ಈಗಿನ ಸುದ್ದಿ

2014 ಚುನಾವಣೆ ಯಾಕೆ 'ವಿಭಿನ್ನ' ಎನಿಸಲಿದೆ?

2014 ಚುನಾವಣೆ ಯಾಕೆ 'ವಿಭಿನ್ನ' ಎನಿಸಲಿದೆ?
Published On :

ನವದೆಹಲಿ: ಏಪ್ರಿಲ್ 7ರಿಂದ ಮೇ 12ರ ವರೆಗೆ ನಡೆಯಲಿರುವ ಲೋಕಸಭಾ ಚುನಾವಣೆ-2014 ಹಲವಾರು ವಿಷಯಗಳಲ್ಲಿ ವಿಭಿನ್ನವೆನಿಸಲಿದೆ. ಈ ಬಾರಿಯ ಚುನಾವಣೆ ಹೇಗೆ ವಿಭಿನ್ನ ಎಂಬುದಕ್ಕೆ 5 ಕಾರಣಗಳು ಇಲ್ಲಿವೆ

1. ಇದೇ ಮೊತ್ತ ಮೊದಲ ಬಾರಿಗೆ ಚುನಾವಣಾ ಆಯೋಗವು ಪಕ್ಷಗಳ ಖರ್ಚು ವೆಚ್ಚಗಳ ಬಗ್ಗೆ ಹೆಚ್ಚು ನಿಗಾವಹಿಸಲಿದ್ದು, ಹಣದ ಅಧಿಕಾರಕ್ಕೆ ಲಗಾಮು ಹಾಕಲಿದೆ. ಸಮಸ್ಯಾಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ನಿಯೋಜಿಸಲಾಗುವುದು .


2. ಈ ಬಾರಿ ಚುನಾವಣಾ ಆಯೋಗ ಮತದಾರರು ವೋಟಿಂಗ್ ಮೆಷೀನ್ನಲ್ಲಿ ಗುಂಡಿ ಒತ್ತಿ  ಮತದಾನ ಮಾಡುವಾಗ ಪೇಪರ್ವೊಂದರಲ್ಲಿ ಪಕ್ಷದ ಅಭ್ಯರ್ಥಿಯ ಹೆಸರು ಮತ್ತು ಚಿಹ್ನೆ ಪ್ರದರ್ಶಿತವಾಗಲಿದೆ.


3. ಇದೇ ಮೊದಲ ಬಾರಿಗೆ ಮತದಾರರು ಯಾರಿಗೂ ಮತ ನೀಡಲು ಇಚ್ಛಿಸದೇ ಇದ್ದರೆ ಮೇಲಿನದ್ದು ಯಾವುದೂ ಅಲ್ಲ "None of the Above" (NOTA) ಎಂಬ ಆಯ್ಕೆಯ ಗುಂಡಿ ಒತ್ತಬಹುದಾಗಿದೆ. ಈ ಆಯ್ಕೆ ಬಟನ್ ಕಳೆದ ಡಿಸೆಂಬರ್ನಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಬಳಸಲಾಗಿತ್ತು.

4. ಈ ಬಾರಿ ಮತದಾನ ಕೇಂದ್ರಕ್ಕೆ ಕೊಂಡೊಯ್ಯುವ ಮತದಾರರ ಚೀಟಿಯಲ್ಲಿ ಮತದಾರರ ಭಾವಚಿತ್ರವೂ ಇರುತ್ತದೆ.

5. 2009ರ ಚುನಾವಣೆಯ ನಂತರ ಈ ಬಾರಿ 100 ಮಿಲಿಯನ್ ಮತದಾರರು ಮತದಾನ ಮಾಡಲಿದ್ದಾರೆ. ದೇಶಾದ್ಯಂತ 9,30,000ಕ್ಕಿಂತಲೂ ಹೆಚ್ಚು ಮತದಾನ ಕೇಂದ್ರಗಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.