ಈಗಿನ ಸುದ್ದಿ

ಏಷ್ಯಾ ಕಪ್: ಭಾರತಕ್ಕೆ 160 ರನ್ ಗುರಿ

ಏಷ್ಯಾ ಕಪ್: ಭಾರತಕ್ಕೆ 160 ರನ್ ಗುರಿ
Published On :

ಮೀರ್‌ಪುರ್: ಏಷ್ಯಾಕಪ್ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಭಾರತಕ್ಕೆ 160 ರನ್‌ಗಳ ಗುರಿಯನ್ನಿರಿಸಿದೆ. ಟಾಸ್‌ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.

ಏಷ್ಯಾಕಪ್ ಫೈನಲ್ ಪಂದ್ಯ ಶ್ರೀಲಂಕಾ ಮತ್ತು ಪಾಕ್ ನಡುವೆ ನಡೆಯಲಿದ್ದು, ಈ ಪಂದ್ಯ ಭಾರತದ ಪಾಲಿಗೆ ಇದು ಔಪಚಾರಿಕ ಕದನವಾಗಿದೆ.

ದುರ್ಬಲ ಅಫ್ಘಾನ್ ತಂಡದ ವಿರುದ್ಧ ಭಾರತದ ಬೌಲರ್‌ಗಳು ಬುಧವಾರ ಉತ್ತಮ ಪ್ರದರ್ಶನ ನೀಡಿದ್ದು, ಪ್ರಸ್ತುತ ತಂಡಕ್ಕೆ 159 ರನ್ ಗಳಿಸಲಷ್ಟೇ ಸಾಧ್ಯವಾಗಿದೆ.

ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು 30 ರನ್ ನೀಡಿ 4 ವಿಕೆಟ್ ಕಬಳಿಸಿದ್ದರೆ, ಆಫ್ ಸ್ಪಿನ್ನರ್ ಆರ್ ಅಶ್ವಿನ್  31 ರನ್ ನೀಡಿ 3 ವಿಕೆಟ್ ಗಳಿಸಿಕೊಂಡಿದ್ದಾರೆ.

ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಅಫ್ಘಾನ್‌ಗೆ 45.2 ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 159 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಅಫ್ಘಾನ್ ಟೀಂನಲ್ಲಿ ಸಮೀವುಲ್ಲಾ ಶೆನ್ವಾರಿ ಅರ್ಧ ಶತಕಗಳಿದ್ದು, ನೂರ್ ಅಲಿ ಜದಾನ್ 31 ಹಾಗು ಮೊಹಮ್ಮದ್ ಶಹಜಾದ್ 22 ರನ್ ಗಳಿಸಿದ್ದಾರೆ.

ಅಫ್ಘಾನ್‌ನ 160 ರನ್‌ಗಳ ಬೆನ್ನತ್ತಿ ಬ್ಯಾಟಿಂಗ್‌ಗೆ ಇಳಿದಿರುವ ಭಾರತ ಭರ್ಜರಿಯಾಗಿಯೇ ರನ್ ಬೇಟೆ ಆರಂಭಿಸಿದೆ.

ಆರಂಭಿಕ ದಾಂಡಿಗರಾಗಿ ಕಣಕ್ಕಿಳಿದಿರುವ ಶಿಖರ್ ಧವನ್ (28) ಹಾಗು ಅಜೆಂಕ್ಯ ರೆಹಾನೆ (26) ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಇದೀಗ ಭಾರತ 15ನೇ ಓವರ್‌ನಲ್ಲಿ 63 ರನ್‌ಗಳನ್ನು ಗಳಿಸಿಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.