'ಮನೆ ಮನೆಗೂ ಆಮ್ ಆದ್ಮಿ'
ಆಮ್ ಆದ್ಮಿ ಪಕ್ಷದ ಕರ್ನಾಟಕ ಘಟಕವು ಫೆಬ್ರವರಿ ಮೊದಲನೇ ವಾರದಿಂದ "ಮನೆ ಮನೆಯಲ್ಲಿ ಆಮ್ ಆದ್ಮಿ ,ಮನೆ ಮನೆಗೂ ಆಮ್ ಆದ್ಮಿ" ಎಂಬ ಜನ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನವು ಕರ್ನಾಟಕದ ಜನಸಾಮಾನ್ಯರ ಪರಸ್ಪರ ವಿಚಾರ ವಿನಿಮಯಕ್ಕೆ ಗಮನೀಕೃತವಾಗಿರುತ್ತದೆ.
ಅಭಿಯಾನವು ಫೆಬ್ರವರಿ ಮೊದಲನೇ ವಾರದಿಂದ ಲೋಕಸಭೆ ಚುನಾವಣೆ ಮುಗಿಯುವವರೆಗೂ ನಿರಂತರ ನೆಡೆಯುತ್ತದೆ. ಈ ಜನಸ್ಪಂದನಾ ಅಭಿಯಾನವು ಈ ಕೆಳಗಿನ ಅಂಶಗಳನ್ನು ಪ್ರಧಾನವಾಗಿರಿಸಿಕೊಂಡಿರುತ್ತದೆ,
*ಜನರಲ್ಲಿ ಆಮ್ ಆದ್ಮಿ ಪಕ್ಷವು ಅಳವಡಿಸಿಕೊಂಡಿರುವ ಸಿದ್ಧಾಂತ ಹಾಗೂ ನೈತಿಕ ರಾಜಕಾರಣದ ಬಗ್ಗೆ ಅರಿವು ಮೂಡಿಸುವದು
*ಕರ್ನಾಟಕದ ಪ್ರತಿಯೊಂದು ಮನೆ ಮನೆಯಲ್ಲಿಯೂ ಕಾರ್ಯಕರ್ತರನ್ನು ಗುರುತಿಸಿಕೊಳ್ಳುವುದು
*ಕರ್ನಾಟಕದ ಪ್ರತಿಯೊಬ್ಬ ಜನಸಾಮಾನ್ಯನ ಕುಂದುಕೊರತೆಗಳನ್ನು ಅರಿತುಕೊಳ್ಳುವುದು
ಆಮ್ ಆದ್ಮಿ ಪಕ್ಷವು ನಮ್ಮ ಈ ಪ್ರಜಾತಂತ್ರದ ಸಮಸ್ತ ನಾಗರಿಕ ಬಂಧುಗಳಿಗೆ ಒಂದು ಉತ್ತಮ ಪಾರದರ್ಶಕವಾದ ದೂರದೃಷ್ಟಿಯುಳ್ಳ ಹಾಗೂ ಸ್ಥಿರವಾದ ಆಡಳಿತವನ್ನು ನೀಡುವ ಭರವಸೆ ಕೊಡುತ್ತದೆ. ಈಗಾಗಲೇ ದೆಹಲಿಯ ಜನತೆ ಡಿಸೆಂಬರ್ 2013ರಲ್ಲಿ ನೆಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಕಡೆಗೆ ಅತೀವ ಆಸಕ್ತಿ ತೋರಿಸಿ ನಿಷ್ಟೆ ಹಾಗೂ ಸಹಕಾರದಿಂದ ನಮ್ಮ ಪಕ್ಷದೊಂದಿಗೆ ತಮ್ಮನ್ನು ತಾವು ಗುರುತಿಸಿಕೊಂಡಿರುತ್ತಾರೆ.
ಆಮ್ ಆದ್ಮಿ ಪಕ್ಷವು ಕರ್ನಾಟಕದಲ್ಲಿಯೂ ಕೂಡ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ತನ್ನ ಚುನಾವಣಾ ಪ್ರಚಾರವನ್ನು ಮನೆ ಮನೆಗೂ ವಿಸ್ತರಿಸಿ,ಪಕ್ಷದ ಬೆಂಬಲ ವಾಪ್ತಿಯನ್ನು ಬಲಪಡಿಸಿಕೊಳ್ಳಲು ಈ ಅಭಿಯಾನವನ್ನು ಹಮ್ಮಿಕೊಂಡಿದೆ.
ಆಮ್ ಆದ್ಮಿ ಪಕ್ಷವು ಸದಾ ಜನಸಾಮಾನ್ಯರ ಹಕ್ಕುಗಳಿಗಾಗಿ ಹಾಗೂ ಅವರ ಹಿತರಕ್ಷಣೆಗಳಿಗಾಗಿ ಹೋರಾಟ ನೆಡೆಸುವ ಪಕ್ಷವಾಗಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಒಂದು ಬದಲಾವಣೆಯ ಮಹಾಪರ್ವಕ್ಕೆ ದಿಕ್ಸೂಚಿಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

