ರಂಗಶಂಕರದಲ್ಲಿ 'ಶ್ರದ್ಧ ಮತ್ತು ಸ್ಟೇನ್ ಲೆಸ್ ಸ್ಟೀಲ್ ಪಾತ್ರೆಗಳು'

ಬೆಂಗಳೂರು: ತಂದೆ ಮತ್ತು ತಾಯಿ ಇಬ್ಬರನ್ನೂ ದೇವರೆಂದು ನಂಬಿ, ಜೀವನ ನಡೆಸುತ್ತಿರುವ ಮಂದಿಗೆ ಬಹಳ ಹತ್ತಿರ ವಾಗುವ ನಾಟಕ "ಶ್ರದ್ಧ ಮತ್ತು ಸ್ಟೇನ್ ಲೆಸ್ ಸ್ಟೀಲ್ ಪಾತ್ರೆಗಳು". ಜೀವನ ದಲ್ಲಿ ತಂದೆ ತಾಯಿಯೊಂದಿಗೆ ಬರುವ ಹಾಸ್ಯದ ಸನ್ನಿವೇಷಗಳು, ಕೊನೆ ಕೊನೆಗೆ ನಮ್ಮ ಮನಸ್ಸನ್ನು ಎಷ್ಟು ಕೆಣಕುತ್ತವೆ. ಎಷ್ಟು ಕಾಡುತ್ತವೆ. ಅವರಿಬ್ಬರ ಗೈರುಹಾಜರಿ ನಮ್ಮ ಜೀವನದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ. ದಿನೇ ದಿನೇ ಬೆಳೆಯುತ್ತಿರುವ ನಗರದ ಜೀವನ, ಮೆಟ್ರೋ ಲೈಫ್ ಸ್ಟೈಲ್ ಗಳು ನಮ್ಮನ್ನು ಎಷ್ಟು ದೂರ ಎಳೆದುಕೊಂಡು ಹೋಗಿ ಕೊನೆಇಲ್ಲದ ಕೊನೆಗೆ ಸೇರಿಸುತ್ತಿದೆ. ಎಲ್ಲರಿಂದಲೂ ದೂರವಾಗಿ ಕಡೆಗೆ ತಂದೆ ತಾಯಿ ಯಿಂದಲೂ ದೂರವಾಗುವ ಆತಂಕದಲ್ಲಿ ಮನುಷ್ಯ ಬದುಕುತ್ತಿದ್ದಾನೆ.
ಗಡಸು ಸ್ವಭಾವ, ಕೋಪಿಷ್ಠ, ಬಹಳ ಶಿಸ್ತು ಎನ್ನುವ ಪದಗಳೇ ಅಪ್ಪನನ್ನು ಪ್ರತಿಬಿಂಬಿಸುವುದು ಸಹಜ ಆದರೆ ಅದರ ಹಿಂದೊಂದು ಪ್ರೀತಿಸುವ ಮನಸಿದೆ, ಆಶಿಸುವ ಹೃದಯವಿದೆ, ಪ್ರೋತ್ಸಾಹಿಸುವ ಶ್ರೀಮಂತಿಕೆ ಇದೆ ಎನ್ನುವುದು ಅರಿಯದೆ ಹೋಗಿದ್ದೇವೆ. ಚಳಿಯಿರಲಿ, ಮಳೆಯಿರಲಿ, ಸುಡುವ ಬಿಸಿಲೆ ಇರಲಿ ನಮ್ಮನ್ನು ರಕ್ಷಿಸುವ ಅಪ್ಪನ ಆ ಔದಾರ್ಯತೆ ನಮ್ಮನ್ನು ಸೋಕಿದಾಗ ಅವರ ತ್ಯಾಗದ ಮುಂದೆ ನಾವು ಕುಬ್ಜರಾಗಿಬಿಡುತ್ತೇವೆ.
ಮಡದಿಯಾಗಿ ಹೊಸ ಮನೆ ಸೇರುವ ಹೆಣ್ಣು, ಆ ಮನೆಯ ಸೊಸೆಯಾಗಿ ಬೆಳಗುವ ನಂದಾದೀಪವಾಗಿ, ಅಮ್ಮನಾಗಿ, ಅಜ್ಜಿಯಾಗಿ ಆಯಾ ಪಾತ್ರಗಳಿಗೆ ಒಗ್ಗಿಕೊಳ್ಳುವಂತೆ ಅವಳ ಸುತ್ತ ಹುಟ್ಟಿ ನಿಲ್ಲುವ ಸಮಸ್ಯೆಗಳನ್ನು ಎದೆ ಗುಂದದೆ ಹೇಗೆ ನಿಭಾಯಿಸುತ್ತಾಳೆ. ಫಳ ಫಳ ಹೊಳೆಯುವ ಪಾತ್ರೆಗಳಲ್ಲಿ ತನ್ನ ಬದುಕಿನ ಸಾರ್ಥಕತೆ ಕಂಡುಕೊಳ್ಳುವ ಅಮ್ಮ ತಾನಿರಲಿ ಬಿಡಲಿ ನಮ್ಮ ಮನದಲ್ಲಿ ನಮ್ಮೊಂದಿಗೆ ಸದಾ ಇರುತ್ತಾಳೆ.
ಮೌಲ್ಯಗಳ ಮರೆತಿರುವ ಈ ಕಾಲದಲ್ಲಿ ಈ ರಂಗ ಪ್ರಯೋಗ ಸ್ವಾಗತಾರ್ಹ, ವಸುಧೇಂದ್ರ ಅವರ ಸ್ಟೇನ್ ಲೆಸ್ ಸ್ಟೀಲ್ ಪಾತ್ರೆ ಹಾಗು ಶ್ರೀನಿವಾಸ್ ವೈದ್ಯರ ಶ್ರದ್ಧಾ. ತಾಯಿ ತಂದೆ ಇಬ್ಬರು ಕಣ್ಣಿಗೆ ಕಾಣುವ ದೇವರು ಎನ್ನುವ ಹಿರಿಯರ ನಾಣ್ಣುಡಿಯು ಆಧುನಿಕತೆಗೆ ಸಿಲುಕಿ ಬದಲಾಗಿದೆ, ತಂದೆ, ತಾಯಿಯನ್ನು ಮೂಲೆಗುಂಪಾಗಿಸಿ ರಜ ಸಿಕ್ಕಾಗಲೆಲ್ಲ ದೇವರನ್ನು ಹುಡುಕುತ್ತ ಊರು ಕೇರಿಯಾದಿಗೆ ಹುಡುಕುತ್ತಾ ಸಾಗಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


