ಕರ್ನಾಟಕ ಸಂಗೀತ ಹೆಚ್ಚು ಪ್ರಸಿದ್ಧ: ರಾಜೇಂದ್ರನ್
ಬೆಂಗಳೂರು: ಎಲ್ಲಾ ಸಂಗೀತಕ್ಕಿಂತಲೂ ಕರ್ನಾಟಕ ಸಂಗೀತ ಹೆಚ್ಚು ಪ್ರಸಿದ್ಧ ಎಂದು ತಮಿಳು ನಿರ್ದೇಶಕ ಹಾಗೂ ನಟ ಟಿ.ರಾಜೇಂದ್ರನ್ ಅವರು ಹೇಳಿದ್ದಾರೆ.
ನಗರದಲ್ಲಿ ನಡೆದ 'ರಾಜ್ ಬಹದ್ದೂರ್' ಚಿತ್ರದ ಸಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡದ ರಾಜೇಂದ್ರನ್, ಕನ್ನಡ ಜನತೆಗೆ ಶುಭಾಶಯಗಳು. ಕನ್ನಡ ಕಲಿಯೋ ಆಸೆ ಇದ್ದು, ಇನ್ನು ಒಂದುವರೆ ತಿಂಗಳಲ್ಲಿ ಕನ್ನಡವನ್ನು ಕಲಿತು ಸುಲಲಿತವಾಗಿ ಮಾತನಾಡುತ್ತೇನೆ ಎಂದರು.
ತಾಯಿ ಚಾಮುಂಡೇಶ್ವರಿ ಶಾರದಾಂಬೆ ಹಾಗೂ ಕೊಲ್ಲೂರು ಮುಕಾಂಬಿಕ ಆಶಿರ್ವಾದಿಂದ ಕನ್ನಡದಲ್ಲೂ ಸಿನಿಮಾ ನಿರ್ಮಿಸುವೆ. ಎಲ್ಲಾ ಸಂಗೀತಕ್ಕಿಂತಲೂ ಕರ್ನಾಟಕ ಸಂಗೀತ ವಿಶ್ವ ಪ್ರಸಿದ್ಧವಾಗಿದೆ. ಸಂಗೀತಕ್ಕೆ ಭಾಷೆಯಿಲ್ಲ. ಕನ್ನಡ ಸಿನಿಮಾದಲ್ಲಿ ಹಾಡಿರುವುದು ಸಂತೋಷ ತಂದಿದೆ ಎಂದರು.
ಪವರ್ ಸ್ಟಾರ್ ಪುನಿತ್ ರಾಜ್ಕುಮಾರ್ ಹಾಗೂ ಶ್ರೀಶೃತಿ ಅಭಿನಯದ ರಾಜ್ ಬಹದ್ದೂರ್ ಚಿತ್ರದ ಒಂದು ಐಟಂ ಹಾಡಿನಲ್ಲಿ ಅನಿತಾ ಭಟ್ ಕಾಣಿಸಿಕೊಂಡಿದ್ದಾರೆ. ಜೀವನ್ ಕೃಪಾ ಮತ್ತು ರಘುಚರಣ್ ಅವರು ಜಂಟಿಯಾಗಿ ನಾಲ್ಕು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ.
ಸಮಾರಂಭದಲ್ಲಿ ರಾಜೇಶ್, ರಾಗಿಣಿ, ಶೃತಿ, ಸಾಹಿತಿ ದೊಡ್ಡರಂಗೇಗೌಡ, ಲಹರಿ ವೇಲು, ಶಾಸಕ ಶಂಕರಮೂರ್ತಿ ಅವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

