ಈಗಿನ ಸುದ್ದಿ

ಸರ್ಕಾರಿ ಆರೋಗ್ಯ ಯೋಜನೆ ಎಲ್ಲಾ ಆಸ್ಪತ್ರೆಗೂ ವಿಸ್ತರಿಸಿ

ಸರ್ಕಾರಿ ಆರೋಗ್ಯ ಯೋಜನೆ ಎಲ್ಲಾ ಆಸ್ಪತ್ರೆಗೂ ವಿಸ್ತರಿಸಿ
ಡಾ.ಬಿ.ಎಸ್. ಅಜಯ್ ಕುಮಾರ್
Published On :

ಬೆಂಗಳೂರು: ಸರ್ಕಾರಿ ಆರೋಗ್ಯ ಯೋಜನೆಗಳನ್ನು ಎಲ್ಲಾ ಖಾಸಗಿ ಆಸ್ಪತ್ರೆಗಳಿಗೂ ವಿಸ್ತರಿಸಬೇಕು ಎಂದು¸ ಕರ್ನಾಟಕ ಪ್ರೈವೇಟ್ ಹಾಸ್ಪಿಟಲ್ ಫೋರಮ್
(IMA,PHANA, AHPI, KPMEA ಹಾಗೂ ಇತರೆ
ಸ್ಪೆಶಾಲಿಟಿ ಸಂಘಗಳ ಹಾಗೂ ವೈದ್ಯರ ಸಮೂಹ) ಒತ್ತಾಯಿಸಿವೆ.

ಈ ಸಂಬಂಧ ಇಂದು ನಗರದಲ್ಲಿ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಪತ್ರಿಕಾಗೋಷ್ಠಿ ಕರೆದಿತ್ತು. ಗೋಷ್ಠಿಯಲ್ಲಿ ಡಾ.ಬಿ.ಎಸ್. ಅಜಯ್ ಕುಮಾರ್ ಹಾಗೂ ಡಾ.ಎನ್.ಕೆ.ವೆಂಕಟರಮಣ ಸೇರಿದಂತೆ ಹಲವು ವೈದ್ಯರು ಉಪಸ್ಥಿತರಿದ್ದರು.

ಸರಕಾರಿ ಆರೋಗ್ಯ ಯೋಜನೆಗಳು
1) ಯಶಸ್ವಿನಿ, ಆರೋಗ್ಯಶ್ರೀ ಹಾಗೂ ಇತರೆ ಸರ್ಕಾರಿ ಯೋಜನೆಗಳನ್ನು ಅದೇ ಕುಟುಂಬಗಳಿಗೆ ಅವೇ ಶಸ್ತ್ರಚಿಕಿತ್ಸೆಗಳಿಗೆ ಚಿಕಿತ್ಸೆಯ ಅವಕಾಶಗಳನ್ನು ಪದೇ ಪದೇ ಕಲ್ಪಿಸಲಾಗುತ್ತಿದೆ.

2)    ಈ ಎಲ್ಲ ಯೋಜನೆಗಳಡಿ ನಿಧರ್ಿಷ್ಟವಾದ ಶಸ್ತ್ರಚಿಕಿತ್ಸೆಗಳಿಗೆ, ನಿದರ್ಿಷ್ಟವಾದ ಆಸ್ಪತ್ರೆಗಳಲ್ಲಿ, ನಿಧರ್ಿಷ್ಟ ಮೊತ್ತಕ್ಕೆ ಚಿಕಿತ್ಸೆಯ ಅವಕಾಶ ಮಾಡಿಕೊಡಲಾಗುತ್ತಿದೆ. ಶೇ 95ರಷ್ಟು (ಔಷಧೋಪಚಾರದಿಂದ ಶಸ್ತ್ರಚಿಕಿತ್ಸೆಯ ಅವಶ್ಯವಿಲ್ಲದ) ರೋಗಗಳಿಗೆ ಕುಟುಂಬಗಳಿಗೆ ಈ ಯೋಜನೆಗಳಡಿ ಯಾವುದೇ ಸಹಾಯವಿಲ್ಲದೇ ಅವರು ತಮ್ಮ ಕೈಯಲ್ಲಿ ಹಣ ಸಂದಾಯ ಮಾಡಿ ಚಿಕಿತ್ಸೆ ಪಡೆಯಬೇಕು. ಹೀಗಾಗಿ ಈ ಯೋಜನೆಗಳು ಬರೀ ಶೇ 3ರಿಂದ 5ರಷ್ಟು ಸಮಸ್ಯೆಗಳಿಗೆ ಸಹಾಯಕವಾಗಿರುತ್ತದೆ.

3)    ಯಶಸ್ವಿನಿ, ಆರೋಗ್ಯಶ್ರೀ ಹಾಗೂ ಇತರೆ ಸಕರ್ಾರಿ ಯೋಜನೆಗಳಡಿ ರೋಗಿಗಳಿಗೆ ಚಿಕಿತ್ಸೆ ಒದಗಿಸುತ್ತಿರುವ ಆಸ್ಪತ್ರೆಗಳ ಸಮಸ್ಯೆಗಳನ್ನು ತೋಡಿಕೊಳ್ಳಲು ಈ ಯೋಜನೆಗಳಡಿ ಯಾವುದೇ ವ್ಯವಸ್ಥೆ ಇರುವುದಿಲ್ಲ್ಲ. 11 ವರ್ಷಗಳ ಹಿಂದೆ ಈ ಯೋಜನೆಗಳನ್ನು ಸಕರ್ಾರ ಹುಟ್ಟುಹಾಕಿದಾಗ, ನಮಗೆ ಬಡವರು ಹಾಗೂ ಕಡುಬಡವರನ್ನು ಚಿಕಿತ್ಸೆ ನೀಡಿ ಸೇವೆ ಮಾಡಲು ಒಂದು ಅವಕಾಶ ಒದಗಿಬಂದಿತ್ತು. ಶಸ್ತ್ರಚಿಕಿತ್ಸೆಗಳಿಗೆ ಸಕರ್ಾರವು ಕೊಡುವ ಹಣವು ಚಿಕಿತ್ಸೆಯ ಖಚರ್ಿಗಿಂತಲೂ ಕಡಿಮೆ ಇದ್ದಾಗ್ಯೂ ಆಸ್ಪತ್ರೆಗಳು ಖಾಸಗಿ ರೋಗಿಗಳ ಸೇವೆಯಿಂದ ಉಳಿಯುವ ದುಡ್ಡಿನಲ್ಲಿ ರೋಗಿಗಳ ಸೇವೆಯನ್ನು ಸಮರ್ಪಕವಾಗಿ ಮಾಡಿಕೊಂಡು ಬರುತ್ತಿದ್ದವು. ಮೊದಲು ಈ ಯೋಜನೆಗಳಡಿ ಚಿಕಿತ್ಸೆ ಪಡೆಯುವ ರೋಗಿಗಳು ಕಡಿಮೆಯಿದ್ದು, ಖಾಸಗಿಯಾಗಿ ಹಣಕೊಟ್ಟು ಚಿಕಿತ್ಸೆ ಪಡೆಯುವ ರೋಗಿಗಳು ಹೆಚ್ಚಿದ್ದರು ಹೀಗಾಗಿ ಆಸ್ಪತ್ರೆಗಳ ಆಥರ್ಿಕ ಸಮತೋಲನವನ್ನು ಕಾಪಾಡಿಕೊಂಡು ಹೋಗಲು ಅವಕಾಶವಿತ್ತು.

4)    ಸಮಯ ಕಳೆದಂತೆ, ದುಡ್ಡಿರುವ ಶ್ರೀಮಂತರೂ ಕೂಡ, ಬಡವರು ಮತ್ತು ಕಡುಬಡವರ ಸಲುವಾಗಿ ಇದ್ದಂತಹ ಈ ಯೋಜನೆಗಳ ಲಾಭವನ್ನು ದಾಖಲೆಗಳನ್ನು ಸೃಷ್ಟಿಸಿಕೊಂಡು ಪಡೆಯಲು ಶುರುಮಾಡಿರುತ್ತಾರೆ ಹಾಗೂ ಈ ಪ್ರಕ್ರಿಯೆಯನ್ನು ತಡೆಯಲು ಎಲ್ಲ ಪ್ರಯತ್ನಗಳು ವಿಫಲವಾಗಿವೆ.

 ಉದಾಹರಣೆಗೆ ಸೂತ್ರಗಳ ಅನ್ವಯ,  ರಾಜ್ಯದ 80% ಜನರ ಹತ್ತಿರ ಬಿ.ಪಿ.ಎಲ್ ಅಥವಾ ಅಂತ್ಯೋದಯ ಕಾಡರ್ುಗಳು ಇರುತ್ತವೆ. 
ಕರ್ನಾಟಕದಲ್ಲಿ ಒಟ್ಟು ಕುಟುಂಬಗಳಿಗಿಂತಲೂ ಸುಮಾರು 30 ಲಕ್ಷ ಹೆಚ್ಚುವರಿ ಪಡಿತರ ಚೀಟಿಗಳಿರುತ್ತವೆ.  
 
5)    ಒಂದು ಕಡೆ ದುಡ್ಡಿದ್ದವರೆಲ್ಲರೂ ಈ ಯೋಜನೆಗಳಡಿ ಲಾಭ ಪಡೆಯಲು ಮುಂದಾಗಿ ಕಾಡರ್ುಗಳನ್ನು ಪಡೆಯುತ್ತಿದ್ದು, ಇನ್ನೊಂದು ಕಡೆ ಸಕರ್ಾರವು ಯಶಸ್ವಿನಿ ಯೋಜನೆಯಡಿ ಕಳೆದ 11 ವರ್ಷಗಳಿಂದಲೂ ಹಾಗೂ ಆರೋಗ್ಯಶ್ರೀ ಯೋಜನೆಯಡಿ ಕಳೆದ 3 ವರ್ಷಗಳಿಂದ ಚಿಕಿತ್ಸೆಗೆ ಕೊಡುವ ಪ್ಯಾಕೇಜ ಮೊತ್ತದಲ್ಲಿ ಬದಲಾವಣೆ ಮಾಡಿರದೆ ಇಟ್ಟಿದೆ. 11 ವರ್ಷಗಳಲ್ಲಿ ಆಸ್ಪತ್ರೆಗಳನ್ನು ನೆಡೆಸುವ ಖಚರ್ು, ಕೆಲಸಗಾರರ ವೇತನ, ಆಸ್ಪತ್ರೆಗಳು ಕೊಳ್ಳುವ ಸಲಕರಣೆಗಳ/ಉಪಯುಕ್ತ ವಸ್ತುಗಳ ಬೆಲೆ ಹತ್ತಾರು ಪಟ್ಟು ಹೆಚ್ಚಾಗಿರುತ್ತದೆ ಈ ಕಾರಣಗಳಿಂದ ಕನರ್ಾಟಕದಲ್ಲಿ ಆಸ್ಪತ್ರೆಗಳು ಅತೀವ ಆಥರ್ಿಕ ತೊಂದರೆಗೆ ಒಳಗಾಗಿವೆ. ಹೀಗಾಗಿ ಇನ್ನು ಮುಂದೆ ಪ್ರಸಕ್ತ ಹಾಗೂ ಭವಿಷ್ಯದಲ್ಲಿ ಅನುಷ್ಠಾನವಾಗುವ ಸರಕಾರಿ ಯೋಜನೆಗಳಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಕೈಜೋಡಿಸುವುದು ಹೇಗೆ ಎಂಬ ಮಂಥನ ಪ್ರಾರಂಭವಾಗಿದೆ.

ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟವು ಈ ನಿಟ್ಟಿನಲ್ಲಿ ಗಂಭೀರವಾದ ದೃಷ್ಠಿ ಹಾಕಿ ವೈಜ್ಞಾನಿಕ ರೀತಯಲ್ಲಿ ಈ ಯೋಜನೆಗಳನ್ನು ಮರುಪರಿಶೀಲಿಸಿ ರೂಪಿಸಿದಲ್ಲಿ ಎಲ್ಲ ಆಸ್ಪತ್ರೆಗಳು ಸ್ವಯಂಪ್ರೇರಿತವಾಗಿ ಈ ಯೋಜನೆಗಳಲ್ಲಿ ಭಾಗವಹಿಸಿ ಕರ್ನಾಟಕದ ಆರೋಗ್ಯ ಯೋಜನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಿ ಇವುಗಳ ಯಶಸ್ಸಿಗೆ ಕಾರಣಿಭೂತರಾಗಲು ಹಾತೊರೆಯುವಂತಾಗಬೇಕು ಎಂದು ಮಾಧ್ಯಮಗಳ ಮೂಲಕ ನಮ್ಮ ಕಳಕಳಿಯ ನಿವೇದನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.