಿ: ಪ್ರಕಾಶಕ: ಮಂಜುಗೌಡ: 9141645102/ 9686535465
ಮರುಭೂಮಿಯ ಹೂ ಪುಸ್ತಕ ಬಿಡುಗಡೆ ಸಮಾರಂಭದ ಫೋಟೊಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮರುಭೂಮಿಯ ಹೂ ಪುಸ್ತಕ ಬಿಡುಗಡೆ ಸಮಾರಂಭದ ಫೋಟೊಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


