ಸಿಎಜಿ ವರದಿಯಿಂದ ವಿದ್ಯುತ್ ಕಂಪನಿಗಳ ಬಣ್ಣ ಬಯಲು: ಕೇಜ್ರಿವಾಲ್

ನವದೆಹಲಿ: ಹಣದ ಕೊರತೆ ಕಾರಣ ನೀಡಿ ದೆಹಲಿಯಲ್ಲಿ ವಿದ್ಯುತ್ ದರ ಏರಿಕೆ ಮಾಡಿರುವ ವಿದ್ಯುತ್ ಕಂಪನಿಗಳ ವಿರುದ್ಧ ಕಿಡಿಕಾರಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಕಂಪನಿಗಳು ಗಳಿಸುವ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಸಿಎಜಿ ಅಡಿಟ್ ವರದಿಯಿಂದ ಕಂಪನಿಗಳ ಬಣ್ಣ ಬಯಲಾಗಲಿದೆ ಎಂದಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯುತ್ ಕಂಪನಿಗಳು ಹಣದ ಕೊರೆತೆಯಿದೆ ಎಂದು ಹೇಳುತ್ತಿವೆ. ಆದರೆ ಇಲ್ಲಿಯವರೆಗೆ ಗಳಿಸಿದ ಹಣ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ. ಕಂಪನಿಗಳು ಗಳಿಸಿದ ಹಣವೆಲ್ಲ ಎಲ್ಲಿ ಹೋಗಿದೆ ಎಂಬುದು ಸಿಎಜಿ ಆಡಿಟ್ ವರಿದಿಯಿಂದ ಬಯಲಾಗಲಿದೆ. ಅಲ್ಲಿಯವರೆಗೆ ಕಾಯಿರಿ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಹಣದ ಕೊರತೆಯಿದೆ ಎಂದು ವಿದ್ಯುತ್ ಕಂಪನಿಗಳು ಬೊಬ್ಬೆ ಹೊಡೆಯುತ್ತಿವೆ. ಆದರೆ ಇಲ್ಲಿಯವರೆಗೂ ಗಳಿಸಿರುವ ದುಡ್ಡು ಎಲ್ಲಿದೆ. ಆ ಹಣ ಎಲ್ಲಿ ಹೋಯಿತೆಂದು ಕಂಪನಿಗಳೆ ಉತ್ತರಿಸಬೇಕು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ನಿನ್ನೆ ದೆಹಲಿ ವಿದ್ಯುತ್ ನಿಯಂತ್ರಣ ಪ್ರಾಧಿಕಾರ(ಡಿಇಆರ್ಸಿ) ವಿದ್ಯುತ್ ಸರ್ಚಾರ್ಜ್ ದರವನ್ನು ಮೂರು ವಿತರಣಾ ಕಂಪನಿಗಳಿಗೆ ಹೆಚ್ಚಿಸಿದ್ದು, ಇಂದಿನಿಂದ ದೆಹಲಿ ನಾಗರಿಕರು ಶೇ.6ರಿಂದ 8 ರಷ್ಟು ಹೆಚ್ಚುವರಿಯಾಗಿ ವಿದ್ಯುತ್ ದರ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.
ಬಿಎಸ್ಇಎಎಸ್ ಯಮುನಾ ಪವರ್ ಲಿಮಿಟೆಡ್(ಬಿವೈಪಿಎಲ್), ಬಿಎಸ್ಇಎಸ್ ರಾಜಧಾನಿ ಪವರ್ ಲಿಮಿಟೆಡ್(ಬಿಆರ್ಪಿಎಲ್) ಹಾಗೂ ನಾರ್ತ್ಡೆಲ್ಲಿ ಪವರ್ ಲಿಮಿಟೆಡ್(ಎನ್ಡಿಪಿಎಲ್) ಕಂಪನಿಗಳ ಸರ್ಚಾರ್ಜ್ ದರವನ್ನು ಡಿಇಆರ್ಸಿ ಹೆಚ್ಚಿಸಿತ್ತು. ಈ ನಿಗದಿತ ದರ ಮುಂದಿನ ಮೂರು ತಿಂಗಳ ಕಾಲ ಅಂದರೆ ಫೆ.1ರಿಂದ ಮೇ 1ರವರೆಗೆ ಅನ್ವಯಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


